ಕರಾವಳಿ

ಉಡುಪಿ: ಸಿಟಿಬಸ್ ಚಾಲಕನ ಸಂಶಯಾಸ್ಪದ ಸಾವು: ತನಿಖೆಗೆ ಆಗ್ರಹ!

ಮಲ್ಪೆ ಪೋಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀನಗರದ ಪಾಳೆಕಟ್ಟೆ ನಿವಾಸಿ ಪ್ರಸಾದ್ (40)ರವರ ಸಾವು ಹಲವು ಸಂಶಯಕ್ಕೆ ಎಡೆಮಾಡಿದ್ದು ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.

ಸಾಲ್ಮರ: ಮೃತ ಕೂಲಿ ಕಾರ್ಮಿಕನನ್ನು ರಸ್ತೆ ಬದಿ ಮಲಗಿಸಿ ಹೋದ ಪ್ರಕರಣ: ಮೂವರ ವಿರುದ್ಧ ಪ್ರಕರಣ  ದಾಖಲು.!

ಮೇಸ್ತ್ರೀ ಸಹಾಯಕರಾಗಿ ಕೆಲಸಕ್ಕೆ ಹೋಗುತ್ತಿದ್ದ ಸಾಲ್ಮರ ಕೆರೆಮೂಲೆ ನಿವಾಸಿ ಶಿವಪ್ಪ ಅವರು ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೆಲಸ ಮಾಡಿಸಿಕೊಂಡ ಮಾಲಕರ ಸಹಿತ ಮೂವರ ವಿರುದ್ದ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಮಹಡಿಯಿಂದ ಬಿದ್ದ ವಿದ್ಯಾರ್ಥಿನಿ ಫಾತಿಮತ್ ನಿಶ್ಮಾ ನಿಧನ!

ಕಲ್ಲಾರೆಯ ಕಟ್ಟಡದ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮತ್ ನಿಶ್ಚಾ (17) ಅವರು ನ. 17ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಉಳ್ಳಾಲ: 3 ಯುವತಿಯರನ್ನು ಬಲಿ‌ ಪಡೆದ ಸ್ವಿಮ್ಮಿಂಗ್ ಪೂಲ್!!

ಖಾಸಗಿ ರೆಸಾರ್ಟ್ ವೊಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರದಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್…

ಬಂಟ್ವಾಳ: ಮಂಚಿ - ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆಸಲು ಉದ್ದೇಶಿಸಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ‘ಎಳೆಯರ ಗೆಳೆಯ ಮುಳಿಯ’ ಎಂದೇ ಪ್ರಸಿದ್ಧರಾಗಿರುವ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಅವರನ್ನು ಆಯ್ಕೆಗೊಳಿಸಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ…

ಸಬ್ ರಿಜಿಸ್ಟ್ರಾರ್ ಕಚೇರಿಯ ತಾಂತ್ರಿಕ ದೋಷ, ಇ-ಖಾತೆ ಲೋಪ! ಕಂದಾಯ ಸಚಿವರನ್ನು ಭೇಟಿಯಾಗಿ ಸಮಸ್ಯೆ…

ಸಬ್‌ರಿಜಿಸ್ಟ್ರರ್ ಕಚೇರಿಯಲ್ಲಿನ ತಾಂತ್ರಿಕ ದೋಷ ಮತ್ತು ಇ ಖಾತೆಯಲ್ಲಿನ ಲೋಪವನ್ನು ಸರಿಪಡಿಸುವಲ್ಲಿ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಮಾಡಿದ್ದಾರೆ.

13 ವರ್ಷಗಳ ಹಿಂದಿನ ಪ್ರಕರಣ: ಲಾರಿ ಚಾಲಕನಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್!!

ಮರದ ತುಂಡುಗಳನ್ನು ಲೋಡ್ ಮಾಡುತ್ತಿದ್ದ ವೇಳೆ ಚಾಲಕ ಏಕಾಏಕಿ ಲಾರಿ ಚಲಾಯಿಸಿದ ಪರಿಣಾಮ ಮರದ ತುಂಡು ಬಿದ್ದು ವ್ಯಕ್ತಿಯೋರ್ವನ ಸಾವಿಗೆ ಕಾರಣನಾದ ಚಾಲಕನಿಗೆ ಪುತ್ತೂರು ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಆಂಜನೇಯ ಯಕ್ಷಗಾನ  ಕಲಾಸಂಘದ ವಾರ್ಷಿಕೋತ್ಸವ  ಸಿದ್ಧತಾ ಸಭೆ 

ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸೇವಾ ಸಂಘದ 56ನೇ ವಾರ್ಷಿಕೋತ್ಸವ ಮತ್ತು ಆಂಜನೇಯ ಮಹಿಳಾ ಯಕ್ಷಗಾನ ಸಂಘದ 20ನೇ ವರ್ಷಾಚರಣೆಯನ್ನು ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಡಿಸೆಂಬರ್ 25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಆಚರಿಸಲು  ಸಿದ್ಧತಾ ಸಭೆಯು ಪುತ್ತೂರು ಪರ್ಲಡ್ಕ…