ಕರಾವಳಿ

ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಶಾಲಾ ಅಧ್ಯಾಪಿಕೆ..!!!

ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣದ ಮಾಜಿ ಡಿವೈಎಫ್ ಐ ನೇತಾರೆ ಬಾಡೂರು ಎಎಲ್ಪಿ ಶಾಲೆ ಅಧ್ಯಾಪಿಕೆ ಶೇಣಿ ಬಲ್ಕಕಲ್ಲುವಿನ ಸಚಿತಾ ರೈ ವಿರುದ್ದ ಮಹಿಳೆಯೊಬ್ಬರು ಉಪ್ಪಿನಂಗಡಿ ಠಾಣೆಯಲ್ಲೂ ವಂಚನೆ ದೂರು ನೀಡಿದ್ದಾರೆ.

ಮಹಿಳೆಯ ಕೊಲೆ ಯತ್ನ, ಗಂಭೀರ!!

ಕಲ್ಲರ್ಪೆಯ ಜಯಭಾರತಿ (56) ಅವರು ಮನೆಯಲ್ಲಿ ಶನಿವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಬಾವ ಶಂಕರ ಅವರು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಟ್ವಾಳ: ಶಾಲಾ ಬಸ್ ಚಾಲಕನಿಗೆ ಮೂರ್ಚೆ ರೋಗ! ವಿದ್ಯುತ್ ಕಂಬಕ್ಕೆ ಡಿಕ್ಕಿ!!

ಬಂಟ್ವಾಳ: ಇಲ್ಲಿನ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್ ಚಾಲಕನಿಗೆ ಮೂರ್ಚೆ ರೋಗ ( ಪಿಡ್ಸ್) ಉಂಟಾಗಿ ಬಸ್ ವಿದ್ಯುತ್ ‌ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಅ.14ರಂದು ಬೆಳಿಗ್ಗೆ ನಡೆದಿದೆ.

ಯಕ್ಷಗಾನ ಅರ್ಥಧಾರಿ ಗುಡ್ಡಪ್ಪ ಬಲ್ಯ ಅವರಿಗೆ ಸನ್ಮಾನ

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ಸೌಹಾರ್ದ ಯಕ್ಷಗಾನ ಸಮಿತಿ  ಸಹಯೋಗದಲ್ಲಿ   ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿದ 30ನೇ ವರ್ಷದ ಶ್ರೀ ಶಾರದೋತ್ಸವ  ಕಾರ್ಯಕ್ರಮದಲ್ಲಿ ಉಪನ್ಯಾಸಕ, ಯಕ್ಷಗಾನ ಅರ್ಥಧಾರಿ ಗುಡ್ಡಪ್ಪ ಬಲ್ಯರನ್ನು ಸನ್ಮಾನಿಸಲಾಯಿತು.  

ಗೌರಿ ಲಂಕೇಶ್ ಹಂತಕರಿಗೆ ಜಾಮೀನು! ಸನ್ಮಾನಿಸಿ,ಗೌರವಿಸಿದ ಸಂಘಟನೆಗಳು!!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಡವೆಗೆ ವಿಶೇಷ ನ್ಯಾಯಾಲಯ ಅಕ್ಟೋಬರ್ 9ರಂದು ಜಾಮೀನು ನೀಡಿದ್ದು ಜೈಲಿನಿಂದ ಹೊರಬಂದ ಆರೋಪಿಗಳಿಗೆ ಹಿಂದೂಪರ ಸಂಘಟನೆಗಳು ಸನ್ಮಾನಿಸಿದೆ.

ಟ್ಯಾಂಕ್ ಫುಲ್ ಪೆಟ್ರೋಲ್ ತುಂಬಿಸಿ ಪರಾರಿಯಾದ ಕಾರು!!

ಕಾರ್ಕಳ ತಾಲೂಕು ಕಚೇರಿ ಜಂಕ್ಷನ್ ಬಳಿ ಬೈಪಾಸ್‌ ರಸ್ತೆಯಲ್ಲಿಯಿರುವ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ಅಸಾಮಿಯನ್ನು ಪತ್ತೆಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುದ್ರೋಳಿ ದಸರಾ ಸಂಭ್ರಮ: ಇಂದು ಬೃಹತ್‌ ಶೋಭಾಯಾತ್ರೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಚರಿಸಲಾಗುತ್ತಿರುವ “ಮಂಗಳೂರು ದಸರಾ’ ಸಂಭ್ರಮದ ಬೃಹತ್‌ ಶೋಭಾಯಾತ್ರೆ ಅ.13ರಂದು ಸಂಜೆ 4 ಗಂಟೆಗೆ ಆರಂಭವಾಗಿ ಅ.14ರ ಮುಂಜಾನೆ ಶಾರದೆಯ ಜಲಸ್ತಂಭನದ ಮೂಲಕ ಸಮಾಪನಗೊಳ್ಳಲಿದೆ.

ರುಡ್ ಸೆಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ

ಉಜಿರೆಯಲ್ಲಿರುವ ರುಡ್‌ ಸೆಟ್ ಸಂಸ್ಥೆಯಲ್ಲಿ ನ.5ರಿಂದ ಡಿ.4ರ ವರೆಗೆ ಮೂವತ್ತು ದಿನಗಳ ಉಚಿತ ಕಂಪ್ಯೂಟ‌ರ್ ಟ್ಯಾಲಿ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿಯು ಪ್ರತಿ ದಿನ ಬೆಳಿಗ್ಗೆ 9.30ರಿಂದ ಸಾಯಂಕಾಲ 6.00ರವರೆಗೆ ನಡೆಯುತ್ತದೆ.

ಹೀಗೇ ಆಚರಿಸಿ ಗಣೇಶ ಚೌತಿ | ಧ್ವನಿವರ್ಧಕ, ವಿಗ್ರಹ ಪ್ರತಿಷ್ಠೆ ಬಗ್ಗೆಯೂ ಜಿಲ್ಲಾಡಳಿತ ನೀಡಿದೆ ಆದೇಶ!

ಪುತ್ತೂರು : ಈ ವರ್ಷದ ಗೌರಿ ಗಣೇಶ ಹಬ್ಬವನ್ನು ಸಾರ್ವಜನಿಕರು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ದ.ಕ. ಜಿಲ್ಲಾಡಳಿತ ಸೂಚಿಸಿದೆ.