tamanvi
ಪ್ರಚಲಿತ

ಶಬರಿಮಲೆ ನೂತನ ಮುಖ್ಯ ಅರ್ಚಕರಾಗಿ ಎಸ್. ಅರುಣ್ ಕುಮಾರ್ ನಂಬೂತಿರಿ

ಶಬರಿಮಲೆ ನೂತನ ಮುಖ್ಯ ಅರ್ಚಕರಾಗಿ ಎಸ್. ಅರುಣ್ ಕುಮಾರ್ ನಂಬೂತಿರಿ

ಈ ಸುದ್ದಿಯನ್ನು ಶೇರ್ ಮಾಡಿ

ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಾಲಯದ ನೂತನ ಮುಖ್ಯ ಅರ್ಚಕರಾಗಿ (ಮೇಲ್‌ಶಾಂತಿ) ಅರುಣ್ ಕುಮಾರ್ ನಂಬೂತಿರಿ ಆಯ್ಕೆಯಾಗಿದ್ದಾರೆ.

ಶಬರಿಮಲೆ ಸನ್ನಿಧಾನದಲ್ಲಿ ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚೀಟಿ ಎತ್ತುವ ಮೂಲಕ ನೂತನ ಮುಖ್ಯ ಅರ್ಚಕ ಆಯ್ಕೆ ನಡೆಯಿತು.

ಇವರು ಕೊಲ್ಲಂನ ಶಕ್ತಿಕುಳಂಜರ ಮೂಲದವರು. ಕೋಝಿಕ್ಕೋಡ್ ತಿರುಮಂಗಲಂ ಇಲ್ಲಂ ವಾಸುದೇವನ್ ನಂಬೂತಿರಿ ಅವರು ಮಾಳಿಕಪ್ಪುರಂ ದೇವಸ್ಥಾನದ ಮುಖ್ಯ ಅರ್ಚಕರಾಗಿ ಆಯ್ಕೆಯಾದರು.

ಶಬರಿಮಲೆಯ ಮುಖ್ಯ ಅರ್ಚಕರ ಪಟ್ಟಿಯಲ್ಲಿ 25 ಮಂದಿ ಮತ್ತು ಮಾಳಿಕಪ್ಪುರಂ 15 ಮಂದಿ ಇದ್ದರು. ದೇವಾಲಯದ ತಂತ್ರಿಗಳಾದ ಕಂಠರರ್‌ ರಾಜೀವರ್‌, ಕಂಠರರ್ ಬ್ರಹ್ಮದತ್ತ, ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಪುತ್ತೂರು: ₹3 ಲಕ್ಷ ಮೌಲ್ಯದ ಚಿನ್ನ, ಹಣವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ; ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಪರ್ಸ್‌ವೊಂದನ್ನು ಅದರ ವಾರಸುದಾರರನ್ನು…

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…