Gl
ರಾಜ್ಯ ವಾರ್ತೆಸ್ಥಳೀಯ

ಇನ್ಫೋಸಿಸ್ ಬಾಕಿ ಇಟ್ಟಿದೆಯಾ 32,403 ಕೋಟಿ ರೂ. GST? ಐಟಿ ಸಂಸ್ಥೆ ಇನ್ಫೋಸಿಸ್’ಗೆ ನೊಟೀಸ್ ನೀಡಿರುವುದಾದರೂ ಯಾಕಾಗಿ? ಇನ್ಫೋಸಿಸ್ ನೀಡುವ ಕಾರಣವಾದರೂ ಏನು ಗೊತ್ತೇ?

ವಿದೇಶಗಳಲ್ಲಿರುವ ತನ್ನ ಶಾಖಾ ಘಟಕಗಳಿಂದ ಸೇವೆ ಪಡೆದದ್ದಕ್ಕೆ ಇನ್ಫೋಸಿಸ್ ಜಿಎಸ್ಟಿ ಪಾವತಿಸಿಲ್ಲ ಎಂದು ತೆರಿಗೆ ಇಲಾಖೆ ಆರೋಪಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿದೇಶಗಳಲ್ಲಿರುವ ತನ್ನ ಶಾಖಾ ಘಟಕಗಳಿಂದ ಸೇವೆ ಪಡೆದದ್ದಕ್ಕೆ ಇನ್ಫೋಸಿಸ್ GST ಪಾವತಿಸಿಲ್ಲ ಎಂದು ತೆರಿಗೆ ಇಲಾಖೆ ಆರೋಪಿಸಿದೆ.

rachana_rai
Pashupathi
akshaya college

2017ರಿಂದ 2022ರವರೆಗೆ ಐದು ವರ್ಷದಲ್ಲಿ ಬರೋಬ್ಬರಿ 32,403.46 ಕೋಟಿ ರೂ ಮೊತ್ತದ ಐಜಿಎಸ್ಟಿ ಪಾವತಿಸಬೇಕು ಎಂದು ಇನ್ಫೋಸಿಸ್ಗೆ ಬೆಂಗಳೂರಿನ GST ಅಧಿಕಾರಿಗಳು ನೋಟೀಸ್ ಕೊಟ್ಟಿದ್ದಾರೆ. ಕುತೂಹಲ ಎಂದರೆ ಬಾಕಿ ಇದೆ ಎನ್ನಲಾದ ಇಷ್ಟು ಐಜಿಎಸ್ಟಿ ಹಣವು ಇನ್ಫೋಸಿಸ್ನ ಐದು ವರ್ಷದ ಲಾಭಕ್ಕೆ ಸಮ ಎನ್ನಲಾಗಿದೆ.

pashupathi

ಇನ್ಫೋಸಿಸ್ ಸಂಸ್ಥೆ ಜಿಎಸ್ಟಿ ಪ್ರಾಧಿಕಾರದ ಈ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಬಗ್ಗೆ ಪ್ರತಿಕ್ರಿಯಿಸಿದ್ದು, ತಾನು ಯಾವುದೇ ತೆರಿಗೆ ನಿಯಮ ಉಲ್ಲಂಘಿಸಿಲ್ಲ, ಅಥವಾ ಬಾಕಿ ಉಳಿಸಿಕೊಂಡಿಲ್ಲ ಎಂದು ಷೇರು ವಿನಿಯಮ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ.

ಇನ್ಫೋಸಿಸ್ ವಿದೇಶಗಳಲ್ಲಿ ಬ್ರ್ಯಾಂಚ್ ಆಫೀಸ್ಗಳನ್ನು ಸ್ಥಾಪಿಸಿದೆ. ಆ ಶಾಖಾ ಕಚೇರಿಗಳಿಂದ ಪಡೆದ ಸರಬರಾಜುಗಳಿಗೆ ಸಂಸ್ಥೆ ಹಣ ಪಾವತಿಸಿದೆ. 2017ರ ಜುಲೈನಿಂದ ಆರಂಭವಾಗಿ 2021-22ರ ಹಣಕಾಸು ವರ್ಷದವರೆಗೆ ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ಇನ್ಫೋಸಿಸ್ ಸಂಸ್ಥೆ 32,403.46 ಕೋಟಿ ರೂ ಐಜಿಎಸ್ಟಿ ಪಾವತಿಸಬೇಕಿತ್ತು. ಇನ್ಫೋಸಿಸ್ ಸಂಸ್ಥೆ ತನ್ನ ಎಕ್ಸ್ಪೋರ್ಟ್ ಇನ್ವಾಯ್ಸ್ ಅಡಿಯಲ್ಲಿ ಆ ವೆಚ್ಚಗಳನ್ನು ತೋರಿಸಿದೆ ಎಂದು ಕರ್ನಾಟಕ ರಾಜ್ಯ ಜಿಎಸ್ಟಿ ಪ್ರಾಧಿಕಾರ ತನ್ನ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ನಲ್ಲಿ ತಿಳಿಸಿದೆ.

ವಿದೇಶಗಳಲ್ಲಿನ ಶಾಖಾ ಕಚೇರಿಗಳಿಂದ ಆದ ವೆಚ್ಚಕ್ಕೆ 32,403 ಕೋಟಿ ರೂ ಮೊತ್ತದ ಜಿಎಸ್ಟಿ ಪಾವತಿ ಇದೆ ಎಂದು ಜಿಎಸ್ಟಿ ಅಧಿಕಾರಿಗಳು ಪೂರ್ವಬಾವಿ ಶೋಕಾಸ್ ನೋಟೀಸ್ ನೀಡಿದ್ದಾರೆ. ಅದಕ್ಕೆ ಕಂಪನಿ ಸ್ಪಂದಿಸಿದೆ. ನಿಯಮಗಳ ಪ್ರಕಾರ ಈ ವೆಚ್ಚಗಳಿಗೆ ಜಿಎಸ್ಟಿ ಅನ್ವಯ ಆಗಲ್ಲ. ಜಿಎಸ್ಟಿ ಕೌನ್ಸಿಲ್ನ ಶಿಫಾರಸುಗಳ ಮೇಲೆ ಸಿಬಿಡಿಟಿ ಮತ್ತು ಸುಂಕ ಇಲಾಖೆ 2024ರ ಜೂನ್ 26ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, ಭಾರತೀಯ ಸಂಸ್ಥೆಯ ವಿದೇಶೀ ಶಾಖೆಗಳಿಂದ ನೀಡಲಾದ ಸೇವೆಗಳಿಗೆ ಜಿಎಸ್ಟಿ ಅನ್ವಯ ಆಗಲ್ಲ’ ಎಂದು ಇನ್ಫೋಸಿಸ್ನ ಕಂಪನಿ ಸೆಕ್ರೆಟರಿ ಮಣಿಕಂಠ ತಿಳಿಸಿದ್ದಾರೆ.

ಜಿಎಸ್ಟಿ ಪಾವತಿಗಳು ಐಟಿ ಸರ್ವಿಸ್ಗಳ ರಫ್ತಿಗೆ ಬದಲಾಗಿ ಕ್ರೆಡಿಟ್ ಅಥವಾ ರೀಫಂಡ್ ಪಡೆಯಲು ಅರ್ಹವಾಗಿರುತ್ತವೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾನೂನುಗಳಿಗೆ ಇನ್ಫೋಸಿಸ್ ಬದ್ಧವಾಗಿದ್ದು ಎಲ್ಲಾ ಜಿಎಸ್ಟಿ ಬಾಕಿಯನ್ನು ಪಾವತಿಸಿದೆ ಎಂದೂ ಇನ್ಫೋಸಿಸ್ ಸಂಸ್ಥೆ ಸ್ಪಷ್ಟಪಡಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

1 of 120