Gl jewellers
ಪ್ರಚಲಿತ

ಕಾಶಿಯಲ್ಲಿ ತಲೆನೋವಾದ ಚಪ್ಪಲಿ ತ್ಯಾಜ್ಯ! ನಿತ್ಯ ಲೋಡ್’ಗಟ್ಟಲೆ ಚಪ್ಪಲಿ ಕಸದ ಗುಂಡಿಗೆ!

ಕಾಶಿಯಲ್ಲಿ ಇದೀಗ ಹೊಸ ಸವಾಲು ಎದುರಾಗಿದೆ. ಭಕ್ತರಿಂದ ತುಂಬಿ ತುಳುಕುತ್ತಿರುವ ಕಾಶಿ ವಿಶ್ವನಾಥ ಮಂದಿರದ ಆಸುಪಾಸಿನಿಂದ 2 ಲಾರಿ ಲೋಡ್‌ಗಳಷ್ಟು ಪಾದರಕ್ಷೆಗಳನ್ನು ಕಸದ ಗುಂಡಿಗೆ ಎಸೆಯಲಾಗುತ್ತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಾಶಿಯಲ್ಲಿ ಇದೀಗ ಹೊಸ ಸವಾಲು ಎದುರಾಗಿದೆ. ಭಕ್ತರಿಂದ ತುಂಬಿ ತುಳುಕುತ್ತಿರುವ ಕಾಶಿ ವಿಶ್ವನಾಥ ಮಂದಿರದ ಆಸುಪಾಸಿನಿಂದ 2 ಲಾರಿ ಲೋಡ್‌ಗಳಷ್ಟು ಪಾದರಕ್ಷೆಗಳನ್ನು ಕಸದ ಗುಂಡಿಗೆ ಎಸೆಯಲಾಗುತ್ತಿದೆ.

Papemajalu garady
Karnapady garady

ಕುಂಭಮೇಳ ಆರಂಭದ ಬಳಿಕ ಪ್ರಯಾಗ್‌ರಾಜ್‌ನಿಂದ ಭಕ್ತರು ಅಯೋಧ್ಯೆ ಮತ್ತು ವಾರಾಣಸಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಆದರೆ ಕಾಶಿ ದೇಗುಲಕ್ಕೆ ಪ್ರವೇಶ ಹಾದಿಗಳು ಅಷ್ಟೇನು ವಿಶಾಲವಾಗಿ ಇಲ್ಲದ ಕಾರಣ ದೇಗುಲದ ಪ್ರವೇಶ ದ್ವಾರ ಸೇರಿದಂತೆ ರಸ್ತೆಗಳಲ್ಲೇ ಪಾದರಕ್ಷೆ ಬಿಟ್ಟು ಭಕ್ತರು ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ

ಆದರೆ ನಿತ್ಯವೂ ಲಕ್ಷಾಂತರ ಜನರ ಆಗಮನ ಹಿನ್ನೆಲೆಯಲ್ಲಿ, ಭಕ್ತರು ದೇವರ ದರ್ಶನ ಪಡೆದು ಹೊರಗೆ ಬರುವ ವೇಳೆ ಅವರ ಪಾದರಕ್ಷೆಗಳು ಒಂದೊಂದು ಒಂದು ಕಡೆ ಚದುರಿ ಹೋಗಿ ಸಮಸ್ಯೆ ಎದುರಾಗುತ್ತಿದೆ. ಇನ್ನು ಕೆಲವು ಸಂದರ್ಭದಲ್ಲಿ ಎಲ್ಲಿ ಬಿಟ್ಟಿದ್ದೀವಿ ಎಂದು ತಿಳಿಯದೇ ಭಕ್ತರು ಚಪ್ಪಲಿ ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ.

ಪರಿಣಾಮ ದೇಗುಲದ ಆಸುಪಾಸಿನಲ್ಲಿ ನಿತ್ಯವೂ ಭಾರೀ ಪ್ರಮಾಣದಲ್ಲಿ ಪಾದರಕ್ಷೆ ಹಾಗೆಯೇ ಉಳಿದುಹೋಗುತ್ತಿದೆ. ಹೀಗಾಗಿ ಪಾಲಿಕೆ ಸಿಬ್ಬಂದಿ ತಡರಾತ್ರಿ 12 ಗಂಟೆಯಿಂದ 2 ಗಂಟೆ ಅವಧಿಯಲ್ಲಿ ಬಂದು ಉಳಿದ ಪಾದರಕ್ಷೆ ಒಟ್ಟುಗೂಡಿಸಿ ಕಸ ಸಂಗ್ರಹ ಪ್ರದೇಶದಲ್ಲಿ ಎಸೆಯುತ್ತಿದ್ದಾರೆ. ಹೀಗೆ ನಿತ್ಯವೂ 2 ಲಾರಿ ಲೋಡ್‌ಗಳಷ್ಟು ಪಾದರಕ್ಷೆ ಸಂಗ್ರಹವಾಗುತ್ತಿದೆ ಎಂದು ಪಾಲಿಕೆ ಸಿಬ್ಬಂದಿ ಹೇಳಿದ್ದಾರೆ


ಈ ಸುದ್ದಿಯನ್ನು ಶೇರ್ ಮಾಡಿ

Related Posts