ಅಪರಾಧ

ಸುಳ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಅವಘಡ – ಪ್ರಯಾಣಿಕರು ಪಾರು

ಸುಳ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ಹಾನಿಗೊಂಡು ಪ್ರಯಾಣಿಕರು ಕೂದಲೆಳೆ ಅಂತರದಿಂದ ಪಾರಾದ ಘಟನೆ ಸುಳ್ಯ–ಬೆಳ್ಳಾರೆ ರಸ್ತೆಯ ಬೆಂಗಮಲೆಯಲ್ಲಿ ಸೋಮವಾರ ಸಂಭವಿಸಿದೆ. ಮಾಹಿತಿಯ ಪ್ರಕಾರ, ಸುಳ್ಯದ ಬ್ಯಾಂಕ್ ಮ್ಯಾನೇಜರ್ ಉತ್ಸವ್ ಚಕ್ರವರ್ತಿ ಹಾಗೂ ಇನ್ನೊಬ್ಬರು…

ವಿಟ್ಲ: ವಿದ್ಯಾರ್ಥಿನಿ ಮೃತದೇಹ ಕೆರೆಯಲ್ಲಿ ಪತ್ತೆ!!

ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಕೊಡಂಗಾಯಿ ಬಳಿಯ ಮೂರುಕಜೆ ಪ್ರದೇಶದಲ್ಲಿರುವ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಸಮೀಪದ ಕೆರೆಯಲ್ಲಿ ಪತ್ತೆಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಮೃತಳನ್ನು ಬೆಂಗಳೂರು ಮೂಲದ ವೈಗ ಲಕ್ಷ್ಮಿ ಎಂದು ಗುರುತಿಸಲಾಗಿದೆ.…

ಮಂಗಳೂರಿನಲ್ಲಿ ಅಂತರ್‌ರಾಜ್ಯ ಗಾಂಜಾ ಮಾರಾಟ ಜಾಲ ಪತ್ತೆ: 22 ಕೆಜಿ 250 ಗ್ರಾಂ ಗಾಂಜಾ ವಶ, ನಾಲ್ವರು ಬಂಧನ

ಮಂಗಳೂರು: ಅಂತರ್‌ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಾಂಜಾ ಮಾರಾಟ ಜಾಲವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು 22 ಕೆಜಿ 250 ಗ್ರಾಂ ತೂಕದ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ…

ರೈಲು ಡಿಕ್ಕಿ: ಮೃತ ಯುವಕನ ಗುರುತು ಪತ್ತೆ!

ಪುತ್ತೂರು: ಇಲ್ಲಿನ ಹಾರಾಡಿ ಸಮೀಪದ ರೈಲ್ವೆ ಹಳಿಯಲ್ಲಿ ರೈಲು ಡಿಕ್ಕಿಯಾದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯುವಕನ ಮಾಹಿತಿ ಲಭ್ಯವಾಗಿದ್ದು, ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತ ಯುವಕನನ್ನು ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ನಿವಾಸಿ…

ಸುಬ್ರಹ್ಮಣ್ಯದಲ್ಲಿ ಕಾಟಿ ಬೇಟೆ: ಅರಣ್ಯ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚನೆ!

ಸುಬ್ರಹ್ಮಣ್ಯ: ಕಾಟಿ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ವನ್ಯಜೀವಿ ಪಾಲಕರು (PCCF-Wildlife) ತನಿಖೆಗೆ ಸೂಚನೆ ನೀಡಿದ್ದಾರೆ. ಸುಬ್ರಹ್ಮಣ್ಯ ಸಮೀಪದ ಐತ್ತೂರು ಗ್ರಾಮದಲ್ಲಿ ಕಾಡೆಮ್ಮೆ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಆದೇಶ…

ವ್ಯಕ್ತಿಗೆ ರೈಲು ಡಿಕ್ಕಿ: ಸಾವು!

ಪುತ್ತೂರು: ರೈಲು ಡಿಕ್ಕಿಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪುತ್ತೂರಿನ ಹಾರಾಡಿ ಸಮೀಪದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಬಂಟ್ವಾಳದಲ್ಲಿ ಗಾಂಜಾ ಮಾರಾಟ ಯತ್ನ: 180 ಗ್ರಾಂ ಗಾಂಜಾ ಸಹಿತ ವ್ಯಕ್ತಿ ಬಂಧನ

ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, ಆತನಿಂದ 180 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಪ್ರದೇಶದ ರಸ್ತೆ ಬದಿಯ ನಿರ್ಜನ ಸ್ಥಳದಲ್ಲಿ ವ್ಯಕ್ತಿಯೊಬ್ಬನು ನಿಷೇಧಿತ…

ಲಾರಿಯಲ್ಲಿ ಅಕ್ರಮ ಮರ ಸಾಗಾಟ ಪತ್ತೆ: 8 ಲಕ್ಷ ರೂ. ಮೌಲ್ಯದ ದಿಮ್ಮಿ ವಶ, ಪ್ರಕರಣ ದಾಖಲು

ಸುಳ್ಯ: ಬೆಳ್ಳಾರೆ–ಸೋಣಂಗೇರಿ ರಸ್ತೆಯ ಬಂಡಿ ಮಜಲು ಎಂಬಲ್ಲಿ ಲಾರಿಯಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಬಗ್ಗೆ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಗೆ ಖಚಿತ ಮಾಹಿತಿಯ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಅಕ್ರಮ ಸಾಗಾಟಕ್ಕೆ…

ನೇತ್ರಾವತಿ ನದಿಯಲ್ಲಿ ತೇಲಿಬಂದ ಶವ!

ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಶವವೊಂದು ತೇಲಿಬಂದಿದ್ದು, ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ. ಮೃತದೇಹವು ಮೇಲ್ಭಾಗದ ನೀರಿನ ಹರಿವಿನ ಜೊತೆ ತೇಲಿ ಬಂದಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ನದಿಯಲ್ಲಿರುವ ಗಿಡ-ಗಂಟಿಗಳ ಮಧ್ಯೆ ಈ ಮೃತದೇಹ ಸಿಲುಕಿಕೊಂಡಿದ್ದು, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ…

ಹಣಕಾಸು ವಿಚಾರದ ಗಲಾಟೆಯಲ್ಲಿ ಸಹೋದ್ಯೋಗಿಯನ್ನು ಇರಿದು ಹತ್ಯೆ ಪ್ರಕರಣ: ಆರೋಪಿಗೆ ಶಿಕ್ಷೆ ವಿಧಿಸಿದ…

ಮಂಗಳೂರು:ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಟ್ರೀ ಪಾರ್ಕ್ ಸಮೀಪದ ಮಂಗಳಾ ಬೋಟ್ ಯಾರ್ಡ್ನಲ್ಲಿ 2023 ಡಿಸೆಂಬರ್ 10ರಂದು ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ. ಅಂದು ಪಣಂಬೂರು ಗ್ರಾಮದ ಮೀನಗಾರಿಕಾ ಬೋಟ್ಗಳನ್ನು ತಯಾರಿಸುವ ಹಾಗೂ ದುರಸ್ತಿ…