ಪುತ್ತೂರು: ದರ್ಬೆಯಲ್ಲಿ ಕೇವಲ ಇಪ್ಪತ್ತು ವಿದ್ಯಾರ್ಥಿಗಳಿಂದ ಆರಂಭವಾದ ಗ್ಲೋರಿಯ ಕಾಲೇಜು ಆಫ್ ಫ್ಯಾಶನ್ ಡಿಸೈನಿಂಗ್ ಇದೀಗ ಸಂಪ್ಯದಲ್ಲಿ ಉದ್ಯಮಿ ಜಯಂತ್ ನಡುಬೈಲುರವರ ಮುಂದಾಳತ್ವದಲ್ಲಿ ಅಕ್ಷಯ ಕಾಲೇಜು ಎಂಬ ನಾಮಾಂಕಿತದೊಂದಿಗೆ ಸುಮಾರು 450ಕ್ಕೂ ಮಿಕ್ಕಿ ವಿದ್ಯಾರ್ಥಿಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಇದೀಗ ದರ್ಬೆ ಬೈಪಾಸ್ ರಸ್ತೆಯ ಫಾ.ಪತ್ರಾವೋ ಸರ್ಕಲ್ ಬಳಿಯ ಆರಾಧ್ಯ ಆರ್ಕೇಡ್‌ನ ಮೂರನೇ ಮಹಡಿಯಲ್ಲಿ ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನಡಿಯಲ್ಲಿ ಅಕ್ಷಯ ಕಾಲೇಜು ಹಾಗೂ ಕೆರಿಯರ್ ಡೆಸ್ಟಿನಿ ಮಂಗಳೂರು ಜಂಟಿ ಸಹಯೋಗದಲ್ಲಿ `ಅಕ್ಷಯ ಕೆರಿಯರ್ ಅಕಾಡೆಮಿ’ ಸಂಸ್ಥೆಯನ್ನು ಸ್ಥಾಪಿಸಿ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಏವಿಯೇಶನ್, ಸ್ಯಾಪ್, ಬ್ಯಾಟ್ ಅಲ್ಪಾವಧಿ ಕೋರ್ಸ್ಗಳನ್ನು ಹುಟ್ಟು ಹಾಕಿದ್ದು ಫೆ. 14ರಂದು ಲೋಕಾರ್ಪಣೆಗೊಂಡಿದೆ.
ಪಿಯುಸಿ/ಪದವಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಕೋರ್ಸ್’ಗಳು: ಜಯಂತ್ ನಡುಬೈಲು
ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲು ಅವರು ನೂತನ ಶಾಖೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪುವಿಕೆಗೋಸ್ಕರ ಉದ್ಯೋಗಪೂರಕ ವೃತ್ತಿಪರ ಕೋರ್ಸ್ಗಳನ್ನು ಮಂಗಳೂರು ವಿ.ವಿಯೊಡನೆ ಸಂಯೋಜನೆಯೊಂದಿಗೆ 2019ರಲ್ಲಿ ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್’ನಡಿಯಲ್ಲಿ ಈಗಾಗಲೇ ಪ್ರಾರಂಭಿಸಿದ್ದೇವೆ. ಪ್ರಥಮವಾಗಿ ಬಿಎಸ್ಸಿ ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಬಿಕಾಂ ವಿಥ್ ಏವಿಯೇಶನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಬಿಸಿಎ ಆರ್ಟಿಫಿಶಿಯಲ್ ಸೈಬರ್ ಆ್ಯಂಡ್ ಡಾಟಾ ಅನಲೈಸ್, ಬಿಎಚ್‌ಸಿ ಹೊಟೇಲ್ ಮ್ಯಾನೇಜ್ಮೆಂಟ್ ಮತ್ತು ಬಿಎ ಪದವಿ ಶಿಕ್ಷಣದೊಂದಿಗೆ ಸರ್ಟಿಫಿಕೇಟ್ ಕೋರ್ಸ್’ಗಳನ್ನು ಆರಂಭಿಸಿದ್ದೇವೆ ಎಂದರು.
ಏವಿಯೇಶನ್ ಶಿಕ್ಷಣವನ್ನು ಪ್ರಥಮ ಬಾರಿಗೆ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಸಹಾಯವಾಗಲೆಂದು ಈ ಭಾಗದಲ್ಲಿ ಆರಂಭಿಸಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಪಾವಧಿ ಕೋರ್ಸ್’ಗಳಾದ ಏವಿಯೇಶನ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಲಾಜಿಸ್ಟಿಕ್, ಸ್ಯಾಪ್, ಬ್ಯಾಟ್ ಹೀಗೆ ಬೇರೆ ಬೇರೆ ಕೋರ್ಸ್’ಗಳು ಕಡಿಮೆ ಶುಲ್ಕದಲ್ಲಿ ಪದವಿ ಅಥವಾ ಪಿಯುಸಿ ಬಳಿಕ ಮಾಡಬಹುದಾಗದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪುತ್ತೂರಿನಲ್ಲಿ ಏವಿಯೇಶನ್ ಶಿಕ್ಷಣ ಆರಂಭ: ಜಯಶ್ರೀ
ಮಂಗಳೂರು ಕೆರಿಯರ್ ಡೆಸ್ಟಿನಿ ಇದರ ಮುಖ್ಯಸ್ಥೆ ಜಯಶ್ರೀ ಮಾತನಾಡಿ, ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆಯಿಂದ ಬಂದು ಇಲ್ಲಿನ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏವಿಯೇಶನ್ ಶಿಕ್ಷಣವನ್ನು 2021ರಿಂದಲೇ ಪ್ರಾರಂಭಿಸಿದ್ದು, ಈ ಬ್ಯಾಚಿನ ವಿದ್ಯಾರ್ಥಿಗಳು ಇದೀಗ ಮಂಗಳೂರಿನ ಏರ್‌ಪೋರ್ಟ್ನಲ್ಲಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪದವಿ ನಂತರ ಪ್ರೊಫೆಶನಲ್ ಕೋರ್ಸ್ ಕಲಿಯುವುದು ಹೇಗೆ?, ಕೆಲವರಿಗೆ ಮೂರು ತಿಂಗಳ ಶಿಕ್ಷಣ, ಆರು ತಿಂಗಳ ಶಿಕ್ಷಣ ಹೀಗೆ ಅಭಿಪ್ರಾಯಗಳು ಬಂದಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೀಗಾಗಿ ಪ್ರೊಫೆಶನಲ್ ಕೋರ್ಸ್ ಪುತ್ತೂರಿನಲ್ಲಿ ಕೆರಿಯರ್ ಡೆಸ್ಟಿನಿ ಹಾಗೂ ಅಕ್ಷಯ ಕಾಲೇಜು ಸಹಯೋಗದಲ್ಲಿ ಇದೀಗ ಉದ್ಘಾಟನೆಗೊಂಡಿದೆ. ಪಿಯುಸಿ ಆದವರಿಗೆ ಒಂದು ವರ್ಷ ಹಾಗೂ ಪದವಿ ಆದವರಿಗೆ ಆರು ತಿಂಗಳ ಈ ಏವಿಯೇಶನ್ ಕೋರ್ಸ್ ಮಾಡಬಹುದಾಗಿದೆ ಎಂದರು.
ಏವಿಯೇಶನ್ ಶಿಕ್ಷಣದಲ್ಲಿ ಬ್ಯೂಟಿ ಇಂಡಸ್ಟ್ರಿಯೂ ಪ್ರಮುಖ ಪಾತ್ರ ವಹಿಸುತ್ತದೆ: ಮರ್ಸಿ ವೀನಾ ಡಿ’ಸೋಜ
ಮಂಗಳೂರಿನ ಮರ್ಸಿ ಬ್ಯೂಟಿ ಸಲೂನ್ ಆ್ಯಂಡ್ ಅಕಾಡೆಮಿಯ ಮರ್ಸಿ ವೀನಾ ಡಿ’ಸೋಜ ಅವರು ಸುಸಜ್ಜಿತ ತರಗತಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಏವಿಯೇಶನ್ ಶಿಕ್ಷಣ ಎಂಬುದು ಥಿಯರಿ ಹಾಗೂ ಪ್ರಾಕ್ಟಿಕಲ್ ಎರಡನ್ನೂ ಒಳಗೊಂಡಿದೆ. ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆಯು ಪುತ್ತೂರಿನ ಅಕ್ಷಯ ಕಾಲೇಜಿನೊಂದಿಗೆ ಸಂಯೋಜನೆಗೊಂಡು ಈ ಭಾಗದ ವಿದ್ಯಾರ್ಥಿಗಳಿಗೆ ಏವಿಯೇಶನ್ ಕೋರ್ಸ್’ಗಳ ಬಗ್ಗೆ ಶಿಕ್ಷಣವನ್ನು ಧಾರೆಯೆರೆಯುತ್ತಿರುವುದು ಒಳ್ಳೆಯ ವಿಷಯವಾಗಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಈ ಏವಿಯೇಶನ್ ಇಂಡಸ್ಟ್ರಿಯು ಬಹಳ ಪ್ರಾಮುಖ್ಯತೆ ಪಡೆದಿದ್ದು ಇದರಲ್ಲಿ ಬ್ಯೂಟಿ ಇಂಡಸ್ಟ್ರಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ನಾನೊಂದು ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದು ನನ್ನನ್ನು ಈ ಅಕ್ಷಯ ಸಂಸ್ಥೆಯೊಂದಿಗೆ ಸೇರಿಸಿಕೊಂಡು ತನ್ನಲ್ಲಿನ ಜ್ಞಾನಧಾರೆಯನ್ನು ಭವಿಷ್ಯದ ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದಕ್ಕೆ ಬಹಳ ಖುಶಿಯಾಗುತ್ತಿದೆ ಎಂದರು.
ಏವಿಯೇಶನ್ ಅಲ್ಪಾವಧಿ ಶಿಕ್ಷಣದೊಂದಿಗೆ ಒಳ್ಳೆಯ ಉದ್ಯೋಗವನ್ನು ಪಡೆಯಬಹುದು: ದೇವಿಪ್ರಸಾದ್
ಝೂಂಬಾ ಆಫ್ ಸ್ಟ್ರಾಂಗ್ ನೇಷನ್ ಸರ್ಟಿಫೈಡ್ ಫಿಟ್ನೆಸ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರ ದೇವಿಪ್ರಸಾದ್ ಮಾತನಾಡಿ, ಅಕ್ಷಯ ಕಾಲೇಜು ಹಾಗೂ ಡೆಸ್ಟಿನಿ ಕೆರಿಯರ್ ಮಂಗಳೂರು ಇವರ ಸಂಯೋಜನೆಯಲ್ಲಿ ಈ ಭಾಗದಲ್ಲಿ ಆರಂಭಿಸಲಾದ ಏವಿಯೇಶನ್ 500 ಅಲ್ಪಾವಧಿ ಕೋರ್ಸ್ಗಳು ಇಲ್ಲಿನ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿ. ಪ್ರಸ್ತುತ ದಿನಗಳಲ್ಲಿ ಏರ್ ಇಂಡಿಯಾ, ಇಂಡಿಗೋ ಸಂಸ್ಥೆಯು ಸರಾಸರಿ 500ರಂತೆ ವಿಮಾನಗಳನ್ನು ಖರೀದಿಸುತ್ತಿದೆ ಮಾತ್ರವಲ್ಲ ಇದು ಪ್ರತೀ ವರ್ಷವೂ ಚಾಲ್ತಿಯಲ್ಲಿದ್ದು ಅನೇಕ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿದೆ. ಆದರೆ ಗ್ರಾಮಾಂತರ ಪ್ರದೇಶದವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದ ಅವರು ಏವಿಯೇಶನ್ ಶಿಕ್ಷಣದಲ್ಲಿ ನಮ್ಮ ಬಾಡಿ ಲ್ಯಾಂಗ್ವೇಜ್, ಹೇಗೆ ಡ್ರೆಸ್ ಧರಿಸಬೇಕು, ಹೇಗೆ ಕಾಣಬೇಕು ಎನ್ನುವುದು ಅಡಕವಾಗಿರುತ್ತದೆ. ಏವಿಯೇಶನ್ ಶಿಕ್ಷಣವು ಅಲ್ಪಾವಧಿ ಶಿಕ್ಷಣವನ್ನು ಪಡೆದು ಒಳ್ಳೆಯ ಉದ್ಯೋಗವನ್ನು ಪಡೆಯಬಹುದಾಗಿದೆ ಎಂದರು.
ವೃತ್ತಿಪರ ಶಿಕ್ಷಣದಲ್ಲಿ ಅಕ್ಷಯ ಕಾಲೇಜು ಮುಂದು: ಸಂಪತ್ ಪಕ್ಕಳ
ಅಕ್ಷಯ ಕಾಲೇಜು ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಆರಂಭಿಸಿದ ಅಕ್ಷಯ ಕಾಲೇಜು ವೃತ್ತಿಪರ ಶಿಕ್ಷಣದಲ್ಲಿ ದಾಪುಗಾಲಿಟ್ಟಿರುವುದು ಶ್ಲಾಘನೀಯ. ಸಾಂಪ್ರದಾಯಿಕ ಬಿಎ ಕೋರ್ಸ್ನೊಂದಿಗೆ ಆರು ಪ್ರೊಫೆಶನಲ್ ಕೋಸ್‌ಗಳಿದ್ದು, ಪುತ್ತೂರು ಹಾಗೂ ಸುತ್ತಮುತ್ತಲೂ ಏವಿಯೇಶನ್ ಕೋರ್ಸ್ ಪ್ರಥಮ ಬಾರಿಗೆ ಪರಿಚಯಿಸಿದ್ದು ಅಕ್ಷಯ ಕಾಲೇಜು. 2021ರಲ್ಲಿ ಬಿಕಾಂ ಪದವಿಯೊಂದಿಗೆ ಏವಿಯೇಶನ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟನ್ನು ಕೆರಿಯರ್ ಡೆಸ್ಟಿನಿ ಮಂಗಳೂರು ಇವರ ಸಂಯೋಜನೆಯೊಂದಿಗೆ ಆರಂಭಿಸಿರುತ್ತೇವೆ. ಇದೀಗ ಬಿಕಾಂ ಪದವಿ ಮಾತ್ರವಲ್ಲದೆ ಬಿಎಸ್ಸಿ ಫ್ಯಾಷನ್ ಡಿಸೈನಿಂಗ್, ಬಿಎಸ್ಸಿ ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೋರೇಶನ್, ಬಿಕಾಂ, ಬಿಸಿಎ, ಹಾಸ್ಪಿಟಾಲಿಟಿ ಸೈನ್ಸ್ ಹೊಟೇಲ್ ಮ್ಯಾನೇಜ್ಮೆಂಟ್, ಬಿಎ ವಿದ್ಯಾರ್ಥಿಗಳಿಗೆ ಪದವಿ ವಿದ್ಯಾಭ್ಯಾಸದೊಡನೆ ಏವಿಯೇಶನ್ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಸಂಸ್ಥೆ ಮಾಡಿಕೊಟ್ಟಿದೆ ಎಂದರು.



