ಪುತ್ತೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಾರ್ಕೆಟ್ ವಾಣಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
“ನನ್ನ ವ್ಯಾವಹಾರಿಕ ಜೀವನದ ಗುರು” ವಿಷಯದಲ್ಲಿ ಸ್ಪರ್ಧೆಗೆ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು.
ಇದರಲ್ಲಿ ಮೊದಲ ಬಹುಮಾನವನ್ನು ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಸಹ ಶಿಕ್ಷಕಿ ಸರ್ವಮಂಗಳ ಅವರು ಪಡೆದುಕೊಂಡಿದ್ದಾರೆ.
ದ್ವಿತೀಯ ಬಹುಮಾನವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢಶಾಲೆಯ ಸಹ ಶಿಕ್ಷಕ ಶಿವರಾಜ್ ಅಂತರ ಅವರು ಪಡೆದುಕೊಂಡಿರುತ್ತಾರೆ.
ತೃತೀಯ ಬಹುಮಾನವನ್ನು ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಪಾಲ್ತ್ರೋಡಿಯ ದೀಪ್ತಿ ಕೃಷ್ಣಮೂರ್ತಿ ಅವರು ಪಡೆದುಕೊಂಡಿರುತ್ತಾರೆ.

















