ಅಪರಾಧ

ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಶವವಾಗಿ ಪತ್ತೆ!!

ಬೆಂಗಳೂರಿನಲ್ಲಿ ಪುತ್ತೂರು ಮೂಲದ ಯುವಕ ನಿಗೂಢವಾಗಿ ಸಾವನಪ್ಪಿದ್ದಾನೆ. ಗ್ರಾಂಡ್ ಚಾಯ್ಸ್ ಲಾಡ್ಜ್‌ ನಲ್ಲಿ ತಕ್ಷಿತ್ (20) ಶವವಾಗಿ ಪತ್ತೆಯಾಗಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. 8 ದಿನದ ಹಿಂದೆ ಪ್ರೇಯಸಿಯ ಜೊತೆಗೆ ತಕ್ಷಿತ್ ಬೆಂಗಳೂರಿಗೆ ಬಂದಿದ್ದಾರೆ. 8 ದಿನಗಳ ಕಾಲ…

ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗ್ರಾಪಂ ಅಧ್ಯಕ್ಷೆ ನಫೀಸಾ ಆಡಳಿತಕ್ಕೆ ವಾಪಾಸ್!!  ವಜಾಕ್ಕೆ ಆಗ್ರಹಿಸಿದ…

ಪೆರುವಾಯಿ: ಲಂಚದ ಬೇಡಿಕೆ ಇಟ್ಟು ಮಂಗಳೂರು ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿ ಇದೀಗ ಬಿಡುಗಡೆಗೊಂಡು ಅಧ್ಯಕ್ಷ ಸ್ಥಾನದಲ್ಲಿ ಮತ್ತೆ ಮುಂದುವರಿದಿರುವ ಒಂದನೇ ಆರೋಪಿ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ನಫೀಸರವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ…

ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣ; ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಬಂಧನ!!

ಕೇರಳದ ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಪಾಟಿ ಅವರನ್ನು ಗುರುವಾರ ಪುಲಿಮಠದಲ್ಲಿರುವ ಅವರ ನಿವಾಸದಿಂದ…

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ! 5 ಕೋಟಿ ರೂ. ನಗದು, ಕಾರುಗಳು, ಚಿನ್ನ ವಶ!!

ಲಂಚ ಪಡೆದ ಆರೋಪದ ಮೇಲೆ ಬಂಧಿಸಲ್ಪಟ್ಟ ಡಿಐಜಿ ಹರ್ಚರಣ್ ಸಿಂಗ್ ಭುಲ್ಲರ್ ಅವರಿಂದ ಕೇಂದ್ರ ತನಿಖಾ ದಳ (ಸಿಬಿಐ) ಸುಮಾರು 5 ಕೋಟಿ ರೂಪಾಯಿ ನಗದು, 1.5 ಕೆಜಿ ತೂಕದ ಚಿನ್ನ, ಹಲವಾರು ಐಷಾರಾಮಿ ಕಾರುಗಳು ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ರೋಪರ್ ವಲಯದ ಪೊಲೀಸ್ ಉಪ ಮಹಾನಿರ್ದೇಶಕ ಭುಲ್ಲರ್, ಸ್ಕ್ಯಾಪ್…

ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳ ಸಾವು!!

ವಿಜಯಪುರ: ಕೃಷಿ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಅ.16ರ ಗುರುವಾರ ನಡೆದಿದೆ. ಸ್ವಪ್ನಾ ರಾಜು ರಾಠೋಡ್ (10), ಶಿವಂ ರಾಜು ರಾಠೋಡ್ (8) ಹಾಗೂ ಕಾರ್ತಿಕ ಈಶ್ವರ ರಾಠೋಡ್ (8) ಮೃತಪಟ್ಟ ಮಕ್ಕಳು. ಮಿಂಚನಾಳ ತಾಂಡಾದ ಮಾದೇವ ನಗರದ ನಿವಾಸಿಗಳಾದ ಈ ಮೂವರು…

ಕಾರು ತಡೆದು ಹಲ್ಲೆ, ಜೀವ ಬೆದರಿಕೆ!!

ಪುತ್ತೂರು: ತಿಂಡಿ ಪಾರ್ಸೆಲ್‌ಗೆ ಬಂದಿದ್ದ ವೇಳೆ ಅಪರಿಚಿತ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದೆ ಎಂದು ಕೆಮ್ಮಾಯಿ ನಿವಾಸಿ ಪ್ರವೀಣ್ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಮ್ಮಾಯಿ ನಿವಾಸಿ ಪ್ರವೀಣ್ ತನ್ನ ಅಕ್ಕನ ಕಾರಿನಲ್ಲಿ ಕಾವೇರಿಕಟ್ಟೆ ಬಳಿ…

ಅಪಘಾತವೆಸಗಿದ ಅಪ್ರಾಪ್ತ: ಆರ್.ಸಿ. ಮಾಲಕನಿಗೆ 32 ಸಾವಿರ ರೂ. ದಂಡ!!

ವಿಟ್ಲ: ಅಪಘಾತಕ್ಕೀಡಾಗಿದ್ದ ಅಪ್ರಾಪ್ತ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಪ್ರಕರಣದಲ್ಲಿ ಬಂಟ್ವಾಳ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಿದೆ. ದ್ವಿಚಕ್ರ ವಾಹನದ ಆರ್.ಸಿ. ಮಾಲಕ ಮಹಮ್ಮದ್ ಅನೀಸ್ ಅವರಿಗೆ 32 ಸಾವಿರ ರೂ. ದಂಡ ವಿಧಿಸಲಾಗಿದೆ. ವಿಟ್ಲ ಪೊಲೀಸ್‌ ಠಾಣಾ ಅಕ್ರ 74/2025 ಕಲಂ: U/s:…

ಬಸ್ ಗೆ ಆಕಸ್ಮಿಕ ಬೆಂಕಿ: 20 ಮಂದಿ ಸಜೀವ ದಹನ!!

ಖಾಸಗಿ ಬಸ್ ಗೆ ಆಕಸ್ಮಿಕ ಬೆಂಕಿ ಹೊತ್ತಿಗೊಂಡ ಪರಿಣಾಮ ಸುಮಾರು 20 ಪ್ರಯಾಣಿಕರು ಸಜೀವ ದಹನವಾದ ಘಟನೆ ಜೈಪುರದ ಎಸ್‌ಎಂಎಸ್‌ ಆಸ್ಪತ್ರೆ ಸಮೀಪದಲ್ಲಿ ಸಂಭವಿಸಿದೆ. ಬಸ್‌ ಜೈಸಲ್ಮೀರ್‌ನಿಂದ ಜೋಧಪುರಕ್ಕೆ ಹೊರಟಿದ್ದು, ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. 57…

ಹಿರಿಯ ಮಾವೋ ನಾಯಕ  ವೇಣುಗೋಪಾಲ್ ಸಹಿತ 60 ನಕ್ಸಲರು ಶರಣಾಗತಿ!!

ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ಯ ಪಾಲಿಟ್‌ಬ್ಯೂರೋ ಸದಸ್ಯ ಹಾಗೂ ಪ್ರಮುಖ ನಕ್ಸಲ್‌ ನಾಯಕರ ಪೈಕಿ ಒಬ್ಬನಾಗಿರುವ ಮಲ್ಲೋಜುಲ ವೇಣುಗೋಪಾಲ ರಾವ್ ಯಾನೆ ಸೋನು ಸೋಮವಾರ ರಾತ್ರಿ ಶರಣಾಗಿದ್ದಾನೆ. ಆತನೊಂದಿಗೆ 60 ಸಹ ನಕ್ಸಲೀಯರೂ ಶರಣಾಗಿದ್ದಾರೆ. ವೇಣುಗೋಪಾಲ್ ಯಾನೆ ಭೂಪತಿ ಯಾನೆ ಸೋನು ಹಾಗೂ ಕೇಂದ್ರೀಯ…

ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದ ಸುಳ್ಯದ ಯುವಕ ಜಲಪಾತಕ್ಕೆ ಬಿದ್ದು ಸಾವು!!

ಮಾರಿಷಸ್ ನಲ್ಲಿ ವಿದ್ಯಾರ್ಥಿಯಾಗಿರುವ ನಾಲ್ಕೂರು ಗ್ರಾಮದ ಹಲ್ಲುಜಿ, ಕಲ್ಲಾಜೆ ನಿವಾಸಿ ನಂದನ್ ಭಟ್ ಎಂಬ ಯುವಕ ಅಲ್ಲಿ ಜಲಪಾತ ವೀಕ್ಷಣೆಯ ವೇಳೆ ಬಿದ್ದು ದುರ್ಮರಣಕ್ಕೀಡಾಗಿದ್ದು, ಇವರ ಮೃತದೇಹ ವನ್ನು ಊರಿಗೆ ತರುವ ನಿಟ್ಟಿನಲ್ಲಿ ಇಬ್ಬರು ಸಂಸದರು ಮಧ್ಯ ಪ್ರವೇಶಿಸಿ ಪ್ರಯತ್ನ ನಡೆಸುತ್ತಿದ್ದಾರೆ. ಕಲ್ಲಾಜೆಯ…