Gl jewellers
Hotel krishna bhavana
ಪ್ರಚಲಿತ

ವಾರದ ಒಂದು ದಿನವಾದರೂ ಧಾರ್ಮಿಕ ಕೇಂದ್ರಗಳಿಗೆ ಭೇಟಿ ಕೊಡಿ: ಅಶೋಕ್ ರೈ ; ಹಿಂದೂ ಧರ್ಮವನ್ನು ಒಟ್ಟುಗೂಡಿಸುವ ಶಕ್ತಿಯೇ ಕೋಟಿ-ಚೆನ್ನಯರು: ಸಂಜೀವ ಮಠಂದೂರು;  ರಾಮಜಾಲು: ಐತಿಹಾಸಿಕ ಶ್ರೀ ಬ್ರಹ್ಮಬೈದರ್ಕಳ ಗರಡಿ ನೇಮೋತ್ಸವದಲ್ಲಿ ರಾಮಜಾಲು ಗರಡಿ ಪ್ರಶಸ್ತಿ ಪ್ರಧಾನ

Karpady sri subhramanya
ಧರ್ಮದ ಅರಿವು ನಮ್ಮಲ್ಲಿ ಬರಬೇಕಾದರೆ ನಾವು ಧರ್ಮ ಗ್ರಂಥಗಳನ್ನು ಓದುವವರಾಗಬೇಕು, ಕೇವಲ ಭಾಷಣದಿಂದ ನಮ್ಮಲ್ಲಿ ಧರ್ಮದ ಅರಿವು ಮೂಡಲು ಅಸಾಧ್ಯ. ಪುಸ್ತಕ ಭಂಡಾರದಿಂದ ಹಾಗೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮಲ್ಲಿ ಧರ್ಮದ ಅರಿವು ಹೆಚ್ಚಾಗಲು ಸಾಧ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

Akshaya College

ಪುತ್ತೂರು: ಧರ್ಮದ ಅರಿವು ನಮ್ಮಲ್ಲಿ ಬರಬೇಕಾದರೆ ನಾವು ಧರ್ಮ ಗ್ರಂಥಗಳನ್ನು ಓದುವವರಾಗಬೇಕು, ಕೇವಲ ಭಾಷಣದಿಂದ ನಮ್ಮಲ್ಲಿ ಧರ್ಮದ ಅರಿವು ಮೂಡಲು ಅಸಾಧ್ಯ. ಪುಸ್ತಕ ಭಂಡಾರದಿಂದ ಹಾಗೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮಲ್ಲಿ ಧರ್ಮದ ಅರಿವು ಹೆಚ್ಚಾಗಲು ಸಾಧ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

SRK Ladders

ಅವರು ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿರುವ ಇತಿಹಾಸ ಪ್ರಸಿದ್ದ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಜ. 18ರಂದು ನಡೆದ ಶ್ರೀ ಬ್ರಹ್ಮಬೈದೇರುಗಳ ವಿಜೃಂಭಣೆಯ ಜಾತ್ರೋತ್ಸವದ ಅಂಗವಾಗಿ ಶ್ರೀ ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಧರ್ಮಚಾವಡಿಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವುದೇ ನಿಜವಾದ ಧರ್ಮವಾಗಿದೆ ಎಂದ ಅಶೋಕ್ ರೈಯವರು, ಹಿಂದೂ ಧರ್ಮ ಬಹಳಷ್ಟು ಹಿಂದೆ ಬಿದ್ದಿದೆ ಎಂಬ ವಿಷಯವನ್ನು ಹೇಳಿದರು. ಇತರ ಧರ್ಮದವರನ್ನು ಗಮನಿಸಿದರೆ ಮುಸ್ಲೀಂ ಭಾಂಧವರು ಪ್ರತಿ ಶುಕ್ರವಾರ ಮಸೀದಿಗೆ ಹೋಗುತ್ತಾರೆ, ಕ್ರೈಸ್ತ ಧರ್ಮದವರು ಪ್ರತಿ ಆದಿತ್ಯವಾರ ಚರ್ಚೆಗೆ ಹೋಗುತ್ತಾರೆ. ಆದರೆ ನಾವು ಹಿಂದುಗಳಿಗೆ ದೇವಸ್ಥಾನ, ದೈವಸ್ಥಾನ, ಇಂತಹ ಧರ್ಮ ನೇಮೋತ್ಸವಗಳಿಗೆ ಹೋಗಲು ಸಮಯವೇ ಇಲ್ಲದಾಗಿದೆ. ಇದು ಸರಿಯಲ್ಲ ಎಂದರು. ನಾವು ಕೂಡ ಧಾರ್ಮಿಕ ಕೇಂದ್ರಗಳಿಗೆ ವಾರದ ಒಂದು ದಿನವಾದರೂ ಹೋಗುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಹಿಂದೂ ಧರ್ಮವನ್ನು ಒಟ್ಟುಗೂಡಿಸುವ ಶಕ್ತಿಯೇ ಕೋಟಿ-ಚೆನ್ನಯರು: ಸಂಜೀವ ಮಠಂದೂರು

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಧರ್ಮ ಜಾಗೃತಿಗಾಗಿ ದೌರ್ಜನ್ಯದ ವಿರುದ್ಧ ಹೋರಾಡಿ ಧರ್ಮವನ್ನು ಎತ್ತಿ ಹಿಡಿಯುವ ಮೂಲಕ ದೈವಾಂಶ ಸಂಭೂತರಾಗಿ ಇಡೀ ತುಳುನಾಡಿಗೆ ಕೀರ್ತಿ ತಂದುಕೊಟ್ಟ ಅಮರವೀರರರಾದ ಕೋಟಿ ಚೆನ್ನಯರ ಇಡೀ ಮನುಕುಲಕ್ಕೆ ದೇವರಾಗಿದ್ದಾರೆ. ಹಿಂದೂ ಧರ್ಮವನ್ನು ಒಟ್ಟುಗೂಡಿಸುವ ಶಕ್ತಿ ಕೋಟಿ ಚೆನ್ನಯರಿಂದ ಬಂದಿದೆ. ಅವರನ್ನು ಆರಾಧಿಸುವ ಇಂತಹ ಶ್ರೀ ಬೈದೇರುಗಳ ಜಾತ್ರೋತ್ಸವದಿಂದ ಹಿಂದೂ ಧರ್ಮಕ್ಕೆ ಶಕ್ತಿ ಕೊಡುವ ಕೆಲಸ ಆಗುತ್ತಿದೆ ಎಂದು ಅವರು ಹೇಳಿದರು. ನಾವೆಲ್ಲರೂ ನಿಮಿತ್ತ ಮಾತ್ರ, ನಾನಲ್ಲ ಎಲ್ಲವೂ ದೈವ ದೇವರ ಲೀಲೆ ಎಂಬುದನ್ನು ನಾವು ಸಂಜೀವ ಪೂಜಾರಿಯವರಿಂದ ಕಲಿಯಬೇಕಾಗಿದೆ. ಎಲ್ಲರನ್ನು ಸೇರಿಸಿಕೊಂಡು ನೇಮೋತ್ಸವವನ್ನು ಜಾತ್ರೋತ್ಸವದ ಸಂಭ್ರಮಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ರಾಮಜಾಲು ಗರಡಿ ಪ್ರಶಸ್ತಿ ನನಗೆ ಬೈದೇರುಗಳ ಪ್ರಸಾದವಾಗಿದೆ : ಚಿತ್ತರಂಜನ್ ಬೋಳಾರ್

ಪ್ರತಿಷ್ಠಿತ `ರಾಮಜಾಲು ಗರಡಿ ಗೌರವ’ ಪ್ರಶಸ್ತಿ ಸ್ವೀಕರಿಸಿದ ಮಂಗಳೂರು ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ ಮಾತನಾಡಿ, ರಾಮಜಾಲುವಿನ ಗರಡಿ ಜಾತ್ರೋತ್ಸವವನ್ನು ಕಂಡು ನನಗೆ ಬಹಳಷ್ಟು ಸಂತೋಷವಾಗಿದೆ. ನನ್ನ ಬೆಳವಣಿಗೆಗೆ ಬೈದೇರುಗಳ ಆಶೀರ್ವಾದವೇ ಕಾರಣ. ಅವರ ಸೇವೆಯಿಂದಲೇ ನಾನು ಸಮಾಜದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಇಂದು ನನಗೆ ಪ್ರದಾನ ಮಾಡಿದ ಈ ` ರಾಮಜಾಲು ಗರಡಿ ಗೌರವ’ಪ್ರಶಸ್ತಿ ಇದು ನನಗೆ ಬೈದೇರುಗಳ ಪ್ರಸಾದವಾಗಿದೆ. ಸಮಾಜದಲ್ಲಿ ನನಗೆ ಇನ್ನಷ್ಟು ಸೇವೆ ಮಾಡಲು ಈ ಪ್ರಶಸ್ತಿ ಪ್ರೋತ್ಸಾಹ ನೀಡಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಸಂಜೀವ ಪೂಜಾರಿಯವರ ಕಾರ್ಯಕ್ರಮ ವ್ಯವಸ್ಥೆಯನ್ನು ಕಂಡ ಬಹಳಷ್ಟು ಖುಷಿ ಆಯಿತು. ಒಂದು ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರನ್ನು ಕೂಡ ಗೌರವಿಸುತ್ತಿರುವುದು ಅವರ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಸಂಜೀವ ಪೂಜಾರಿಯವರ ಶ್ರಮ: ಶಯನಾ ಜಯಾನಂದ್

ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಶಯನಾ ಜಯಾನಂದ್‌ ಮಾತನಾಡಿ, ರಾಮಜಾಲುವಿನ ಗರಡಿ ಜಾತ್ರೋತ್ಸವದ ಸಂಭ್ರಮ ಕಣ್ತುಂಬಿ ಬಂದಿದೆ. ಇಷ್ಟೊಂದು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ಸಂಜೀವ ಪೂಜಾರಿಯವರ ಶ್ರಮ ಎದ್ದು ಕಾಣುತ್ತಿದೆ. ನನ್ನೂರಿನ ಪ್ರತಿಭೆಗಳಿಗೆ ವೇದಿಕೆ ನೀಡಿದ್ದು, ಅಲ್ಲದೆ ನೇಮೋತ್ಸವಕ್ಕೆ ಸಹಕರಿಸಿದ ಕರಸೇವಕರಿಗೆ ವೇದಿಕೆಯಲ್ಲೇ ಗೌರವ ನೀಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಸಂಜೀವ ಪೂಜಾರಿಯವರಿಗೆ ಬ್ರಹ್ಮಬೈದೇರುಗಳು ಒಳ್ಳೆಯದನ್ನು ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.

ಎಲ್ಲವೂ ದೈವ ದೇವರ ಕೃಪೆ: ಸಂಜೀವ ಪೂಜಾರಿ ಕೂರೇಲು

ಪ್ರಾಸ್ತಾವಿಕವಾಗಿ ಮಾತನಾಡಿದ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು, ಇಲ್ಲಿ ನಾನು ಎಂಬುದು ಕೇವಲ ನಿಮಿತ್ತ ಮಾತ್ರ. ಎಲ್ಲವೂ ದೈವ ದೇವರ ಕೃಪೆ ಹಾಗೂ ಊರಪರವೂರ ಭಕ್ತಾಧಿಗಳ ಸಹಕಾರದಿಂದ ನಡೆಯುತ್ತಿದೆ. ರಾಮಜಾಲು ಹಾಗೂ ಕೂರೇಲು ಒಂದು ಸತ್ಯಧರ್ಮದ ಮಣ್ಣಾಗಿದೆ. ಇಲ್ಲಿ ನೆಲೆಯಾಗಿರುವ ದೈವ ದೇವರು ನಮ್ಮೆನ್ನೆಲ್ಲಾ ಹರಸುತ್ತಿದ್ದಾರೆ. ದೈವ ದೇವರ ಆಶೀರ್ವಾದದಿಂದ ಹಾಗೂ ನಿಮ್ಮೆಲ್ಲರ ಸಹಕಾರದಿಂದ ಪ್ರತಿಯೊಂದು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ ಎಂದರು.

ಈ ಮೊದಲು ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಪ್ರಶಸ್ತಿ ನೀಡುತ್ತಿದ್ದೇವು. ಆದರೆ ಈ ವರ್ಷದಿಂದ ಗರಡಿ ಹೆಸರಲ್ಲಿ ರಾಮಜಾಲು ಗರಡಿ ಗೌರವ ಪ್ರಶಸ್ತಿ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಪ್ರಶಸ್ತಿ ಕೊಡಲಿದ್ದೇವೆ. ಆದರೆ ಇದೊಂದು ಗರಡಿ ಗೌರವ ಆಗಿದ್ದು ಕ್ಷೇತ್ರಕ್ಕೆ ಹೆಮ್ಮೆ ಆಗಿದೆ ಎಂದರು. ರಾಮಜಾಲು ಶ್ರೀ ಬೈದೇರುಗಳ ಜಾತ್ರೋತ್ಸವವನ್ನು ಇಷ್ಟೊಂದು ಸಂಭ್ರಮದಿಂದ ಅಚರಿಸಲು ನನಗೆ ಊರಪರವೂರ ಭಕ್ತರು ಬಹಳಷ್ಟು ಸಹಕಾರ ನೀಡಿದ್ದಾರೆ. ಪರ್ಪುಂಜದ ಸ್ನೇಹ ಯುವಕ ಮಂಡಲ ಮತ್ತು ಯುವತಿ ಮಂಡಲ, ಕೂರೇಲು ಮಲರಾಯ ಸ್ವಯಂ ಸೇವಕ ಸಂಘ ಹಾಗೇ ಈ ಊರಿನ, ಗ್ರಾಮದ ಭಕ್ತಾಧಿಗಳು ಸೇರಿದಂತೆ ಹತ್ತೂರಿನ ಭಕ್ತರ ಸಹಕಾರದಿಂದ ಇದು ಸಾಧ್ಯವಾಗಿದೆ. ನಾನು ಇಲ್ಲಿ ಕೇವಲ ನಿಮಿತ್ತ ಮಾತ್ರ. ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿ ಎಲ್ಲರಿಗೂ ಶ್ರೀ ಬೈದೇರುಗಳು ಒಳ್ಳೆಯದನ್ನು ಕರುಣಿಸಲಿ ಎಂದು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಾತ್ರೋತ್ಸವಕ್ಕೆ ಸಹಕಾರ ನೀಡಿದ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲದ ಪದಾಧಿಕಾರಿಗಳನ್ನು ಹಾಗೂ ಶ್ರೀ ಕೂರೇಲು ಮಲರಾಯ ಸ್ವಯಂ ಸೇವಕ ವೃಂದದ ಪದಾಧಿಕಾರಿಗಳನ್ನು ಶಾಲು ಹಾಕಿ ಗೌರವಿಸಲಾಯಿತು. ಇದಲ್ಲದೆ ಜನಾರ್ದನ ಪೂಜಾರಿ ಅಡ್ಯಾರ್, ರಾಜೇಶ್ ರೈ ಪರ್ಪುಂಜ, ಶಶಿಧರ ಪೂಜಾರಿ ಮಾಣಿಜಾಲು, ರಮೇಶ್ ಪೂಜಾರಿ ಮಣಿಜಾಲುರವರುಗಳನ್ನು ದಂಪತಿಗಳ ಸಹಿತ ಶಾಲು, ಪೇಟಾ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ, ಉದ್ಯಮಿ ಜಯಂತ ನಡುಬೈಲ್, ಕೂರೇಲು ಸಂಜೀವ ಪೂಜಾರಿಯವರ ಪತ್ನಿ ಸರಸ್ವತಿ ಸಂಜೀವ ಪೂಜಾರಿ ಕೂರೇಲು ಉಪಸ್ಥಿತರಿದ್ದರು.

ಅಭಿಜ್ಞಾ ಭಟ್ ಪ್ರಾರ್ಥಿಸಿದರು. ಹರ್ಷಿತ್ ಕುಮಾರ್ ಕೂರೇಲು ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

`ರಾಮಜಾಲ್ದ ಬ್ರಹ್ಮ ಬೈದೆರ್ಲು’ ಆಲ್ಬಂ ಸಾಂಗ್ ಬಿಡುಗಡೆ, ಮನರಂಜಿಸಿದ `ಏರ್ಲಾ ಗ್ಯಾರಂಟಿ ಅತ್ತ್..’ ತುಳು ನಾಟಕ

ರಾಮಜಾಲು ಗರಡಿಯ ಇತಿಹಾಸ ಸಾರುವ `ರಾಮಜಾಲ್ದ ಬ್ರಹ್ಮ ಬೈದೆರ್ಲು’ ಎನ್ನುವ ತುಳು ಆಲ್ಬಂ ಸಾಂಗ್ ಅನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು. ಪದ್ಮರಾಜ್ ಬಿ.ಸಿ ಚಾರ್ವಾಕ ಸಾಹಿತ್ಯ, ನಿರ್ದೇಶನದೊಂದಿಗೆ ಅಭಿಜ್ಞಾ ಭಟ್ ಹಾಡುಗಾರಿಕೆ, ಮಿಥುನ್‌ರಾಜ್ ವಿದ್ಯಾಪುರ ಸಂಕಲನ ಮತ್ತು ರೇಕಾರ್ಡಿಂಗ್, ಸಚಿನ್ ಸುವರ್ಣ ಶೇಣಿ ನಿರ್ಮಾಣದಲ್ಲಿ ಈ ಆಲ್ಬಂ ಸಾಂಗ್ ಮೂಡಿಬಂದಿದೆ. ಚಾ ಪರ್ಕ ಕಲಾವಿದರು ಕುಡ್ಲ ಇವರ ಅಭಿನಯದಲ್ಲಿ ಮೂಡಿಬಂದ ವರ್ಷದ ಸೂಪರ್ ಹಿಟ್ ತುಳು ಹಾಸ್ಯಮಯ ನಾಟಕ `ಏರ್ಲಾ ಗ್ಯಾರಂಟಿ ಅತ್ತ್..’ ಮನರಂಜಿಸಿತು. ಮಧ್ಯರಾತ್ರಿ ವೇಳೆಯಲ್ಲಿ ಆರಂಭವಾದ ನಾಟಕವನ್ನು ವೀಕ್ಷಿಸಲು ಸಾವಿರಾರು ಮಂದಿ ವೀಕ್ಷಿಸಿ ಖುಷಿಪಟ್ಟರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸ್ಥಳೀಯ ಪ್ರತಿಭೆಗಳಿಂದ ಹಾಡು, ನೃತ್ಯ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿ, ಮಹಾ ಅನ್ನಸಂತರ್ಪಣೆ

ರಾಮಜಾಲು ಗರಡಿ ಜಾತ್ರೋತ್ಸವಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸುಮಾರು 15 ಸಾವಿರಕ್ಕೂ ಅಧಿಕ ಮಂಧಿ ಭಕ್ತರು ಆಗಮಿಸಿ ಶ್ರೀ ಕೋಟಿ ಚೆನ್ನಯರು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಹಾಗೂ ರಾತ್ರಿ ಶುಚಿ-ರುಚಿಯಾದ ಅನ್ನಸಂತರ್ಪಣೆ ನಡೆಯಿತು. ಈ ಮಹಾ ಅನ್ನಸಂತರ್ಪಣೆಯಲ್ಲಿ ಈ ವರ್ಷವೂ ಸುಮಾರು 6 ಸಾವಿರಕ್ಕಿಂತ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ವಿಜೃಂಭಣೆಯ ಶ್ರೀ ಬೈದೇರುಗಳ ಜಾತ್ರೋತ್ಸವ:

ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ರಾತ್ರಿ ಶ್ರೀ ಬೈದೇರುಗಳು ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಬಳಿಕ ಬೈದೇರುಗಳ ಮೀಸೆ ಧರಿಸುವುದು ನಡೆದು ಮಾಯಂದಾಲೆ(ಮಾಣಿ ಬಾಲೆ) ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ಬೆಳಿಗ್ಗಿನ ಜಾವ ಕೋಟಿ ಚೆನ್ನಯರ ದರ್ಶನ ಪಾತ್ರಿಗಳ ಸೇಟ್ (ಸುರ್ಯ ಹಾಕಿಕೊಳ್ಳುವುದು) ನಡೆಯಿತು ಬಳಿಕ ಬೈದೇರುಗಳ ಸೇಟ್ (ಸುರ್ಯ ಹಾಕಿಕೊಳ್ಳುವುದು) ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಅರುಣೋಯದಕ್ಕೆ ನೇಮೋತ್ಸವದಿಂದ ದೈವ ಸಂತೃಪ್ತಿಗಾಗಿ ಕಂಚಿಕಲ್ಲಿಗೆ ಕಾಯಿ ಸೇಜನೆಯೊಂದಿಗೆ ನೇಮೋತ್ಸವ ಪರಿಸಮಾಪ್ತಿಯಾಯಿತು.

ದೈವ ದೇವರ ಸೇವೆಯಿಂದ ಜೀವನ ಪಾವನ: ಬ್ರಿಜೇಶ್ ಚೌಟ

ರಾಮಜಾಲು ಗರಡಿ ಜಾತ್ರೋತ್ಸವಕ್ಕೆ ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರು ರಾತ್ರಿ ಭೇಟಿ ನೀಡಿದರು. ಇದೇ ಸಂದರ್ಭ ಮಾತನಾಡಿದ ಅವರು, ಈ ಭೂಮಿಯಲ್ಲಿ ಯಾರೂ ಕೂಡ ಶಾಶ್ವತರಲ್ಲ, ಶಾಶ್ವತವೆಂದಿದ್ದರೆ ಅದು ದೈವ ದೇವರು ಮಾತ್ರ. ಆದ್ದರಿಂದ ನಾವೆಲ್ಲರೂ ಇಂತಹ ಧರ್ಮ ನೇಮೋತ್ಸವ, ಜಾತ್ರೋತ್ಸವದಲ್ಲಿ ಭಾಗಿಗಳಾಗುವ ಮೂಲಕ ದೈವ ದೇವರ ಕೃಪೆಗೆ ಪಾತ್ರರಾಗಬೇಕು. ಕೂರೇಲು ಸಂಜೀವ ಪೂಜಾರಿಯವರು ಓರ್ವ ದೈವ ಭಕ್ತ ಎಂಬುದನ್ನು ತಿಳಿದುಕೊಂಡಿದ್ದೆ. ಅದು ನಿಜವೆಂದು ಇಲ್ಲಿ ನಡೆಯುವ ಜಾತ್ರೋತ್ಸವವನ್ನು ಕಂಡಾಗ ನನಗಾಯಿತು. ಮುಂದಿನ ದಿನಗಳಲ್ಲಿ ಸಂಜೀವ ಪೂಜಾರಿಯವರಿಂದ ಇನ್ನಷ್ಟು ಧರ್ಮ ಕಾರ್ಯಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸದರಿಗೆ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಗೌರವ ಸನ್ಮಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿ, ಶ್ರೀ ಬೈದೇರುಗಳ ಪ್ರಸಾದ ನೀಡಿ ಸತ್ಕರಿಸಿ, ಶ್ರೀ ಬ್ರಹ್ಮಬೈದೇರುಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ನಿಮ್ಮಿಂದ ಈ ರಾಜ್ಯಕ್ಕೆ ಒಳ್ಳೆಯದು ಆಗಲಿ. ಸಂಸದರಾದ ಮೊದಲ ವರ್ಷವೇ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಸಂಸದರು ನೀವಾಗಿದ್ದೀರಿ. ಸನಾತನ ಹಿಂದೂ ಧರ್ಮದ ಆಚಾರ ವಿಚಾರವನ್ನು ತಿಳಿದುಕೊಂಡಿರುವ ಓರ್ವ ವೀರ ಯೋಧರಾದ ನಿಮ್ಮ ಆಗಮನ ನಮ್ಮ ಯುವಕರಲ್ಲಿ ಮತ್ತಷ್ಟು ಚೈತನ್ಯ ಮೂಡಿಸಿದೆ. ನಿಮ್ಮ ಆಗಮನ ನಮಗೆ ಬಹಳಷ್ಟು ಖುಷಿ ಮತ್ತು ಹೆಮ್ಮೆ ತಂದಿದೆ ಎಂದು ಹೇಳಿ ಶುಭ ಹಾರೈಸಿದರು. ರಾತ್ರಿ 11.45ರ ಸುಮಾರಿಗೆ ಆಗಮಿಸಿದ ಸಂಸದ ಬ್ರಿಜೇಶ್ ಚೌಟರವರು ಮಧ್ಯರಾತ್ರಿ 1 ಗಂಟೆಯ ತನಕ ಗರಡಿಯಲ್ಲಿದ್ದು ಕೋಟಿ ಚೆನ್ನಯರ ನರ್ತನ, ಬೈದೇರುಗಳು ಮೀಸೆ ಧರಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ವೀಕ್ಷಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Kerala Astrologer

Related Posts

ಎಟಿಎಂಗೆ ಹಣಹಾಕಲು ಬಂದ SBI ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು! 93 ಲಕ್ಷ ರೂಪಾಯಿ ದೋಚಿದ ದರೋಡೆಕೋರರು

ಎಸ್ ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣ ಜಮೆ ಮಾಡಲು ಸಿಬ್ಬಂದಿ ಬಂದಿದ್ದರು. ಈ ವೇಳೆ ಬೈಕ್ ಮೇಲೆ ಬಂದ…

ಮಂಗಳೂರು: ಕೋಟೆಕಾರು ಸೇವಾ ಬ್ಯಾಂಕ್ ದರೋಡೆ ಪ್ರಕರಣ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡು ಹಾರಿಸಿದ ಪೋಲಿಸರು.!!

ರಾಜ್ಯವನ್ನೇ ಬೆಚ್ಚ ಬೀಳಿಸಿದ್ದ  ಕೋಟೆಕಾರು ವ್ಯವಸಾಯ  ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ…

ಗುಪ್ತಗಾಮಿನಿಯಾಗಿದ್ದ ಜೀವನದಿ ‘ಸರಸ್ವತಿ’ ಮತ್ತೆ ಉಗಮ? ಬೋರ್ವೆಲ್ ಕೊರೆಯುವಾಗ ಉಕ್ಕಿದ ಪ್ರವಾಹದಿಂದ ಉಂಟಾದ ನದಿ??

ಮರುಭೂಮಿಯಲ್ಲಿ ವಿಸ್ಮಯವೊಂದು ನಡೆದಿದೆ. ತಾರಗಢ ಗ್ರಾಮದಲ್ಲಿ ಶನಿವಾರ ಕೆಲವು ಕಾರ್ಮಿಕರು…

ಪುತ್ತೂರು :ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತಂಡಕ್ಕೆ ಔಟ್ ಸ್ಟ್ಯಾಂಡಿಂಗ್ ಪರ್ಫಾರ್ಮೆನ್ಸ್ ವಿನ್ನರ್ ಪ್ರಶಸ್ತಿ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಏರಿಯಾ ಬಿ ರೀಜನಲ್ ಕಾನ್ ಕೋರ್ಸ್ ಬಿ ಮತ್ತು ಎಫ್ ವಲಯ…