ಮುಂಬೈ : ಸಮುದ್ರ ತೀರದ ಕಲ್ಲು ಬಂಡೆ ಮೇಲೆ ಕುಳಿತು ಯೋಗದಲ್ಲಿ ತಲ್ಲೀನಳಾಗಿದ್ದ ಖ್ಯಾತ ನಟಿ ಕೊಚ್ಚಿ ಹೋದ ಘಟನೆ ನಡೆದಿದೆ. ನಟಿಯ ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ.
ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ ನಡೆದಿದೆ. 24 ವರ್ಷದ ರಷ್ಯಾದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ದುರಂತ ಅಂತ್ಯಕಂಡಿದ್ದಾಳೆ. ಯೋಗದಲ್ಲಿ ನಿರತಳಾಗಿದ್ದ ನಟಿ ಮೇಲೆ ಭೀಕರ ಅಲೆ ಅಪ್ಪಳಿಸಿದ ಪರಿಣಾಮ ನೋಡ ನೋಡುತ್ತಿದ್ದಂತೆ ನಟಿ ಕೊಚ್ಚಿ ಹೋಗಿದ್ದಾರೆ. ನಟಿಯ ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ.
ರಷ್ಯಾ ನಟಿ ಕ್ಯಾಮಿಲ್ಲಾ ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿ ಥಾಯ್ಲೆಂಡ್ ಪ್ರವಾಸದಲ್ಲಿರುವಾಗ ಈ ಘಟನೆ ನಡೆದಿದೆ. ಚಿತ್ರ ಸೇರಿದಂತೆ ಹಲವು ಬ್ಯೂಸಿ ಶೆಡ್ಯೂಲ್ ಬಳಿಕ ನಟಿ ಥಾಯ್ಲೆಂಡ್‌ನ ಇದೇ ಕೊಹ್ ಸಮುಯಿ ದ್ವೀಪಕ್ಕೆ ಭೇಟಿ ನೀಡುವುದು ಹೆಚ್ಚಾಗಿತ್ತು. ಇದರಂತೆ ಈ ಬಾರಿಯೂ ಪ್ರವಾಸ ಮಾಡಿದ್ದಾರೆ. ಆದರೆ ದುರಂತ ನಡೆದುಹೋಗಿದೆ.
ಕೊಹ್ ಸಮುಯಿ ದ್ವೀಪದ ಸಮುದ್ರದ ತೀರದಲ್ಲಿನ ಬಂಡೆ ಕಲ್ಲಿನ ಮೇಲೆ ಕುಳಿತು ಪ್ರಾಣಾಯಾಮ ಮಾಡುತ್ತಿದ್ದ ವೇಳೆ ಭೀಕರ ಅಲೆ ಅಪ್ಪಳಿಸಿದೆ. ಏನಾಗುತ್ತಿದೆ ಅನ್ನುವಷ್ಟರಲ್ಲಿ ನಟಿ ಸಮುದ್ರ ಅಲೆಗೆ ಕೊಚ್ಚಿ ಹೋಗಿದ್ದಾರೆ. ಪಕ್ಕದ ಬಂಡೆ ಕಲ್ಲಿನ ಮೇಲಿದ್ದ ಪ್ರವಾಸಿಗರು ನಟಿಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ದೈತ್ಯ ಅಲೆಯಿಂದ ನಟಿ ಕೊಚ್ಚಿ ಹೋಗಿದ್ದಾರೆ.