Share News

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ಶುಕ್ರವಾರ ನಿಧನರಾದರು.

ನಟಿ ಇನ್ಸಾಗ್ರಾಮ್ ಸ್ಟೋರೀಸ್ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಂದೆ ಜೋಸೆಫ್ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ. “ನಾವು ಮತ್ತೆ ಭೇಟಿಯಾಗುವವರೆಗೆ, ಅಪ್ಪ” ಎಂದು ಬರೆದುಕೊಂಡಿದ್ದಾರೆ.

ಸಮಂತಾ ಚೆನ್ನೈನಲ್ಲಿ ಜೋಸೆಫ್ ಪ್ರಭು ಮತ್ತು ನಿನೆಟ್ ಪ್ರಭು ದಂಪತಿಗೆ ಜನಿಸಿದರು. ಅವರ ತಂದೆ, ತೆಲುಗು ಆಂಗ್ಲೋ- ಇಂಡಿಯನ್. ಸಮಂತಾ ಜೀವನ ಮತ್ತು ಪಾಲನೆಯಲ್ಲಿ ಅವಿಭಾಜ್ಯ ಪಾತ್ರ ವಹಿಸಿದ್ದರು. ತನ್ನ ವೃತ್ತಿಪರ ಬದ್ಧತೆಗಳ ಹೊರತಾಗಿಯೂ ಸಮಂತಾ ಆಗಾಗ ತನ್ನ ಕುಟುಂಬದ ಬಗ್ಗೆ ಮತ್ತು ಮನರಂಜನಾ ಉದ್ಯಮದಲ್ಲಿ ತನ್ನ ಪ್ರಯಾಣದುದ್ದಕ್ಕೂ ಅವರು ನೀಡಿದ ಬೆಂಬಲವನ್ನು ಸ್ಮರಿಸುತ್ತಾರೆ.


Share News

Comments are closed.

Exit mobile version