pashupathi
ಪ್ರಚಲಿತ

ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಜಾಗ ಖರೀದಿಗೆ ರೂ.50 ಕೋಟಿ- ಅದಾನಿ ಗ್ರೂಪ್ ಒಪ್ಪಿಗೆ |ಶಾಸಕ ಅಶೋಕ್ ರೈಯವರ ಅಧಿವೇಶನದ ಪ್ರಸ್ತಾಪ ಫಲಪ್ರದ

tv clinic
15 ವರ್ಷಗಳ ಹಿಂದೆ ವಿಮಾನವು ರನ್ ವೇ ದಾಟಿ ಕಾಂಪೌಂಡ್ ಸೀಳಿ ಕೆಳಗಿನ ಕಣಿವೆಗೆ ಬಿದ್ದಿರುವ ದುರಂತ ಘಟನೆಯ ಮಂಗಳೂರು ಬಟ್ಟೆ ವಿಮಾನ ನಿಲ್ದಾಣದಲ್ಲಿದ್ದ ರನ್ ವೇ ಬಹಳ ಅಪಾಯಕಾರಿ.ಟೇಬಲ್ ಟಾಪ್ ವಿನ್ಯಾಸದ್ದಾಗಿದ್ದು ಇಲ್ಲಿಯ ರನ್ ವೇಗಳಲ್ಲಿ ವಿಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 15 ವರ್ಷಗಳ ಹಿಂದೆ ವಿಮಾನವು ರನ್ ವೇ ದಾಟಿ ಕಾಂಪೌಂಡ್ ಸೀಳಿ ಕೆಳಗಿನ ಕಣಿವೆಗೆ ಬಿದ್ದಿರುವ ದುರಂತ ಘಟನೆಯ ಮಂಗಳೂರು ಬಟ್ಟೆ ವಿಮಾನ ನಿಲ್ದಾಣದಲ್ಲಿದ್ದ ರನ್ ವೇ ಬಹಳ ಅಪಾಯಕಾರಿ.ಟೇಬಲ್ ಟಾಪ್ ವಿನ್ಯಾಸದ್ದಾಗಿದ್ದು ಇಲ್ಲಿಯ ರನ್ ವೇಗಳಲ್ಲಿ ವಿಮಾನ ಇಳಿಸುವುದು ಬಹಳ ಅಪಾಯಕಾರಿ.ಈ ಕುರಿತು ಹೆಚ್ಚುವರಿ ಜಾಗವನ್ನು ಖರೀದಿಸಲು ರೂ.50 ಕೋಟಿಯನ್ನು ನೀಡುವುದಾಗಿ ವಿಮಾನ ನಿಲ್ದಾಣವನ್ನು ಲೀಸ್‌ಗೆ ಪಡೆದುಕೊಂಡಿರುವ ಅದಾನಿ ಗ್ರೂಪ್ ಒಪ್ಪಿಗೆ ಸೂಚಿಸಿದೆ. ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೆ ಯಶಸ್ಸು ಸಿಕ್ಕಿದಂತಾಗಿದೆ.

ಬಜ್ಜೆ ವಿಮಾನ ನಿಲ್ದಾಣ ರನ್ ವೇ ಬಹಳ ಕಡಿಮೆ ಇದೆ.ಕನಿಷ್ಟ ಪಕ್ಷ 3.5 ಕಿ.ಮೀ ರನ್‌ವೇ ಬೇಕು.ಆದರೆ ಇಲ್ಲಿ 2.6 ಕಿ.ಮೀ ರನ್ ವೇ ಇದೆ.ಹಾಗಾಗಿ ರನ್‌ವೇ ವಿಸ್ತರಣೆಗೆ ಸರಕಾರ 32 ಜಾಗವನ್ನು ಅಕ್ಟೇರ್ ಮಾಡಲು ಯೋಜನೆ ರೂಪಿಸಿದೆ.ಇದರಲ್ಲಿ 10 ಎಕ್ರೆ ಸರಕಾರದ್ದು. ಅದನ್ನು ಸರಕಾರ ಉಚಿತವಾಗಿ ನೀಡುತ್ತದೆ.ಉಳಿದ 22 ಎಕ್ರೆ ಜಾಗವನ್ನು ಖರೀದಿಸಬೇಕು. 5

ಮೊನ್ನೆ ನಮಗೂ ಅನುಭವ ಆಗಿದೆ:

ಬಜೆ ವಿಮಾನ । ನಿಲ್ದಾಣದಲ್ಲಿ ರಿಸ್ಕ್ ಇದೆ.ದೊಡ್ಡ ವಿಮಾನ ನಮ್ಮಲ್ಲಿ ಲ್ಯಾಂಡ್ ಆಗುತ್ತಿಲ್ಲ.15 ವರ್ಷಗಳ ಹಿಂದೆ ‘ಗಳ ಹಿಂದೆ ವಿಮಾನ ಲ್ಯಾಂಡ್ ಆಗುವಾಗ ರನ್‌ವೇಯಿಂದ ಹೊರಗೆ ಬಂದು ಕಣಿವೆಗೆ ಬಿದ್ದು ಕ್ರಾಶ್ ಆಗಿರುವುದಕ್ಕೆ ರನ್‌ವೇ ಕೊರತೆ ಕಾರಣ. ನಾನು ಮೊನ್ನೆ ಬಂದ ವಿಮಾನ ಕೂಡಾ ರನ್ ವೇಯಲ್ಲಿ ಲ್ಯಾಂಡ್ ಆಗಬೇಕಾಗಿದ್ದ ಮಾರ್ಕ್‌ನಿಂದ ಮುಂದೆ ಹೋಗಿದೆ. ಅದು ಸೆಕೆಂಡಿಗೆ 350 ಕಿ.ಮೀ.ವೇಗದಲ್ಲಿತ್ತು.1 ಸೆಕೆಂಡು ಕಡಿಮೆ ಆದಾಗ ವಿಮಾನ ಸುಮಾರು 100ಕಿ.ಮೀ ಮುಂದೆ ಹೋಗಿ ಆಗಿರುತ್ತದೆ. ಹಾಗೆ ಮತ್ತೆ ಲ್ಯಾಂಡ್ ಆದರೆ ಮುಂದೆ ಹೋಗಲು ಜಾಗ ಇರುವುದಿಲ್ಲ.ಮೊನ್ನೆ ನಮ್ಮ ವಿಮಾನ ಕೂಡಾ ಅದೇ ರೀತಿ ಆಗಿದೆ.ನಾನು ಮತ್ತು ಖಾದರ್ ಮೆತ್ತಿತರರು ವಿಮಾನದಲ್ಲಿದ್ದೆವು. ವಿಮಾನ ಲ್ಯಾಂಡ್ ಆದಾಗ ಮಾರ್ಕ್‌ನಿಂದ ಮುಂದೆ ಲ್ಯಾಂಡ್ ಆಗಿರುವ ವಿಚಾರ ಪೈಲೆಟ್‌ಗೆ ಗೊತ್ತಾಗಿ ಕೂಡಲೇ ಮೇಲಕ್ಕೆ ಹಾರಿಸಿದ್ದು ಒಂದು ಸುತ್ತು ಹಾಕಿ ಮತ್ತೆ ಸುರಕ್ಷಿತವಾಗಿ ಇಳಿದಿದೆ ಎಂದು, ತನಗಾದ ಆತಂಕಕಾರಿ ಅನುಭವವನ್ನು ಶಾಸಕರು ಹಂಚಿಕೊಂಡರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ | ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪುತ್ತೂರಿನ ನ್ಯಾಯಾಧೀಶರು

ಪುತ್ತೂರು: ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು…

ಅನಧಿಕೃತ ಶಾಲೆಗಳ ಸಂಖ್ಯೆ ಬಹಿರಂಗಪಡಿಸಿದ ಸರ್ಕಾರ: ಕಠಿಣ ಕ್ರಮದ ಸೂಚನೆ | ದ.ಕ., ಉಡುಪಿಯಲ್ಲೂ ಇದೆ ಅಕ್ರಮ ಶಾಲೆಗಳು!!

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆಯನ್ನು‌ ಸರಕಾರ ಬಹಿರಂಗಪಡಿ ಸಿದ್ದು, ಶಾಲಾ…