ಪ್ರಚಲಿತ

ಏಪ್ರಿಲ್ 1ರಿಂದ ಈ ವಾಹನಗಳಿಗೆ ಇಂಧನವಿಲ್ಲ.!!

GL
ಹೊಸ ಇಂಧನದ ನಿಯಮದ ಪ್ರಕಾರ, ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನೀಡುವುದಿಲ್ಲ. ದೆಹಲಿಯಲ್ಲಿ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಇಂಧನ ನಿಷೇಧ ಮಾಡಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Vehicle Rules : ವಾಯು ಮಾಲಿನ್ಯವನ್ನು ತಡೆಗಟ್ಟುವ ನೆಟ್ಟಿನಲ್ಲಿ ದೆಹಲಿ ಸರ್ಕಾರ ಹೊಸ ನಿಯಮ ಒಂದನ್ನು ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ ನಿಮ್ಮ ವಾಹನಗಳು 15 ವರ್ಷಕ್ಕೂ ಹಳೆಯದಾಗಿದ್ದರೆ ಅವುಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಅಷ್ಟೇ ಅಲ್ಲದೆ ಅವುಗಳಿಗೆ ಪೆಟ್ರೋಲ್ ಡೀಸೆಲ್ ಕೂಡ ಸಿಗುವುದಿಲ್ಲ

chennai-shopping
maithri

ನಿಮ್ಮ ವಾಹನವು 15 ವರ್ಷಗಳ ಮಾರ್ಕ್ ದಾಟಿದ್ರೆ, ರಸ್ತೆಗೆ ಇಳಿಸುವಂತಿಲ್ಲ. ಒಂದು ವೇಳೆ ರಸ್ತೆಗೆ ಇಳಿಸಿದರೂ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಅಥವಾ ಪೆಟ್ರೋಲ್ ತುಂಬಿಸುವುದಿಲ್ಲ.

ಈ ಹೊಸ ಇಂಧನದ ನಿಯಮದ ಪ್ರಕಾರ, ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನೀಡುವುದಿಲ್ಲ. ದೆಹಲಿಯಲ್ಲಿ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಇಂಧನ ನಿಷೇಧ ಮಾಡಲಾಗಿದೆ. ಏಪ್ರಿಲ್ 1 ರಿಂದ ಈ ನಿಯಮ ಜಾರಿಗೊಳ್ಳಲಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಹಳೆಯ ವಾಹನಗಳ ಮೇಲ್ವಿಚಾರಣೆ ಮಾಡಲಾಗುತ್ತದೆ. NGT ಸೂಚನೆಗಳ ಪ್ರಕಾರ, ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ. ಮಾಲೀಕರು ಈ ಬಗ್ಗೆ ಅಲರ್ಟ್ ಆಗಿರಬೇಕು.

ಹಳೆಯ ವಾಹನಗಳಿಗೆ ಇಂಧನ ಪೂರೈಕೆಯನ್ನು ನಿರ್ಬಂಧಿಸುವುದರ ಜೊತೆಗೆ, ರಾಜಧಾನಿಯಲ್ಲಿರುವ ಎಲ್ಲಾ ಬಹುಮಹಡಿ ಕಟ್ಟಡಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ವಾಯು ಮಾಲಿನ್ಯದ ಮಟ್ಟವನ್ನು ನಿಗ್ರಹಿಸಲು ಹೊಗೆ ನಿರೋಧಕಗಳನ್ನು ಅಳವಡಿಸಬೇಕು ಎಂದು ಸಿರ್ಸಾ ಹೇಳಿದ್ದಾರೆ.

ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts