ಅಪರಾಧ

ಮುಲ್ಕಿ: ಮನೆ ಪೂರ್ತಿಗೊಳಿಸದ ಮುಲ್ಕಿಯ ಸ್ಕೈ ಲೈನ್ ಗುತ್ತಿಗೆದಾರರಿಗೆ ₹2.47 ಲಕ್ಷ ದಂಡ!

ಮುಲ್ಕಿ ಕಾರ್ನಾಡ್ ನಿವಾಸಿ ಎಂ.ಬಿ. ಖಾನ್ ಮನೆ ಕಟ್ಟಿಕೊಡುವಂತೆ ಸ್ಕೈ ಲೈನ್ ಅಸೋಸಿಯೇಟ್ಸ್ ನ ಸಾದಿಕ್ ಅಲಿ ಅವರ ಜೊತೆ 2022ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆ ಒಪ್ಪಂದದ ಪ್ರಕಾರ ದೂರುದಾರ 1,441 ಚ.ಅಡಿ ಮನೆ ಕಟ್ಟಿಕೊಡಲು ರೂ. 20 ಲಕ್ಷ  ಹಣ ಗುತ್ತಿಗೆದಾರನಿಗೆ ಕೊಡುವ ಕರಾರು ಇತ್ತು. ದೂರುದಾರ 14.50ಲಕ್ಷ…

ವಿಟ್ಲ: ಸ್ವಿಫ್ಟ್ ಕಾರ್ ನಲ್ಲಿ ಬಂದು ಬಟ್ಟೆ ದೋಚಿದ ನವೀನ್ ಬಗಂಬಿಲ ಪೊಲೀಸ್ ವಶಕ್ಕೆ| ಇನ್ನುಳಿದ ಮೂವರಿಗೆ…

ಡ್ರೆಸ್ ಶಾಪ್ ನಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ನವೀನ್  ಬಗಂಬಿಲ ಮತ್ತು ಇತರ ಮೂರು ಜನ ಏಕಾಏಕಿ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಬೆದರಿಸಿ ಅಂಗಡಿಯಲ್ಲಿದ್ದ ಬಟ್ಟೆ  ಮತ್ತು ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ನಿನ್ನೆ ಮಾ. 18 ರಂದು ನಡೆದಿತ್ತು. ಈ ಬಗ್ಗೆ ವಿಟ್ಲ…

ಕೊಲೆ ಯತ್ನ ಪ್ರಕರಣದ ಆರೋಪಿಗಳು ದೋಷ ಮುಕ್ತ

ಕಳೆದ 9 ವರ್ಷಗಳ ಹಿಂದೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಬ್ಬರನ್ನು ಪುತ್ತೂರಿನ ನ್ಯಾಯಾಲಯ ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.

ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಜೆಸಿಬಿ! ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಇಬ್ಬರು ಮಹಿಳೆಯರು…

ರಸ್ತೆ ಕಾಮಗಾರಿ ವೇಳೆ ವಿದ್ಯುತ್‌ ಕಂಬಕ್ಕೆ ಜೆಸಿಬಿ ಡಿಕ್ಕಿಯಾಗಿ ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೈಯ್ಯಪ್ಪನಹಳ್ಳಿ ಬಳಿಯ ಸದ್ದುಗುಂಟೆಪಾಳ್ಯದಲ್ಲಿ ನಡೆದಿದೆ.

ಭೂಗತ ಪಾತಕಿ ಕಲಿ ಯೋಗೀಶನ ಸಹಚರ ನಂತೂರಿನಲ್ಲಿ ಬಂಧನ! ಪುತ್ತೂರಿನ ರಾಜಧಾನಿ ಜ್ಯುವೆಲ್ಲರ್ಸ್ ಶೂಟೌಟ್…

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧನ ಮಾಡಿದ್ದು, ಆತನ ಬಳಿಯಿದ್ದ ನಿಷೇಧಿತ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ

ಬಂಟ್ವಾಳ: ಯುವ ನ್ಯಾಯವಾದಿ ಮೃತ್ಯು; ಅಂಗಾಂಗ ದಾನ ಮಾಡಿದ ಕುಟುಂಬ

ಬಿ.ಸಿ.ರೋಡಿನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಥಮ್ ಬಂಗೇರ (27) ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಸ್ತೆ ಅಪಘಾತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯ ಪುತ್ರಿ ಸಾವು!

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರ ಮಗಳು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಶುಕ್ರವಾರ (ಮಾ.14) ನಡೆದಿದೆ.

ಚಿತೆ ತೋರಿಸಿದ ‘ಓದಿನ ಚಿಂತೆ’! ಮಕ್ಕಳನ್ನು ಭೀಕರವಾಗಿ ಕೊಲೆಗೈದು, ಆತ್ಮಹತ್ಯೆಗೈದ ತಂದೆ!!

ಓದಿನಲ್ಲಿ ಮಕ್ಕಳು ಹಿಂದುಳಿದಿದ್ದಾರೆ ಎನ್ನುವ ಕಾರಣಕ್ಕೆ ತಂದೆಯೋರ್ವ ತನ್ನ ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ