Thursday, November 21
Share News

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರಕಾರಿ ಕಚೇರಿಗಳ ಅರ್ಧದಷ್ಟು ಸಿಬಂದಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಪರಿಸರ ಸಚಿವ ಗೋಪಾಲ್ ರಾಯ್ ಬುಧವಾರ(ನ20) ತಿಳಿಸಿದ್ದಾರೆ.

ನಂತರದ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿಬಂಧನೆ ಜಾರಿ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು, ಸರಕಾರವು ತನ್ನ ಕಚೇರಿಗಳು ಮತ್ತು MCD ಗಾಗಿ ಕಚೇರಿ ಸಮಯವನ್ನು ಘೋಷಿಸಿದೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಕಚೇರಿಗಳ ಸಮಯವನ್ನು ಬೆಳಗ್ಗೆ 8.30 ರಿಂದ ಸಂಜೆ 5 ರವರೆಗೆ ನಿಗದಿಪಡಿಸಲಾಗಿದೆ, ಆದರೆ ದೆಹಲಿ ಸರಕಾರಿ ಕಚೇರಿಗಳ ಸಮಯವು ಬೆಳಗ್ಗೆ 10 ರಿಂದ ಸಂಜೆ 6.30 ರವರೆಗೆ ಇದೆ.

ಮತ್ತೆ ವಾಯುಗುಣಮಟ್ಟ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಹೀಗಾಗಿ, ಕೋವಿಡ್ ಅವಧಿಯ ಪರಿಸ್ಥಿತಿಯನ್ನು ಮತ್ತೆ  ನೆನಪಿಸಿಕೊಳ್ಳುವಂತಾಗಿದೆ.

ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ವಾಯುಮಾಲಿನ್ಯ ತೀವ್ರಗೊಂಡಿದ್ದು, ಗಾಳಿಯ ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆಮಟ್ಟದಲ್ಲಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಎರಡು ದಿನಗಳ ಹಿಂದೆಯಷ್ಟೇ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ನಿರ್ವಹಣೆಗೆ ಸಂಬಂಧಿಸಿದಂತೆ ಛೀಮಾರಿ ಹಾಕಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಕೃಷಿ ತ್ಯಾಜ್ಯ ಸುಡುವ ರೈತರಿಗೆ ದುಪ್ಪಟ್ಟು ದಂಡ ವಿಧಿಸುವ ನಿರ್ಧಾರವನ್ನು ಕೈಗೊಂಡಿದೆ.

ಹೊರಾಂಗಣದಲ್ಲಿ ಆಟವಾಡುವುದನ್ನು ನಿಷೇಧಿಸಲಾಗಿದ್ದು, ಶಾಲೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಪಾಠ ಮಾಡಲು ಸೂಚಿಸಲಾಗಿದೆ.

ಸರಕಾರಿ ಕಚೇರಿ ವೇಳೆ ಬದಲು: ಈ ನಡುವೆ, ದಿಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಕೇಂದ್ರ ಮತ್ತು ದಿಲ್ಲಿ ಸರಕಾರದ ಅಧಿಕಾರಿ, ಸಿಬ್ಬಂದಿ

ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಅಲ್ಲದೇ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 106 ಸಾರ್ವ ಜನಿಕ ಸಾರಿಗೆ ಬಸ್‌ಗಳನ್ನು ನಿಯೋಜನೆ ಮಾಡಲು ಯೋಜಿಸಲಾಗಿದೆ.

ಶ್ವಾಸಕೋಶ ಕ್ಯಾನ್ಸರ್, ಹೃದಯಾಘಾತ, ಗರ್ಭದಲ್ಲೇ

ಮಕ್ಕಳ ಬೆಳವಣಿಗೆಗೆ ತೊಡಕು! ಇವು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಜನರಿಗೆ ವೈದ್ಯರು ನೀಡುತ್ತಿರುವ ಎಚ್ಚರಿಕೆ. ದಿಲ್ಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಳವಾಗು ತ್ತಿದ್ದು, ಸೋಮವಾರ ವಾಯು ಗುಣಮಟ್ಟ ಸೂಚ್ಯಂಕ 495ಕ್ಕೆ ತಲುಪಿದೆ. ಇದು ಗಂಭೀರ ಮಟ್ಟದ (ಸಿವಿಯರ್ ಪ್ಲಸ್) ಮಾಲಿನ್ಯವಾಗಿದ್ದು, ಜನರ ಆರೋಗ್ಯದ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.


Share News

Comments are closed.

Exit mobile version