Tuesday, December 3
Share News

ತಿರುವನಂತಪುರಂ: ಮಾಲಿವುಡ್ ಚಿತ್ರರಂಗದ ಖ್ಯಾತ ನಟ ಮೇಘನಾಥನ್ (Malayalam actor Meghanathan) ನಿಧನರಾಗಿದ್ದಾರೆ.

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೇಘನಾಥನ್ (60) ಗುರುವಾರ (ನ.21ರಂದು) ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೇಘನಾಥನ್‌ ಹಿರಿಯ ನಟ ಬಾಲನ್ ಕೆ ನಾಯರ್ ಅವರ ಮೂರನೇ ಪುತ್ರರಾಗಿದ್ದರು, ಚೆನ್ನೈನಲ್ಲಿ ಬಾಲ್ಯದ ದಿನಗಳನ್ನು ಕಳೆದ ಅವರು ಅಲ್ಲೇ ಶಿಕ್ಷಣವನ್ನು ಮುಗಿಸಿದರು. ತಂದೆ ಹಾದಿಯನ್ನು ಹಿಡಿದು ಅವರು ಚಿತ್ರರಂಗಕ್ಕೆ ಕಾಲಿಟ್ಟರು.

‘ಅಸ್ತ್ರಮ್’ ಸಿನಿಮಾದ ಮೂಲಕ 1983ರಲ್ಲಿ ಚಿತ್ರರಂಗಕ್ಕೆ ಅವರು ಕಾಲಿಟ್ಟರು. 30 ದಶಕಕ್ಕೂ ಹೆಚ್ಚಿನ ಕಾಲ ಚಿತ್ರರಂಗದಲ್ಲಿ ಕಾಣಿಸಿಕೊಂಡ ಅವರು, 50ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಾನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.


Share News

Comments are closed.

Exit mobile version