Friday, November 22
Share News

ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಅವರ ಮನೆ, ಕಛೇರಿಗೂ ದಾಳಿ ಮಾಡಿದ್ದಾರೆ. ಈ ವೇಳೆ ಅಪಾರ ಪ್ರಮಾಣ ಸೊತ್ತು ಪತ್ತೆಯಾಗಿದೆ.

ಮಂಗಳೂರಿನ ಹಿರಿಯ ಭೂ ವಿಜ್ಞಾನಿ ಎಂ.ಸಿ.ಕೃಷ್ಣವೇಣಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತ ತಂಡ ಶೋಧ ನಡೆಸಿದೆ.

ಇವರ ಬಳಿ ಒಟ್ಟು ಸ್ಥಿರಾಸ್ತಿಯ ಅಂದಾಜು ಮೌಲ್ಯ 3 ನಿವೇಶನ ಬೆಂಗಳೂರಿನ ಯಲಹಂಕದಲ್ಲಿ 1 ಫ್ಲಾಟ್, ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು ಇದೆ. ಎಲ್ಲಾ ಸೇರಿ ಒಟ್ಟು ಮೌಲ್ಯ10 ಕೋಟಿ 41 ಲಕ್ಷ 38 ಸಾವಿರ 286 ರೂಪಾಯಿ ಇದೆ.

ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ 56 ಸಾವಿರದ 450 ರೂಪಾಯಿ ನಗದು, 66 ಲಕ್ಷ 71 ಸಾವಿರದ 445 ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳು, 60 ಲಕ್ಷ ರೂಪಾಯಿ ಬೆಲೆಬಾಳುವ ವಾಹನಗಳು, 24 ಲಕ್ಷ 40 ಸಾವಿರ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

ಈ ಎಲ್ಲಾ ಸೇರಿ ಒಟ್ಟು ಮೌಲ್ಯ 1,51, 67,895 ರೂಪಾಯಿ ಇದ್ದು, ಸ್ಥಿರಾಸ್ತಿ ಹಾಗೂ ಚರಾಸ್ಥಿ ಸೇರಿ ಒಟ್ಟು ಮೌಲ್ಯ 11,93,06,181 ರೂಪಾಯಿ ಇದೆ. ಇದನ್ನೆಲ್ಲಾ ಕಂಡು ಲೋಕಾಯುಕ್ತ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.


Share News

Comments are closed.

Exit mobile version