ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಫೈನಲ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ತೂಕ ಇಳಿಸಲು ಅತಿಯಾದ ಪ್ರಯತ್ನದಿಂದಾಗಿ ನಿರ್ಜಲೀಕರಣದಿಂದಾಗಿ ಫೋಗಟ್ ಮೂರ್ಛೆ ಹೋಗಿರುವುದಾಗಿ ವರದಿಯಾಗಿದೆ.
ವಿನೇಶ್ ಅವರು ಒಲಿಂಪಿಕ್ ವಿಲೇಜ್‌ನ ಪಾಲಿಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಫೈನಲ್‌ನ ದಿನದ ತೂಕದಲ್ಲಿ 150 ಗ್ರಾಂ ಅಧಿಕ ತೂಕ ಹೊಂದಿದ್ದರಿಂದ ಎರಡನೇ ದಿನ ಸ್ಪರ್ಧಿಸಲು ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. 50 ಕೆಜಿ ವಿಭಾಗದಲ್ಲಿ ಅರ್ಹಗೊಳಿಸುವ ಸಲುವಾಗಿ ಫೋಗಟ್ ಸತತ ಪ್ರಯತ್ನ ಮಾಡಿದ್ದು ಆದರೆ ಸುಮಾರು 150 ಗ್ರಾಂ ಅಧಿಕವಾಗಿದ್ದರಿಂದ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ.