ಮಂಗಳೂರು: ರಿಫರ್‌ಬಿಸ್ಡ್ (Refurbished) ಉದ್ಯಮದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ ಕೋರ್ ಟೆಕ್ನಾಲಜೀಸ್ ಹಮ್ಮಿಕೊಂಡಿರುವ ಮೆಗಾ ಸೇಲ್ ಗ್ರಾಹಕರ ದೃಷ್ಟಿಯಿಂದ ಮಹತ್ವಪೂರ್ಣ ಕಾರ್ಯಕ್ರಮ ಎಂದು ಮಂಗಳೂರು ಬಾವಾ ಬಿಲ್ಡರ್ ಮಾಲಕ ಇಬ್ರಾಹಿಂ ಬಾವಾ ಹೇಳಿದರು.

ಶನಿವಾರ ಮಂಗಳೂರಿನ ಕಂಕನಾಡಿ ಗೇಟ್ ಬಿಲ್ಡಿಂಗಿನಲ್ಲಿರುವ ಕೋರ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಕೋರ್ ಮೆಗಾ ಸೇಲ್ ಉದ್ಘಾಟಿಸಿ ಅವರು ಮಾತನಾಡಿದರು.
ಕಂಪ್ಯೂಟರ್, ಲ್ಯಾಪ್‌ಟಾಪ್ ಇಲ್ಲದೆ ಇಂದು ಯಾವುದೇ ಕೆಲಸವೂ ಅಸಾಧ್ಯ. ಆದರೆ ಅನೇಕರಿಗೆ ಇದು ಕೈಗುಟುಕದ ಉತ್ಪನ್ನಗಳು. ಅವರಿಗೂ ತಲುಪಿಸಬೇಕು ಎನ್ನುವ ಕೋರ್ ಸಂಸ್ಥೆಯ ಉದ್ದೇಶ ಪ್ರಶಂಸನಾರ್ಹ. ಇದೀಗ ಮೆಗಾ ಸೇಲ್ ಮೂಲಕ ಇನ್ನೊಂದಷ್ಟು ಆಫರ್‌ಗಳ ಜೊತೆಗೆ ಲ್ಯಾಪ್‌ಟಾಪ್, ಕಂಪ್ಯೂಟರ್, ಪ್ರಿಂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಪರಿಕರಗಳನ್ನು ಜನರಿಗೆ ತಲುಪಿಸಬೇಕು ಎನ್ನುವ ಸಂಸ್ಥೆಯ ಸದುದ್ದೇಶವೇ ಸಂಸ್ಥೆಯ ಯಶಸ್ಸಿಗೆ ಕಾರಣ. ಈ ಮೆಗಾ ಸೇಲ್ ಉತ್ತಮ ಕಾರ್ಯಕ್ರಮವಾಗಿ ಮೂಡಿಬರಲಿ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಲಿ ಎಂದು ಶುಭಹಾರೈಸಿದರು.
*ಮುಂಚೂಣಿಯಲ್ಲಿ ಗುರುತಿಸಿಕೊಂಡ ಸಂಸ್ಥೆ:*
ಉಪ್ಪಳ ಗೋಲ್ಡ್ ಕಿಂಗ್ ಫ್ಯಾಷನ್ ಜ್ಯುವೆಲ್ಲರಿ ಮಾಲಕ ಮಹಮ್ಮದ್ ಹನೀಫ್ ಮಾತನಾಡಿ, ಕಳೆದ 10 ವರ್ಷಗಳಿಂದ ಕಂಪ್ಯೂಟರ್ ಹಾಗೂ ಐಟಿ ಉಪಕರಣಗಳ ಕ್ಷೇತ್ರದಲ್ಲಿ ಗ್ರಾಹಕರ ಪ್ರೀತಿ ಸಂಪಾದಿಸಿರುವ ಕೋರ್ ಟೆಕ್ನಾಲಜೀಸ್ ಕಂಪ್ಯೂಟರ್’ಗಳ ರೆಂಟ್, ಡೇಟಾ ರಿಕವರಿ, CCTV ಸೇಲ್ಸ್ ಮತ್ತು ಇನ್ಸ್ಟಾಲೇಶನ್, ಬಯೋಮೆಟ್ರಿಕ್ ಸಿಸ್ಟಮ್ಗಳು, ಬಿಲ್ಲಿಂಗ್ ಸಾಫ್ಟ್ವೇರ್ಗಳು, ಹೊಸ ಲ್ಯಾಪ್’ಟಾಪ್ ಮತ್ತು ಡೆಸ್ಕ್’ಟಾಪ್’ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ ಎಂದ ಅವರು, ಕೋರ್ ಟೆಕ್ನಾಲಜೀಸ್ ನೀಡಿರುವ ಆಫರ್‌ಗಳೇ ಗಮನ ಸೆಳೆಯುವಂತಿದೆ. ಕಡಿಮೆ ಬೆಲೆಗೆ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ನೀಡುವ ಜೊತೆಗೆ ಅದಕ್ಕೆ ಆಫರ್‌ಗಳನ್ನು ನೀಡುತ್ತಿರುವುದು ಗಮನಾರ್ಹ ಸಂಗತಿ. ಇದು ಖಂಡಿತವಾಗಿಯೂ ಜನರಿಗೆ ಉಪಯುಕ್ತ ಮೆಗಾ ಸೇಲ್. ಜನರು ಈ ಸೇಲ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಮಾಲಕರಾದ ಅನೂಪ್ ಕೆ.ಜೆ., ಅವರ ಪತ್ನಿ ಶ್ರೇಯಸ್ವಿ ಎಸ್.ಆರ್., ಮಕ್ಕಳಾದ ಸೋಹನ್ ಶ್ರೀಯಾನ್ ಹಾಗೂ ಇಶಾ ಲಕ್ಷ್ಮೀ, ಸಿಬ್ಬಂದಿಗಳಾದ ಆಶೀಷ್, ಜೆನ್ನಿಫರ್ ಮೋನಿಸ್ ಉಪಸ್ಥಿತರಿದ್ದರು.
*ನಗದು ಬಹುಮಾನ ಗೆಲ್ಲುವ ಅವಕಾಶ:*
ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕಚೇರಿ ಹೊಂದಿರುವ ಕೋರ್ ಟೆಕ್ನಾಲಜೀಸ್ ನವಂಬರ್ 1ರಿಂದ ಡಿಸೆಂಬರ್ 15ರವರೆಗೆ ಕೋರ್ ಮೆಗಾ ಸೇಲ್ ಆಯೋಜಿಸಲಾಗಿದೆ. 500 ರೂ. ಮೇಲ್ಪಟ್ಟ ಯಾವುದೇ ಖರೀದಿ ಮೇಲೆ ಲಕ್ಕಿ ಕೂಪನ್ ಹಾಗೂ ನಗದು ಬಹುಮಾನ ಗೆಲ್ಲುವ ಅವಕಾಶ ನೀಡಲಾಗಿದೆ. ಪ್ರಥಮ ಬಹುಮಾನವಾಗಿ 10 ಸಾವಿರ ರೂ., ದ್ವಿತೀಯ ಬಹುಮಾನವಾಗಿ 5 ಸಾವಿರ ರೂ., ತೃತೀಯ ಬಹುಮಾನವಾಗಿ 2 ಸಾವಿರ ರೂ. ನೀಡಲಾಗುವುದು.
*ರಿಫರ್’ಬಿಷ್ಡ್ ಲ್ಯಾಪ್’ಟಾಪ್ ಖರೀದಿಗೆ 6 ವಿಶೇಷ ಗಿಫ್ಟ್:*
ಯಾವುದೇ ರಿಫರ್’ಬಿಷ್ಡ್ (Refurbished) ಲ್ಯಾಪ್’ಟಾಪ್ ಖರೀದಿಗೆ 6 ವಿಶೇಷ ಗಿಫ್ಟ್’ಗಳನ್ನು ನೀಡಲಾಗುವುದು. 2999 ರೂ. ಬೆಲೆಬಾಳುವ ಕ್ಲೀನಿಂಗ್ ಕಿಟ್, ಮೌಸ್ ಪ್ಯಾಡ್, ಆ್ಯಂಟಿ ವೈರಸ್, ಬ್ಯಾಗ್, ಕೀಬೋರ್ಡ್ ಸಿಲಿಕಾನ್ ಕವರ್, ವೈರ್’ಲೆಸ್ ಮೌಸ್ ಉಚಿತವಾಗಿ ಗ್ರಾಹಕರು ಪಡೆದುಕೊಳ್ಳಲಿದ್ದಾರೆ. 12 ಸಾವಿರ ರೂ.ನಿಂದ ಪ್ರಾರಂಭವಾಗುವ ಲ್ಯಾಪ್’ಟಾಪ್’ಗಳಿಗೂ ಈ ಆಫರ್ ಅನ್ವಯವಾಗುತ್ತದೆ.
*ಶೇ. 10 ಡಿಸ್ಕೌಂಟ್, ಬ್ಲೂಟೂತ್ ಸ್ಪೀಕರ್ ಗಿಫ್ಟ್:*
ಪ್ರಿಂಟರ್ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್, ಕಂಪ್ಯೂಟರ್ ಅಕ್ಸಸರೀಸ್ ಖರೀದಿಗೆ ಶೇ. 10ರಷ್ಟು ಹೆಚ್ಚುವರಿ ಡಿಸ್ಕೌಂಟ್, ಯಾವುದೇ ಬ್ರಾಂಡಿನ ಹೊಸ ಲ್ಯಾಪ್’ಟಾಪ್ ಅಥವಾ ಡೆಸ್ಕ್’ಟಾಪ್ ಖರೀದಿಗೆ ಬ್ಲೂಟೂತ್ ಸ್ಪೀಕರ್ ಅನ್ನು ಉಚಿತವಾಗಿ ನೀಡಲಾಗುವುದು.
*ಆ್ಯಂಟಿವೈರಸ್ ಉಚಿತವಾಗಿ ಪಡೆಯಿರಿ:*
ಅಲ್ಲದೇ, ಡೆಸ್ಕ್’ಟಾಪ್ ಅಥವಾ ಲ್ಯಾಪ್’ಟಾಪ್ ಸರ್ವೀಸ್’ಗೆ 750 ರೂ. ಬೆಲೆಯ ಆ್ಯಂಟಿವೈರಸ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರಾದ ಅನೂಪ್ ಕೆ.ಜೆ. ತಿಳಿಸಿದ್ದಾರೆ.
*ಸಂಸ್ಥೆಯ ಶಾಖೆಗಳ ಸಂಪರ್ಕಕ್ಕೆ*
ಪುತ್ತೂರಿನಲ್ಲಿ ಕೇಂದ್ರ ಕಚೇರಿಯಲ್ಲಿ ಹೊಂದಿರುವ ಕೋರ್ ಟೆಕ್ನಾಲಜೀಸ್, ಪುತ್ತೂರು ಮುಖ್ಯರಸ್ತೆಯಲ್ಲಿ ಸಂಗೀತಾ ಮೊಬೈಲ್ಸ್ ಎದುರುಗಡೆ ಇರುವ ಮಹಲಾಸಾ ಆರ್ಕೇಡ್’ನಲ್ಲಿದೆ. ಮಂಗಳೂರಿನಲ್ಲಿ ಬೈಪಾಸ್ ರಸ್ತೆಯ ಕನಕನಾಡಿ ಗೇಟ್ ಬಿಲ್ಡಿಂಗ್’ನಲ್ಲಿದೆ. ಸುಳ್ಯದಲ್ಲಿ KSRTC ಬಸ್ ನಿಲ್ದಾಣ ಮುಂಭಾಗದಲ್ಲಿರುವ ಸೂಂತೋಡು ಎಂಪೋರಿಯಂನಲ್ಲಿದೆ.
ಸಂಪರ್ಕ ಸಂಖ್ಯೆಗಳು ಮಂಗಳೂರು – 8277834777, ಪುತ್ತೂರು – 8277227287, ಸುಳ್ಯ – 8277874777.

























