ಕಾಸರಗೋಡು: ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಹಾಗೂ ಪಕ್ಷದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ, ಹಿರಿಯ ನಾಯಕ ಎಸ್. ಕುಮಾರ್ (65) ನಿಧನರಾದರು.
ಅಸೌಖ್ಯದಿಂದ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಅವರು ಬುಧವಾರ ಸಂಜೆ 5ರ ವೇಳೆಗೆ ವಿಧಿವಶರಾದರು
ಕೂಡ್ಲು ಕಾಳ್ಯಂಗಾಡು ನಿವಾಸಿಯಾದ ಅವರು 90ರ ದಶಕದಿಂದ ಕಾಸರಗೋಡಿನಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದರು. ಕಾಸರಗೋಡು ಮಂಡಲ ಕಾರ್ಯದರ್ಶಿ, ಜಿಲ್ಲಾ ಕಾರ್ಯದರ್ಶಿಯಾಗಿ ಪಕ್ಷಕ್ಕೆ ದುಡಿದಿದ್ದರು. ಅನಾರೋಗ್ಯ ನಿಮಿತ್ತವಾದ ಶಾರೀರಿಕ ಸಮಸ್ಯೆಗಳಿಂದ ಬಳಲಿದ್ದ ಅವರು ಪಕ್ಷ ಚಟುವಟಿಕೆಯಿಂದ ಹಿಂದಕ್ಕೆ ಸರಿದು ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು
ಮೃತರು ಪತ್ನಿ ಚಂದ್ರಪ್ರಭ, ಮಕ್ಕಳಾದ ಶ್ಯಾಮಪ್ರಸಾದ್, ದಿವ್ಯಪ್ರಭ ಎಂಬಿವರನ್ನು ಮತ್ತು ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತದೇಹವನ್ನು ಬುಧವಾರ ಸಂಜೆ ಕರಂದಕ್ಕಾಡು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಹಿತ ನೂರಾರು ಕಾರ್ಯಕರ್ತರು ಅಂತ್ಯದರ್ಶನಗೈದರು. ಬಳಿಕ ಕೂಡು ಬಿಜೆಪಿ ಕಚೇರಿ ಬಳಿ ಸಾರ್ವಜನಿಕ ದರ್ಶನಕ್ಕಿರಿಸಲಾಯಿತು. ಅನಂತರ ರಾತ್ರಿ ಪಾರೆಕಟ್ಟೆ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು. ಅವರ ನಿಧನಕ್ಕೆ ಬಿಜೆಪಿ ಜಿಲ್ಲಾ ಘಟಕ ಸಂತಾಪ ಸೂಚಿಸಿದೆ.