ಅಪರಾಧ

ಸುಮಂತ್ ಮೃತದೇಹ ಪತ್ತೆಯಾದ ಕೆರೆಯಲ್ಲಿ ಸಿಕ್ಕಿತು ಕತ್ತಿ, ಟಾರ್ಚ್!

ಬೆಳ್ತಂಗಡಿ: ಸುಮಂತ್ ಮೃತದೇಹ ಪತ್ತೆಯಾದ ಕೆರೆಯ ನೀರನ್ನು ಖಾಲಿ ಮಾಡಿದಾಗ ಕತ್ತಿ ಹಾಗೂ ಟಾರ್ಚ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಓಡಿಲ್ನಾಳ ಗ್ರಾಮದ ಸಂಬೋಳ್ಯದ ಬಾಲಕ ಸುಮಂತ್ ಸಾವಿನ ಬಗ್ಗೆ ಪ್ರಾಥಮಿಕ ತನಿಖೆಯ ಬಳಿಕ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿದೆ. ಪ್ರಾಥಮಿಕ ವರದಿ ಪ್ರಕಾರ, ಹುಡುಗನು…

ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಸುಮಂತ್!! ಸಂಬೋಳ್ಯ: ಕೆರೆಯಲ್ಲಿ ಪತ್ತೆಯಾದ ಬಾಲಕನ ಮೃತದೇಹ ಪ್ರಕರಣ:…

ಬೆಳ್ತಂಗಡಿ: ಒಡಿಲ್ನಾಳ ಗ್ರಾಮದ ಸಂಬೋಳ್ಯದ ಕೆರೆಯಲ್ಲಿ ಪತ್ತೆಯಾದ ಬಾಲಕನ ಮೃತದೇಹ ಪ್ರಕರಣದಲ್ಲಿ ಪ್ರಾಥಮಿಕ ತನಿಖಾ ವರದಿಯನ್ನು ಪೊಲೀಸ್ ಇಲಾಖೆ ಹೊರಗಿಟ್ಟಿದೆ. ಧನುಪೂಜೆಗೆಂದು ದೇವಸ್ಥಾನಕ್ಕೆ ತೆರಳಿದ್ದ ಸುಮಂತ್ (15 ವ) ಅವರ ಮೃತದೇಹ ಜ. 14ರಂದು ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ವರದಿಯ…

ಕತ್ತು ಸೀಳಿದ ಗಾಜುಲೇಪಿತ ಗಾಳಿಪಟ: ಮೂವರು ಮೃತ್ಯು!

ಗಾಳಿಪಟ ಹಾರಿಸಲು ನಿಷೇಧಿತ ಹಾಗೂ ತೀಕ್ಷ್ಣವಾದ ಗಾಜುಲೇಪಿತ ದಾರವನ್ನು ಬಳಸಿದ ಪರಿಣಾಮ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉತ್ತರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ದಾರದಿಂದ ಕತ್ತು ಸೀಳಲ್ಪಟ್ಟು ಮೂವರು ಮೃತಪಟ್ಟಿದ್ದಾರೆ.…

ಬಾಂಗ್ಲಾದೇಶಿಯೆಂದು ವಲಸೆ ಕಾರ್ಮಿಕನಿಗೆ ಹಲ್ಲೆ: ಮೂವರ ಬಂಧನ!

ಮಂಗಳೂರು: ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಕೊಲೆ ಯತ್ನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಕೂಳೂರು ಗ್ರಾಮ ನಿವಾಸಿಗಳಾದ ರತೀಶ್ ದಾಸ್ ಯಾನೆ…

ಮಣಿಕಟ್ಟು ಸೀಳಿಕೊಂಡು, 11ನೇ ಮಹಡಿಯಿಂದ ಹಾರಿ ಮೃತಪಟ್ಟ ಯುವಕ!

ಗಾಜಿಯಾಬಾದ್: ಯುವಕನೊಬ್ಬ ಮಣಿಕಟ್ಟು ಸೀಳಿಕೊಂಡು ಅಪಾರ್ಟ್​ಮೆಂಟ್​’ನ 11ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. 11ನೇ ಮಹಡಿಯಲ್ಲಿರುವ ತನ್ನ ಮನೆಯ ಬಾಲ್ಕನಿಯಿಂದ ಹಾರಿ 28 ವರ್ಷದ ಯಜ್ಞ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.…

ಬೆಂಕಿ ಆಕಸ್ಮಿಕ; ಚಾರ್ಮಾಡಿ ಘಾಟಿ ಮಧ್ಯೆ ಹೊತ್ತಿ ಉರಿದ ಮೆಕ್ಕೆ ಜೋಳ ಸಾಗಾಟದ ಲಾರಿ!!

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಎರಡನೆಯ ತಿರುವಿನಲ್ಲಿ ಮೆಕ್ಕೆ ಜೋಳ ಸಾಗಾಟದ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಶನಿವಾರ ಬೆಳಗ್ಗಿನ ಜಾವ 3 ಗಂಟೆಯ ವೇಳೆ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹಾಗು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ…

ಕಡಿದ ವಿದ್ಯುತ್ ತಂತಿಗೆ ಬಲಿಯಾಯ್ತು 900 ಅಡಿಕೆ ಗಿಡ!

ಪುತ್ತೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು, 900ರಷ್ಟು ಅಡಿಕೆ ಗಿಡಗಳು ಸುಟ್ಟುಕರಕಲಾದ ಘಟನೆ ಪುತ್ತೂರಿನ ಕುರಿಯದಲ್ಲಿ ನಡೆದಿದೆ. ಬೂಡಿಯಾರ್ ಗಣೇಶ್ ರೈ ಎಂಬವರ ತೋಟದಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಬಿದ್ದ ತಕ್ಷಣ ಒಣಗಿದ್ದ ಅಡಿಕೆ ತೋಟಕ್ಕೆ ಬೆಂಕಿ ಹೊತ್ತಿಕೊಂಡಿದ್ದು. ಸುಮಾರು 900ಕ್ಕೂ ಅಧಿಕ…

ಬೆಂಕಿ: ಮಂಗಳೂರು ಮೂಲದ ಶರ್ಮಿಳಾ ಉಸಿರುಗಟ್ಟೆ ಮೃತ್ಯು!

ಬೆಂಗಳೂರು: ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಉಂಟಾದ ದಟ್ಟವಾದ ಹೊಗೆಯಿಂದ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಬ್ರಹಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಮಂಗಳೂರಿನ ಕಾವೂರು ಮೂಲದ…

ಮಹಿಳೆಗೆ ಕಿರುಕುಳ: ಹೆಡ್‌ಕಾನ್‌ಸ್ಟೇಬಲ್ ಅಮಾನತು!

ಮಂಗಳೂರು: ಮಹಿಳೆಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಮತ್ತು ಮಾಹಿತಿ ನೀಡದೆ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾದ ಕಾರಣ ಉಳ್ಳಾಲ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಸಿ.ಜೆ. ಎಂಬವರನ್ನು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 2023ರಲ್ಲಿ…

ವಿಟ್ಲದಲ್ಲಿ ಬೆಂಕಿ ಅವಘಡ; ಹಲವು ಅಂಗಡಿಗಳಿಗೆ ಹಾನಿ! ಅಗ್ನಿ ಶಾಮಕದಳದಿಂದ ತ್ವರಿತ ಕಾರ್ಯಾಚರಣೆ!

ವಿಟ್ಲ: ಮಂಗಳೂರು ರಸ್ತೆಯಲ್ಲಿರುವ ಶ್ರೀ ಎಲೆಕ್ಟೋನಿಕ್ಸ್ ಅಂಗಡಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಬೆಂಕಿಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಬಿಸಿರೋಡ್‌ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ…