ಕೃಷಿ

ಕೃಷಿ ಅಕಾಡೆಮಿ ಸ್ಥಾಪನೆ ಉತ್ತಮ ಚಿಂತನೆ: ಕಿಶೋರ್ ಕುಮಾರ್ ಕುಡ್ಗಿ | ಹಲಸು ಹಣ್ಣು ಮೇಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಕ್ಯಾಂಪ್ಕೋ ಅಧ್ಯಕ್ಷ | ಶ್ರೀಸಾಮಾನ್ಯ ಆರಂಭಿಸಿದ ಆಂದೋಲನ ಹಲಸು: ಶ್ರೀಪಡ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು:  ಹಲಸು ಉತ್ಪನ್ನಗಳನ್ನು ತಯಾರಿಸುವಲ್ಲಿ ಪ್ರಭುದ್ಧ ಚಿಂತನೆಯ ಜೊತೆಗೆ ತಾಳ್ಮೆಯ ಅಗತ್ಯವಿದೆ. ಹಲಸಿನ ಉತ್ಪನ್ನಗಳಿಗೆ ಬಹಳಷ್ಟು ಮೌಲ್ಯವಿದೆ. ಗೋಕುಲ್ ಫ್ರುಟ್ಸ್ಗೆ ಹಲಸು  ಬ್ರಾಂಡ್ ಹೆಸರು ಬರುವಂತೆ ಮಾಡಿದೆ ಎಂದು ಮಂಗಳೂರು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕುಡ್ಗಿ ಅಭಿಪ್ರಾಯಪಟ್ಟರು.

akshaya college

ಅವರು ನವತೇಜ ಪುತ್ತೂರು ಸಂಘಟನೆಯು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ `ಹಲಸು ಹಣ್ಣು ಮೇಳದ ಸಭಾ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ಕೃಷಿ ವಿಚಾರಗಳಿಗೆ ಸಂಬಂಧಿಸಿದಂತೆ ಕೃಷಿ  ಅಕಾಡಮಿ ಸ್ಥಾಪನೆ ಮಾಡುವ ಚಿಂತನೆಯು ಉತ್ತಮ ವಿಚಾರವಾಗಿದೆ. ಆದರೆ ಈ ಅಕಾಡಮಿ ಸ್ಥಾಪನೆಯಾದಲ್ಲಿ ಅದಕ್ಕೆ ಅನುಭವಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ ಎಂದರು.

ದಿಕ್ಸೂಚಿ ಮಾತನಾಡಿದ ಅಡಿಕೆ ಪತ್ರಿಕೆ ಸಂಪಾದ ಶ್ರೀಪಡ್ರೆ ಅವರು, ಹಲಸು ಆಂದೋಲನವು ಸರ್ಕಾರ, ಇಲಾಖೆಯಿಂದ ಆರಂಭಗೊಂಡಿಲ್ಲ ಬದಲಿಗೆ ಶ್ರೀಸಾಮಾನ್ಯರಿಂದ ಈ ಆಂದೋಲನ ಆರಂಭಗೊಂಡಿದೆ. ಹಲಸು ಉದ್ದಿಮೆ ಏಳಿಗೆಯಾಗಲು ಹೊಸ ಬಗೆಯ ಚಿಂತನೆಯ ಅಗತ್ಯವಿದೆ. ಈ ಉದ್ಯಮಕ್ಕೆ ಬರುವವರು ಸಾಕಷ್ಟು ಅಧ್ಯಯನ ನಡೆಸಿ ಉದ್ಯಮಕ್ಕೆ ಇಳಿಯಬೇಕು. ಹಲಸು ಬಗ್ಗೆ ಇರುವ ಕೀಳರಿಮೆಯಿಂದಾಗಿ ಹಲಸು ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಹಲಸು ಮೇಳಗಳ ಮೂಲಕ ಈ ಕೀಳರಿಮೆ ಶಾಪ ವಿಮೋಚನೆಯಾಗಿದೆ. ಹಲಸಿನ ವಿವಿಧ ಉತ್ಪನ್ನಗಳಾದ ಪಲ್ಪ್, ಹಪ್ಪಳ, ಚಿಪ್ಸ್, ಗುಜ್ಜೆ, ಬೀಜದ ಹುಡಿ, ಬೀಜದ ಹಲ್ವಗಳಿಗೆ ಬಹಳಷ್ಟು ಬೇಡಿಕೆಗಳಿವೆ. ದ.ಕ.ಜಿಲ್ಲೆಯಲ್ಲಿ ಹಲಸಿನಿಂದ ಒತ್ತು ಹಪ್ಪಳ ತಯಾರಿಸಿದರೆ ಉತ್ತರ ಕನ್ನಡದಲ್ಲಿ ಅಚ್ಚು ಹಪ್ಪಳ ತಯಾರಿಸುತ್ತಾರೆ. ಅಚ್ಚು ಹಪ್ಪಳ ತಯಾರಿಗೆ ಯಂತ್ರಗಳನ್ನು ತಯಾರಿಸುವ ಬಗ್ಗೆ ಸಿದ್ದತೆ ನಡೆಸಲಾಗುತ್ತಿದೆ ಎಂದರು.

ಶ್ಯಾಂ ಜ್ಯುವೆಲ್ಸ್ ಗ್ರೂಪ್‌ನ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಕಳೆದ 20 ವರ್ಷಗಳಿಂದ ಹಲಸಿನ ಉತ್ಪನ್ನ ತಯಾರಿಸುವ ಬಗ್ಗೆ ಆಸಕ್ತಿ ವಹಿಸಿದ್ದೆವು. ಈ ಬಗ್ಗೆ ಮನೆಯಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದೆವು. ಅದಕ್ಕಾಗಿ ಈಗಲೂ ಹಲಸು ಮೇಳಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ. ಹಲಸು ಉತ್ಪನ್ನ ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಚಿಂತನೆಯ ಅಗತ್ಯವಿದೆ. ಕೃಷಿ ಕಲಿಕೆಯ ಉದ್ದೇಶಕ್ಕಾಗಿ ಕೃಷಿ ಅಕಾಡಮಿ ಸ್ಥಾಪನೆ ಮಾಡಿ. ನಿರಂತರ ಕಲಿಕೆಯ ದೃಷ್ಟಿಯಲ್ಲಿ ಕೃಷಿ ಪಠ್ಯ ಕ್ರಮ ತಯಾರಿಸಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಶ್ಯಾಮ್ ಸುಂದರ ಭಟ್ ಅವರು ಉತ್ಪಾಧಿಸಿದ ಹಲಸಿನ ಬೀಜದಿಂದ ತಯಾರಿಸಿದ ರಸಂ ಹುಡಿ, ಸಾಂಬಾರ್ ಹುಡಿ, ಚಡ್ನಿ ಹುಡಿ ಮತ್ತು ಪಾಯಸ ಹುಡಿಗಳನ್ನು ಬಿಡುಗಡೆಗೊಳಿಸಲಾಯಿತು.

 

ವೇದಿಕೆಯಲ್ಲಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಕುಸುಮಾಧರ್, ಪುತ್ತೂರು ಜೆಕಾಮ್ ಅಧ್ಯಕ್ಷ ಪಶುಪತಿ ಶರ್ಮ ಉಪಸ್ಥಿತರಿದ್ದರು.

ನವತೇಜ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ | ಫಲಾನುಭವಿ ರೈತರು ಯೋಜನೆ ಪಡೆದುಕೊಳ್ಳಲು ಅಗತ್ಯ ಮಾಹಿತಿ ಇಲ್ಲಿದೆ…

ಕೇಂದ್ರ ಸರ್ಕಾರ ರೈತರಿಗಾಗಿ 2019 ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್…