ಅಪರಾಧ

ಸುಳ್ಳು ಮಾಹಿತಿಯ ನಕಲಿ ಪೋಸ್ಟರ್: ದೂರು ದಾಖಲು

ಪುತ್ತೂರು: ಕಳೆದ ಬಾರಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಸುಳ್ಳು ಮಾಹಿತಿ ಇರುವ ನಕಲಿ ಪೋಸ್ಟರ್ ಗಳನ್ನು ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ…

ತೆಂಗಿನಎಣ್ಣೆ ಮಿಲ್ ನಲ್ಲಿ ಬೆಂಕಿ ಅವಘಡ!

ಕೊಕ್ಕರ್ಣೆ ಪೇಟೆಯಲ್ಲಿ ತೆಂಗಿನ ಎಣ್ಣೆ ಮಿಲ್ ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ನಷ್ಟ ಉಂಟಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಫ್ಯಾಕ್ಟರಿಯಲ್ಲಿ ದಾಸ್ತಾನು ಇರಿಸಿದ ತೆಂಗಿನಎಣ್ಣೆ ಮತ್ತು ಕೊಬ್ಬರಿ…

ಲೋಕಾಯುಕ್ತ ಇನ್ಸ್ ಪೆಕ್ಟರ್ ಸಜೀವ ದಹನ.!

ಧಾರವಾಡ: ಕಾರು ಅಪಘಾತದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಸಜೀವ ದಹನವಾದ ಆಘಾತಕಾರಿ ಘಟನೆ ನಡೆದಿದೆ. ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರ ವಲಯದಲ್ಲಿ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಪರಿಣಾಮ ಲೋಕಾಯುಕ್ತ ಇನ್ಸ್ ಪೆಕ್ಟರ್ ಸಜೀವ ದಹನವಾಗಿದ್ದಾರೆ. ಹಾವೇರಿ ಲೋಕಾಯುಕ್ತ…

ಕಬಕ: ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ಕುಖ್ಯಾತ ಆರೋಪಿ ಬಂಧನ!!

ಪುತ್ತೂರು: ಕಬಕ ಗ್ರಾಮದ ಮುರ ರೈಲ್ವೇ ಬ್ರಿಡ್ಜ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಬಂಧಿತ. ರೈಲ್ವೇ ಬ್ರಿಡ್ಜ್ ಬಳಿಯಿದ್ದ ಆರೋಪಿಯನ್ನು ವಿಚಾರಿಸುವಾಗ ಆತನ ಬಳಿ 10 ಗ್ರಾಂ MDMA ಎಂಬ ನಿಷೇಧಿತ…

ಮದ್ಯಪಾನವೆಂದು ವಿಷ ಸೇವನೆ!

ಹೆಬ್ರಿ: ಮದ್ಯಪಾನ ಎಂದು ಭಾವಿಸಿ ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರನಗರದಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ತಮ್ಮು ಪೂಜಾರಿ (78) ಎಂದು ಗುರುತಿಸಲಾಗಿದೆ. ಇವರು ನ. 20ರಂದು ಮನೆಯಲ್ಲಿದ್ದ ವಾಹನದ ಬ್ರೇಕ್ ಪ್ಯೂಡ್ ಆಯಿಲ್‌ ಅನ್ನು…

ಗಾಂಜಾ ಸೇವನೆ ಪ್ರಕರಣ – ಕುದ್ರೋಳಿ ಗ್ರೀನ್ ಪಾರ್ಕ್ ಬಳಿ ವ್ಯಕ್ತಿ ಬಂಧನ!

ಮಂಗಳೂರು: ಕುದ್ರೋಳಿ ಗ್ರೀನ್ ಪಾರ್ಕ್‌ ಬಳಿ ಅನುಮಾನಾಸ್ಪದವಾಗಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಬಂಧಿತ ವ್ಯಕ್ತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಸ್ತು ಕರ್ತವ್ಯದಲ್ಲಿದ್ದ ಬಂದರು ಠಾಣೆ ಪೊಲೀಸರು…

ಕೆಟ್ಟು ಹೋದ ವಾಹನದಲ್ಲಿದ್ದ ಗೋವುಗಳ ಪತ್ತೆ ಪ್ರಕರಣ: ಇಬ್ಬರ ಬಂಧನ!

ಪುತ್ತೂರು: ಗೋವುಗಳನ್ನು ಸಾಗಿಸುವ ವೇಳೆ ವಾಹನ ಕೆಟ್ಟು ಹೋಗಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಸಜಿಪನಡು ನಿವಾಸಿಗಳಾದ  ಆಶಿಕ್ ಪಾಷಾ (26) ಹಾಗೂ ಅಬ್ದುಲ್‌ ಲತೀಫ್ (25) ಬಂಧಿತರು. ನ. 29ರಂದು ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುತ್ತಿದ್ದು, ನರಿಮೊಗರು…

ಇರಾ: ಮದುವೆ ಮನೆಯನ್ನೇ ಟಾರ್ಗೆಟ್ ಮಾಡಿ ಕಳ್ಳತನ!!

ಬಂಟ್ವಾಳ: ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆಯಲ್ಲಿ ಯಾರನ್ನೋ ನಿಲ್ಲಿಸಿ ಹೋದವರನ್ನು ಯಾಮಾರಿಸಿ ಸುಳ್ಳು ಹೇಳಿ ಕಳ್ಳತನ ಮಾಡುವ ಕೃತ್ಯಗಳು ಹೆಚ್ಚಾಗುತ್ತಿದೆ. ರವಿವಾರ ಬಂಟ್ವಾಳದ ಇರಾ ಗ್ರಾಮವೊಂದರ ಮನೆಗೆ ಇದೇ ರೀತಿಯಲ್ಲಿ ನುಗ್ಗಿ ನಗ-ನಗದು ದೋಚಿರುವ ಘಟನೆ ನಡೆದಿದೆ. ಇರಾ ಗ್ರಾಮದ ಕುರಿಯಾಡಿ ಪದ್ಮನಾಭ…

ಪಡೀಲ್ ಚಿಕನ್ ಸೆಂಟರಿನ ಬದ್ರುದ್ದೀನ್ ನಾಪತ್ತೆ!

ಪುತ್ತೂರು: ನಗರದ ಪಡೀಲ್ ನ ಚಿಕನ್ ಸೆಂಟರೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬದ್ರುದ್ದೀನ್ ಡಿಕೆ (27) ಕಾಣೆಯಾದ ಯುವಕ. ಈತ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲಕತ್ವದ ಝಿಂದಗೀ ಚಿಕನ್ ಸೆಂಟರ್ ನಲ್ಲಿ ಕೆಲಸ…

ಆನ್’ಲೈನ್ ವಂಚನೆಗೆ ಹೊಂಚು: ಪುತ್ತೂರಿನ ಉದ್ಯಮಿಗೆ ಬಂದ ವಾಟ್ಸ್’ಆ್ಯಪ್ ಸಂದೇಶ!

ಪುತ್ತೂರು: ಸಂಚಾರ ನಿಯಮ ಉಲ್ಲಂಘಿಸಿದ್ದೀರಿ ಎಂಬ ಬರಹ ಹೊತ್ತ ಸಂದೇಶ ನಿಮ್ಮ ವಾಟ್ಸ್‍’ಆ್ಯಪ್’ಗೆ ಬಂದರೆ ತಲೆಕೆಡಿಸಿಕೊಳ್ಳಬೇಡಿ. ಯಾಕೆಂದರೆ ಇದು ವಂಚನೆಗೆ ಹಾಕಿರುವ ಹೊಂಚು. ಪುತ್ತೂರಿನ ಉದ್ಯಮಿಯೋರ್ವರಿಗೆ ಇಂತಹ ಸಂದೇಶ ವಾಟ್ಸ್’ಆ್ಯಪ್’ಗೆ ಬಂದು ಬಿದ್ದಿದೆ. ಏನಿದು ಎಂದು ಸಂದೇಶ ಓದುತ್ತಿರಬೇಕಾದರೆ, APK…