ಟ್ರೆಂಡಿಂಗ್ ನ್ಯೂಸ್

ವಿಭಿನ್ನ ಶೈಲಿಯ ಸೀರೆಗಳಿಂದಲೇ ತಮನ್ವಿ ಸಿಲ್ಕ್ಸ್ ಮನೆಮಾತು: ಅದಿತಿ ಎಂ.ಎಸ್. | ಪುತ್ತೂರಿಗೆ ತಮನ್ವಿ ಸಿಲ್ಕ್ಸ್ ಅಮೋಘ ಕೊಡುಗೆ: ಪಂಜಿಗುಡ್ಡೆ ಈಶ್ವರ ಭಟ್ | ಯುವ ಉದ್ದಿಮೆದಾರರು ಬೆಳೆಯಬೇಕು: ಸಂಜೀವ ಮಠಂದೂರು

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತಮನ್ವಿ ಸಿಲ್ಕ್ಸ್ ಸಂಸ್ಥೆಯ ನೂತನ ವಿಶಾಲ ಮಳಿಗೆ ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ಸ್’ನ ನೆಲ ಮಹಡಿಯಲ್ಲಿ ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು.

chennai-shopping
maithri

tamanvi-silks

ತಮನ್ವಿ ಸಂಸ್ಥೆಯ ಎರಡನೇ ಮಳಿಗೆಯನ್ನು ರಿಬ್ಬನ್ ಕತ್ತರಿಸಿ, ಸಂಸ್ಥೆಯನ್ನು ಉದ್ಘಾಟಿಸಿದ ಸಂಸ್ಥೆಯ ರೂಪದರ್ಶಿ, ಸೈಕಾಲಜಿಸ್ಟ್, ಕಲಾವಿದೆ ಅದಿತಿ ಎಂ.ಎಸ್. ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ  ಮಹಿಳೆಯನ್ನು ಸೀರೆಯ ಮೂಲಕ ಗುರುತಿಸುವ ಪರಂಪರೆಯಿದೆ. ಮಹಿಳೆ ತಾನುಡುವ ಸೀರೆಯ ಮೂಲಕ ಇತರರಿಂದ ಭಿನ್ನವಾಗಿರಲು ಬಯಸುತ್ತಾಳೆ. ಈ ಆಸಕ್ತಿಗೆ ಇಂಬು ಕೊಡುವ ವಿಭಿನ್ನ ಶೈಲಿಯ ಸೀರೆಗಳ ಸಂಗ್ರಹದ ಮೂಲಕ ತಮನ್ವಿ ಸಂಸ್ಥೆ ಈಗಾಗಲೇ ಪುತ್ತೂರಿನಲ್ಲಿ ಮನೆಮಾತಾಗಿದೆ ಎಂದರು.

tamanvi

ದೀಪ ಪ್ರಜ್ವಲನ ಮಾಡಿ ಮಾತನಾಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುತ್ತೂರಿನ ಪಾಲಿಗೆ ತಮನ್ವಿ ಸಿಲ್ಕ್ಸ್ ಸಂಸ್ಥೆ ಅಮೋಘ ಕೊಡುಗೆ. ಉತ್ತಮವಾದುದನ್ನು ಪುತ್ತೂರಿನ ಜನ ಸ್ವೀಕರಿಸಿದ್ದಾರೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಯುವ ಉದ್ದಿಮೆದಾರರು ಬೆಳೆಯಬೇಕು. ಪುತ್ತೂರು ಈಗಾಗಲೇ ಜವುಳಿ ಉದ್ಯಮಕ್ಕೆ ಜನಪ್ರಿಯತೆ ಹೊಂದಿದ್ದು, ತಮನ್ವಿ ಸಂಸ್ಥೆಯ ಕೊಡುಗೆಯೂ ಇದರಲ್ಲಿದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ದಿನ ಕಳೆದಂತೆ ಫ್ಯಾಶನ್, ಅಭಿರುಚಿ ಬದಲಾಗುತ್ತದೆ. ಇದಕ್ಕೆ ತಕ್ಕಂತೆ ಈ ಸಂಸ್ಥೆ ಹೊಂದಿಕೊಂಡು ಬಂದಿರುವುದೇ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದರು.

ನಗರಸಭೆಯ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ ಮಾತನಾಡಿ, ಮಹಿಳೆಯರ ಪಾಲಿನ ಅಚ್ಚುಮೆಚ್ಚಿನ ಆಯ್ಕೆಯ ಕೇಂದ್ರವಾಗಿ ತಮನ್ವಿ ಈಗಾಗಲೇ ಛಾಪು ಮೂಡಿಸಿದೆ ಎಂದರು.

ಎಸ್‌ಡಿಪಿ ರೆಮಿಡೀಸ್ ಆ್ಯಂಡ್ ರೀಸರ್ಚ್ ಸೆಂಟರ್‌ನ ಆಡಳಿತ ಪಾಲುದಾರರಾದ ರೂಪಲೇಖ ಮಾತನಾಡಿ, ಕೇವಲ 2 ವರ್ಷಗಳಲ್ಲಿ ತಮನ್ವಿ ಪುತ್ತೂರಿನಲ್ಲಿ ಯಶಸ್ವಿಯಾಗಲು ಮಾಲೀಕರ ಸಮರ್ಪಣಾ ಮನೋಭಾವನೆ ಕಾರಣ. ಇಲ್ಲಿ ಸೀರೆಗಳನ್ನು ಗ್ರಾಹಕರಿಗೊಪ್ಪುವಂತೆ ಕಸ್ಟಮೈಸ್ ಮಾಡಿ ಕೊಡುವುದು ವಿಶೇಷ ಎಂದರು.

ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕ ಜಯಂತ ನಡುಬೈಲ್ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿನಲ್ಲಿ ಫ್ಯಾಶನ್ ಪ್ರಿಯರ ಅಭಿರುಚಿಗೆ ತಕ್ಕಂತೆ ತಮನ್ವಿ ಸಿಲ್ಕ್ಸ್  ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ ಎಂದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಯುಆರ್ ಪ್ರಾಪರ್ಟಿಸ್ ಸಂಸ್ಥೆಯ ಆಡಳಿತ ನಿರ್ದೇಶಕ ಉಜ್ವಲ್ ಪ್ರಭು, ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಡಾ. ಗೀತಪ್ರಕಾಶ್, ವಿಟ್ಲ ಸುರಕ್ಷಾ ಆಸ್ಪತ್ರೆಯ ಡಾ.ಸುರಕ್ಷಾ ಗೀತಪ್ರಕಾಶ್, ಪುತ್ತೂರು ಒಕ್ಕಲಿಗ ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ, ಹಿರಿಯ ವಕೀಲ ಮಹೇಶ್ ಕಜೆ ಮತ್ತಿತರರು ಶುಭ ಹಾರೈಸಿದರು.

ಸಂಸ್ಥೆಯ ಮಾಲೀಕರಾದ ಮಾಲಾಶ್ರೀ ಮತ್ತು ವಿಜೇತ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎರಡೂವರೆ ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸಂಸ್ಥೆ ಆರಂಭಿಸಿದಾಗ ಮಳಿಗೆ ವಿಸ್ತರಣೆಯ ನಿರೀಕ್ಷೆ ಇರಲಿಲ್ಲ. ಗ್ರಾಹಕರು ತೋರಿದ ಪ್ರೀತಿಯಿಂದ ಹೊಸ ಮಳಿಗೆ ಸಾಧ್ಯವಾಗಿದೆ. ಅನನ್ಯ ಸಂಗ್ರಹ, ಗುಣಮಟ್ಟ ನಿರ್ವಹಣೆ, ಗ್ರಾಹಕರಿಗೆ ಉತ್ತಮ ಸೇವೆ, ಮತ್ತು ವೈವಿಧ್ಯಮಯ ಬ್ರಾಂಡೆಡ್ ಸೀರೆಗಳ ಕಲೆಕ್ಷನ್ ನಮ್ಮ  ವಿಶೇಷತೆಯಾಗಿದೆ ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…