ಪ್ರಚಲಿತ

ಪುತ್ತೂರು ಮುಳಿಯದಲ್ಲಿ ಡೈಮಂಡ್ ಫೆಸ್ಟ್ ವಿಶೇಷ ಉತ್ಸವ ಉದ್ಘಾಟನೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪ್ರಸಿದ್ಧ ಆಭರಣ ಸಂಸ್ಥೆ ಮುಳಿಯ ಗೋಲ್ಡ್ -ಡೈಮಂಡ್ಸ್ ವತಿಯಿಂದ ಗ್ರಾಹಕರಿಗಾಗಿ ಆಯೋಜಿಸಲಾದ ‘ಡೈಮಂಡ್ ಫೆಸ್ಟ್’ ವಿಶೇಷ ಉತ್ಸವ ಮಾ. 30ರಂದು ಉದ್ಘಾಟನೆಯಾಯಿತು.

chennai-shopping
maithri

muliya

ಸುಬ್ರಹ್ಮಣ್ಯ ಶ್ರೀಕೃಷ್ಣ ರೆಸಿಡೆನ್ಸಿ ಮಾಲಕಿ ಪ್ರಜ್ಞಾ ಶೆಣೈ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಗುಣಮಟ್ಟ ಮತ್ತು ನಂಬಿಕೆಯಿಂದ ಜನರ ವಿಶ್ವಾಸ ಗಳಿಸಿರುವ ಮುಳಿಯ ಜ್ಯುವೆಲ್ಸ್ ಹತ್ತೂರಿನಲ್ಲಿ ಮನೆ ಮಾತಾಗಿದೆ ಎಂದರು. ಗ್ರಾಹಕರ ಆಯ್ಕೆಗೆ ತಕ್ಕಂತೆ ವಿಶಾಲ ಸಂಗ್ರಹ ಹಾಗೂ ಸಿಬಂದಿ ಆತ್ಮೀಯ ಸೇವೆ ಸಂಸ್ಥೆಯ ವಿಶೇಷತೆ ಎಂದರು. ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ವೈದ್ಯ ಡಾ| ಎಂ.ಎಸ್. ಶೆಣೈ ಮಾತನಾಡಿ, ಮುಳಿಯ ಸಂಸ್ಥೆಯೊಂದಿಗೆ ಇರುವ ಆತ್ಮೀಯ ಒಡನಾಟವನ್ನುಸ್ಥರಿಸಿ, ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಕಳೆದ 23 ವರ್ಷಗಳಿಂದ ನಡೆಯುತ್ತಿರುವ ಡೈಮಂಡ್ ಫೆಸ್ಟ್‌ಗೆ ಇತ್ತೀಚಿನ ವರ್ಷಗಳಲ್ಲಿ ಹೊಸ ರೂಪ ನೀಡಲಾಗಿದೆ. ವಜ್ರಾಭರಣ ಖರೀದಿ ಸಾಧ್ಯವೇ ಎನ್ನುವ ಕಾಲಘಟ್ಟದಲ್ಲಿ ಕೈಗೆಟುಕುವ ದರದಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮುಳಿಯ ಗೋಲ್ಡ್ – ಡೈಮಂಡ್ಸ್‌ನಲ್ಲಿ ವೈವಿಧ್ಯಮಯ ಸಂಗ್ರಹ ಲಭ್ಯವಿದ್ದು, ವಜ್ರಾಭರಣಗಳ ಮೇಲೆ ಶೇ.95 ಎಕ್ಸ್ ಚೇಂಜ್ ಹಾಗೂ ಶೇ.90 ಬೈಬ್ಯಾಕ್ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಪ್ರಥಮ ಗ್ರಾಹಕಿ ಸಿಂಚನಾ (ನೆಹರೂನಗರ) ಅವರಿಗೆ ವಜ್ರಾಭರಣ ಹಸ್ತಾಂತರಿಸಲಾಯಿತು. ಗ್ರಾಹಕಿ ಮಮತಾ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉದ್ಯಮಿ ಪ್ರಜ್ವಲ್ ಕಾಮತ್, ಸಂಸ್ಥೆಯ ಆಡಳಿತ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ಉಪಸ್ಥಿತರಿದ್ದರು.

ಸಂಸ್ಥೆಯ ರಾಜೇಶ್ ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

ಫೆಸ್ಟ್‌ ವಿಶೇಷ

‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವದಲ್ಲಿ ರೂ. 50,000ಕ್ಕಿಂತ ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆ ನೀಡಲಾಗುತ್ತಿದೆ. ಜತೆಗೆ ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ನಿಕ್ ಸ್ಕೂಟರ್ ಗೆಲ್ಲುವ ಅವಕಾಶವೂ ಕಲ್ಪಿಸಲಾಗಿದೆ.

ಉತ್ಸವದ ಅಂಗವಾಗಿ ವಿವಿಧ ವಿನ್ಯಾಸಗಳ ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದ್ದು, ಮದುವೆ ಹಾಗೂ ಹಬ್ಬದ ಸೀಸನ್ ಗಮನದಲ್ಲಿಟ್ಟುಕೊಂಡು ಹಾರಗಳು, ಕಿವಿಯೋಲೆಗಳು, ಉಂಗು ರಗಳು ಸೇರಿದಂತೆ ಹಲವಾರು ನವೀನ ಆಭರಣಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ವಜ್ರಾಭರಣಗಳ ಮೇಲೆ ಶೇ.95 ಎಕ್ಸ್‌ಚೇಂಜ್ ಹಾಗೂ ಶೇ.90 ಬೈಬ್ಯಾಕ್ ಸೌಲಭ್ಯ ನೀಡಲಾಗುತ್ತಿದ್ದು, ಹಳೆಯ ಆಭರಣಗಳನ್ನು ಹೊಸದಾಗಿ ಪರಿವರ್ತಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

ಅಮೂಲ್ಯ ಡೈಮಂಡ್ಸ್ ಹಾಗೂ ಕಿನ್ನ ಡೈಮಂಡ್ – ಗೋಲ್ಡ್ ಜ್ಯುವೆಲ್ಲರಿ ಬ್ಯಾಂಡ್‌ಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಉತ್ಸವ ಗುಣಮಟ್ಟ ಹಾಗೂ ವೈವಿಧ್ಯತೆಯಲ್ಲಿಯೂ ಗಮನ ಸೆಳೆಯುತ್ತಿದೆ. ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಮತ್ತು ಗೋಣಿಕೊಪ್ಪ ಶಾಖೆಗಳಲ್ಲಿ ಈ ಡೈಮಂಡ್ ಫೆಸ್ಟ್ ನಡೆಯುತ್ತಿದ್ದು ಗ್ರಾಹಕರು ಸಮೀಪದ ಶೋರೂಮ್‌ ಗಳಿಗೆ ಭೇಟಿ ನೀಡಿ ಆಫರ್‌ಗಳನ್ನು ಸದು ಪಯೋಗ ಪಡಿಸಿ ಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts