ಬೆಂಗಳೂರು: ಕಲರ್‌ಫುಲ್ ಸುದ್ದಿ ಕನ್ನಡ ಮಾಸ ಪತ್ರಿಕೆ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಎಂ. ಪಿ. ರೋಹಿಣಿ ಆಚಾರ್ಯ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ. 24 ರಂದು ನಡೆಯಲಿದೆ.
ಈ ರಾಜ್ಯ ಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ನೆಹರುನಗರದ ಕರಕುಶಲ ಕಲೆ ಶಿಕ್ಷಕಿ ಎಂ. ಪಿ. ರೋಹಿಣಿ ಆಚಾರ್ಯ ಅವರನ್ನು ಸನ್ಮಾನಿಸಿ ಈ ಅಭಿನಂದನಾ ರಾಜ್ಯ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.



























