ಪುತ್ತೂರು: ಮಂಜಲ್ಪಡ್ಪು ಅಂಗನವಾಡಿ ಕೇಂದ್ರಕ್ಕೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವತಿಯಿಂದ 2024-25ನೇ ಸಾಲಿನಲ್ಲಿ ಕೊಡುಗೆಯಾಗಿ ನೀಡಿದ ರೂಫ್ ಶೀಟ್ ಅಳವಡಿಕೆ ಶಾಶ್ವತ ಯೋಜನೆಯ ಉದ್ಘಾಟನೆ ಜ. 30ರಂದು ಅಂಗನವಾಡಿ ಆವರಣದಲ್ಲಿ ನಡೆಯಿತು.
ಶಾಶ್ವತ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷ ಡಾ. ಶ್ರೀಪತಿ ರಾವ್, 5 ವರ್ಷದ ಬೆಳವಣಿಗೆಯಲ್ಲಿ ಮಕ್ಕಳ ಮೆದುಳು ಉತ್ತಮ ಬೆಳವಣಿಗೆಯಾಗುತ್ತದೆ. ಈ ಹೊತ್ತಿನಲ್ಲಿ ಅಂಗನವಾಡಿ ಕೇಂದ್ರದ ಕೆಲಸ ಶ್ಲಾಘನೀಯ. ಇಂತಹ ಅಂಗನವಾಡಿ ಮುಂಭಾಗ ಶೀಟ್ ಅಳವಡಿಸುವ ಕಾರ್ಯ ನೆರವೇರಿಸಿದ ರೋಟರ್ಯಾಕ್ಟ್ ಕಾರ್ಯ ಅಭಿನಂದನೀಯ ಎಂದರು.
ಯೂತ್ ಸರ್ವೀಸ್ ಡೈರೆಕ್ಟರ್ ಪ್ರೀತಾ ಹೆಗ್ಡೆ ಮಾತನಾಡಿ, ಇದೊಂದು ಉತ್ತಮ ಕಾರ್ಯ. ಈ ಯೋಜನೆ ಮೂಲಕ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನ ಹೆಸರು ಶಾಶ್ವತವಾಗಿ ಉಳಿದುಕೊಳ್ಳಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಸುಬ್ರಮಣಿ ಮಾತನಾಡಿ, ಸರ್ವ ಸದಸ್ಯರ ಸಹಕಾರ ಹಾಗೂ ದಾನಿಗಳ ನೆರವಿನಿಂದ ಈ ಶಾಶ್ವತ ಯೋಜನೆ ನಿರ್ಮಿಸಲಾಗಿದೆ ಎಂದರು.
ಸಭಾಪತಿ ಶ್ರೀಧರ್ ಕೆ., ಡಿ.ಎಸ್.ಎಸ್ ತಾಲೂಕು ಅಧ್ಯಕ್ಷ ಅಣ್ಷಪ್ಪ ಕಾರೆಕ್ಕಾಡು, ನಗರಸಭೆ ಸದಸ್ಯ ದಿನೇಶ್, ಝಡ್.ಆರ್.ಆರ್. ನವೀನ್ ರೈ ಬನ್ನೂರು, ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ದಾಮೋದರ್ ಉಪಸ್ಥಿತರಿದ್ದರು.
ಕಿಶೋರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆ ಕುಸುಮಾ ಸ್ವಾಗತಿಸಿದರು. ನಿಯೋಜಿತ ಅಧ್ಯಕ್ಷ ವಿನೀತ್ ವಂದಿಸಿ, ಶಶಿಧರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.