ಟ್ರೆಂಡಿಂಗ್ ನ್ಯೂಸ್

ಬೆಳ್ಳಿ ಅಡವಿಗೂ ಸಿಗುತ್ತೆ ಸಾಲ: ಮಾರ್ಗಸೂಚಿ ಬಿಡುಗಡೆ ಮಾಡಿದ RBI

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಚಿನ್ನದ ಮೇಲಿನ ಸಾಲ ನಮಗೆಲ್ಲಾ ತಿಳಿದೇ ಇದೆ. ಹಾಗಾಗಿ ಚಿನ್ನ ಖರೀದಿಯನ್ನು ಹೂಡಿಕೆ ಎಂಬುದಾಗಿಯೂ ಕರೆಯುತ್ತಾರೆ. ಆದರೆ ಬೆಳ್ಳಿಯ ಆಭರಣಗಳಿಗೆ ಅಥವಾ ಬೆಳ್ಳಿಗೆ ಈ ಸ್ಥಾನಮಾನ ಇದುವರೆಗೆ ಸಿಕ್ಕಿಯೇ ಇಲ್ಲ. ಇನ್ಮುಂದೆ ಬೆಳ್ಳಿಗೂ ಚಿನ್ನದ ಬೇಡಿಕೆ ಬಂದರೂ ಆಶ್ಚರ್ಯ ಪಡಬೇಡಿ.

core technologies

ಇದಕ್ಕೆ ಕಾರಣ ಏನು ಗೊತ್ತೇ? ಬೆಳ್ಳಿಗೂ ಇನ್ಮುಂದೆ ಬ್ಯಾಂಕುಗಳು ಸಾಲ ನೀಡುತ್ತವೆ. ಚಿನ್ನದಂತೆಯೇ, ಈಗ ಬೆಳ್ಳಿಯನ್ನು ಕೂಡ ಅಡವಿಟ್ಟು ಸಾಲಗಳನ್ನ ತೆಗೆದುಕೊಳ್ಬೋದು.

akshaya college

RBI ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದು ಕಡಿಮೆ ಆದಾಯದ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಸಾಮಾನ್ಯರಿಗೆ ಇದ್ದಕ್ಕಿದ್ದಂತೆ ಹಣದ ಅಗತ್ಯವಿದ್ದಾಗ ಹೆಚ್ಚಿನ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಬಹುದು. ಬೆಳ್ಳಿಯನ್ನು ಒತ್ತೆ ಇಡುವ ಮೂಲಕ ಅವರು ಬ್ಯಾಂಕುಗಳು ಮತ್ತು ಎನ್‌ ಬಿಎಫ್‌ಸಿಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ.

ಈ ಸೌಲಭ್ಯವು ಏಪ್ರಿಲ್ 1, 2026ರಿಂದ ಪ್ರಾರಂಭವಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲದೆ, ಕೇಂದ್ರ ಬ್ಯಾಂಕ್ ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಬೆಳ್ಳಿಯ ಮೇಲೆ ಸಾಲ ನೀಡಲು ಅನುಮತಿ ನೀಡಿದೆ. ಎನ್‌ ಬಿಎಫ್‌ ಸಿಗಳು ಮತ್ತು ವಸತಿ ಹಣಕಾಸು ಕಂಪನಿಗಳು ಸಹ ಗ್ರಾಹಕರಿಗೆ ಬೆಳ್ಳಿಯ ಮೇಲೆ ಸಾಲಗಳನ್ನು ನೀಡಲು ಸಾಧ್ಯ.

ಈ ಬಗ್ಗೆ ಮಾತಾಡಿದ ನಿರ್ದೇಶಕ ಮುಖೇಶ್ ಪಾಂಡೆ, ಈ ಸೌಲಭ್ಯವು ಕಡಿಮೆ ಆದಾಯದ ಕುಟುಂಬಗಳಿಗೆ ಸಾಕಷ್ಟು ಸಹಾಯ ಮಾಡುತ್ತದೆ. ಸಣ್ಣ ವ್ಯವಹಾರಗಳು ಸಹ ಇದರ ಲಾಭವನ್ನು ಪಡೆಯಲು ಸಾಧ್ಯ. ಚಿನ್ನಕ್ಕಿಂತ ಬೆಳ್ಳಿಯನ್ನು ಖರೀದಿಸುವುದು ಸುಲಭ ಎಂದಿದ್ದಾರೆ.

ಒಂದು ಕುಟುಂಬವು ಗರಿಷ್ಠ 10 ಕೆಜಿ ಬೆಳ್ಳಿ ಆಭರಣಗಳು ಅಥವಾ 500 ಗ್ರಾಂ ನಾಣ್ಯಗಳನ್ನು ಒತ್ತೆ ಇಡುವ ಮೂಲಕ ಸಾಲವನ್ನು ಪಡೆಯಬಹುದಾಗಿದೆ.

RBI ಮೌಲ್ಯದ ಸಾಲಕ್ಕೆ ಗರಿಷ್ಠ ಮಿತಿಯನ್ನು ಸಹ ನಿಗದಿಪಡಿಸಿದೆ. ಇದರರ್ಥ ಬ್ಯಾಂಕುಗಳು ಬೆಳ್ಳಿ ಆಭರಣಗಳು ಅಥವಾ ನಾಣ್ಯಗಳ ಮೌಲ್ಯದ 85 ಪ್ರತಿಶತದವರೆಗೆ ಸಾಲವನ್ನು ನೀಡಲು ಸಾಧ್ಯವಾಗುತ್ತದೆ. ಇದಕ್ಕಾಗಿ 2.5 ಲಕ್ಷ ರೂ.ಗಳ ಮಿತಿಯನ್ನು ನಿಗದಿಪಡಿಸಲಾಗುತ್ತದೆ.

ಗ್ರಾಹಕರು 5 ಲಕ್ಷ ರೂಪಾಯಿಗಳ ಸಾಲವನ್ನು ಬಯಸಿದ್ರೆ, ಬ್ಯಾಂಕ್ ಬೆಳ್ಳಿ ಆಭರಣದ ಮೌಲ್ಯದ 75 ಪ್ರತಿಶತದಷ್ಟು ಸಾಲವನ್ನು ಒದಗಿಸಲು ಸಾಧ್ಯವಾಗುತ್ತದೆ.

ಸಾಲದ ಮೊತ್ತವನ್ನು ಪಾವತಿಸದಿದ್ದರೆ ಬ್ಯಾಂಕ್ ಬೆಳ್ಳಿಯನ್ನು ಹರಾಜು ಮಾಡುತ್ತದೆ – ಗ್ರಾಹಕರು ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿಸಿದ್ರೆ, ಸಾಲದ ಮೊತ್ತವನ್ನು ಮರುಪಡೆಯಲು ಬ್ಯಾಂಕ್ ಗ್ರಾಹಕರ ಬೆಳ್ಳಿ ಆಭರಣಗಳು ಅಥವಾ ನಾಣ್ಯಗಳನ್ನು ಹರಾಜು ಮಾಡಬಹುದು. ಬ್ಯಾಂಕ್ ಮೊದಲು ಗ್ರಾಹಕರಿಗೆ ನೋಟಿಸ್ ಕಳುಹಿಸುತ್ತದೆ. ಗ್ರಾಹಕರು ಬ್ಯಾಂಕನ್ನು ಸಂಪರ್ಕಿಸದಿದ್ದರೆ, ಸಾರ್ವಜನಿಕ ಸೂಚನೆಯ ಮೂಲಕ ಸಮಯವನ್ನು ಒಂದು ತಿಂಗಳು ವಿಸ್ತರಿಸಲಾಗುತ್ತದೆ. ಹರಾಜಿನ ಮೀಸಲು ಬೆಲೆ ಪ್ರಸ್ತುತ ಬೆಲೆಯ 90 ಪ್ರತಿಶತಕ್ಕಿಂತ ಕಡಿಮೆಯಿರುವುದಿಲ್ಲ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts