ಪುತ್ತೂರು: ತಾಲೂಕಿನ ಏಕೈಕ ಮಾಲ್ ಎಂದೇ ಗುರುತಿಸಿಕೊಂಡಿರುವ ಜಿಎಲ್ ವನ್ ಮಾಲ್’ನಲ್ಲಿ ಜಿಎಲ್ ಮಾಲ್ ಉತ್ಸವ ರಂಗೇರಿದೆ.
ಶನಿವಾರ ಜಿಎಲ್ ಮಾಲ್ ಉತ್ಸವ ಆರಂಭಗೊಂಡಿದ್ದು, ಭಾನುವಾರ ಸಾಂಸ್ಕೃತಿಕ ಉತ್ಸವಗಳೊಂದಿಗೆ ಕಳೆಗಟ್ಟಿತು. ಮಾಲ್ ನ ಪ್ರತಿ ಮಳಿಗೆಗಳೂ ಆಫರ್’ಗಳನ್ನು ಘೋಷಿಸಿದ್ದು, ಜನಾಕರ್ಷಣೆಯ ಕೇಂದ್ರವಾಯಿತು. ಇದರೊಂದಿಗೆ ಫುಡ್ ಫೆಸ್ಟಿವಲ್ ಮತ್ತಷ್ಟು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಜಿ. ಎಲ್. ಸಮೂಹ ಸಂಸ್ಥೆಯು ಪುತ್ತೂರಿಗೆ ಕೊಡುಗೆಯಾಗಿ ನೀಡಿದ ಜಿ.ಎಲ್ ವನ್ ಮಾಲ್‌ನಲ್ಲಿ ಪ್ರಥಮ ಬಾರಿಗೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿ ವಾರಾಂತ್ಯಕ್ಕೆ ಈ ಉತ್ಸವ ನಡೆಯಲಿದೆ. ಮಾಲ್ ಉತ್ಸವದ ಪ್ರಾರಂಭದ ದಿನದಿಂದ ಕೊನೆಯ ದಿನದವರೆಗೆ ಫುಡ್ ಫೆಸ್ಟಿವಲ್ ನಡೆಯಲಿದೆ. ಈ ಫುಡ್ ಫೆಸ್ಟ್ ನಲ್ಲಿ ವೆರೈಟಿ ಖಾದ್ಯಗಳು ದೊರಕಲಿದೆ. ಸ್ಟ್ರೀಟ್ ಫುಡ್, ವೈರೈಟಿ ದೋಸೆಗಳು, ಐಸ್ ಕ್ರೀಮ್ಸ್, ಗ್ರೀಲ್ಡ್ ಐಟಮ್ಸ್, ವಿವಿಧ ಬಗೆಯ ಜ್ಯೂಸ್‌ಗಳು, ಮಿಲ್ಕ್ ಶೇಕ್ಸ್ ಹೀಗೆ ಒಂದೆರಡು ಐಟಮ್ಸ್‌ಗಳಲ್ಲ ಹತ್ತು-ಹಲವಾರು ಬಗೆಯ ಫುಡ್‌ಗಳು ಈ ಫುಡ್ ಫೆಸ್ಟ್‌ನಲ್ಲಿ ಬಂದು ವೆರೈಟಿ ಖಾದ್ಯಗಳನ್ನು ಸವಿಯುವ ಅವಕಾಶವಿದೆ.
ಈ ವೀಕೆಂಡ್ ಚಿತ್ರಕಲಾ ಸ್ಪರ್ಧೆ:
ಫುಡ್ ಫೆಸ್ಟಿವಲ್ ಜೊತೆಗೆ ವಾರಾಂತ್ಯದಲ್ಲಿ (ವೀಕೆಂಡ್) ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಡಿ. 28ರಂದು ಬೆಳಿಗ್ಗೆ 10 ಗಂಟೆಯಿಂದ ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಸಹಭಾಗಿತ್ವದಲ್ಲಿ ಚಿತ್ರಕಲಾ ಸ್ಪರ್ಧೆ (ಡ್ರಾಯಿಂಗ್ ಕಾಂಪಿಟೇಶನ್) ನಡೆಯಲಿದೆ. ಈ ಚಿತ್ರಕಲಾ ಸ್ಪರ್ಧೆಯು 7 ವಿಭಾಗದಲ್ಲಿ ನಡೆಯಲಿದೆ . ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಪದವಿ ಪೂರ್ವ ಕಾಲೇಜು ವಿಭಾಗ, ಪದವಿ ಕಾಲೇಜು ವಿಭಾಗ, ಸ್ನಾತಕೋತ್ತರ ಕಾಲೇಜು ವಿಭಾಗ, ಸಾರ್ವಜನಿಕ ವಿಭಾಗ, ದಿವ್ಯಾಂಗ ಕಲಾವಿದರಿಗೆ ವಿಶೇಷ ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ
ಗಿಫ್ಟ್ ಕೂಪನ್ – ಬಹುಮಾನ:
ಜಿಎಲ್ ವನ್ ಮಾಲ್ ನ ಮಳಿಗೆಗಳಲ್ಲಿ ಶಾಪಿಂಗ್ ಮಾಡಿ, ಕೂಪನ್ ಪಡೆದುಕೊಳ್ಳಬಹುದು. ಇದರ ಮೂಲಕ ಗ್ರಾಹಕರು ವಿಶೇಷ ಗಿಫ್ಟ್ ಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಸ್ಮಾರ್ಟ್ ಫೋನ್ ಗೆಲ್ಲುವ ಅವಕಾಶವಿದೆ.
ರೀಲ್ಸ್ ಚಾಲೆಂಜ್:
ರೀಲ್ಸ್ ಮಾಡಿಯೂ ಬಹುಮಾನ ಗೆಲ್ಲುವ ಅವಕಾಶವನ್ನು ಜಿಎಲ್ ವನ್ ಮಾಲ್ ನೀಡಿದೆ. ಡಿ. 20ರಿಂದ ಜ. 4ರವರೆಗೆ ನಡೆಯಲಿರುವ ಮಾಲ್ ಉತ್ಸವದ ಸುಮಧುರ ಕ್ಷಣಗಳನ್ನು ಸೆರೆ ಹಿಡಿದು, ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಬೇಕು. ಅದನ್ನು ಜಿಎಲ್ ವನ್ ಮಾಲ್ ಖಾತೆಗೆ ಟ್ಯಾಗ್, ಕೊಲಬರೇಷನ್ ಮಾಡಬೇಕು. ಇದರಲ್ಲಿ ಹೆಚ್ಚು ಲೈಕ್ಸ್ ಬಂದವರಿಗೆ ಖಚಿತ ಬಹುಮಾನ ಇದೆ ಎಂದು ಪ್ರಕಟಣೆ ತಿಳಿಸಿದೆ.
ಪಾಪ್ಯುಲರ್, ಮ್ಯಾಕ್ಸ್, ಭಾರತ್ ಸಿನಿಮಾಸ್, ಸೆಲಬ್ರೇಶನ್, ಮಂಗಲ್ ಹೈಪರ್ ಮಾರ್ಕೆಟ್, ಈಜಿ ಬೈ, ಟ್ರಾವೆಲ್ ಪಾರ್ಟ್ನರ್ಸ್, ವಾಕ್ ವೇ, ಫನ್ ಗ್ಯಾಲಕ್ಸಿ, ಲಶ್, ಭೂಮಿ ಟೈಮ್ಸ್, ಗ್ಲಾಮ್ಜಿ, ವೈಟ್ ಟ್ಯಾಗ್, ಕ್ಷಿತಿ ಕಲೆಕ್ಷನ್, ಮರಿಕೇಸ್, ದೀಪಾ ಬುಕ್ ಹೌಸ್ ಜಿಎಲ್ ಮಾಲ್ ಉತ್ಸವದಲ್ಲಿ ಭಾಗಿಯಾಗಿದೆ.



























