ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ನೂತನ ಜನರೇಟರ್’ಗಳ ಆವಿಷ್ಕಾರವಾಗಿದ್ದು, ಜನರ ಬೇಡಿಕೆಗೆ ತಕ್ಕುದಾದ ಜನರೇಟರ್’ಗಳು ದೊರೆಯುತ್ತಿದೆ ಎಂದು ದ್ವಾರಕಾ ಕಾರ್ಪೋರೇಷನ್ ಪ್ರೈ ಲಿ. ವ್ಯವಸ್ಥಾಪಕ ನಿರ್ದೇಶಕ ಗೋಪಾಕೃಷ್ಣ ಭಟ್ ಹೇಳಿದರು.
ಪುತ್ತೂರು ಕೊಂಬೆಟ್ಟಿನ ಬಂಟರ ಭವನದ ಬಳಿಯ ಜಿ.ಎಲ್. ಟ್ರೇಡ್ ಸೆಂಟರ್ ಬಿಲ್ಡಿಂಗಿನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಗುರುವಾರ ಆರಂಭಗೊಂಡ ಹೋಂಡಾ ಇಂಜಿನ್’ನ ಅಮೆರ್ ಎನ್.ಎಸ್.ಎಂ. ಇಂಡಿಯಾದ ಜನರೇಟರ್’ಗಳ ಮಾಹಿತಿ, ಪ್ರದರ್ಶನ, ಮಾರಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಕಳೆದ ಐದು ವರ್ಷಗಳಿಂದ ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆ ಮಾಡುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಗ್ರಾಹಕರ ಅವಶ್ಯಕತೆಗಳನ್ನು ಮನಗಂಡು, ಅದಕ್ಕೆ ತಕ್ಕುದಾದ ಉತ್ಪನ್ನಗಳನ್ನು ಪೂರೈಕೆ ಮಾಡುವುದರಿಂದ ಪಶುಪತಿ ಸಂಸ್ಥೆ ಯಶಸ್ವಿಯಾಗಿದೆ. ಇದೀಗ ಜನರೇಟರ್ ಕ್ಷೇತ್ರಕ್ಕೂ ಆಟಿ ಅಮಾವಾಸ್ಯೆಯ ಶುಭ ದಿನದಲ್ಲಿ ಕಾಲಿಟ್ಟಿದ್ದು, ಜನರ ಆಶಯಕ್ಕೆ, ಜನರ ಬೇಡಿಕೆಗೆ ತಕ್ಕನಾಗಿ ಈ ಮೇಳ ಮೂಡಿ ಬರಲಿ ಎಂದು ಶುಭಹಾರೈಸಿದರು.
ಅಮೆರ್ ಎನ್.ಎಸ್.ಎಂ. ಇಂಡಿಯಾದ ರೀಜನಲ್ ಸೇಲ್ಸ್ ಮ್ಯಾನೇಜರ್ ಮಹೇಶ್ ಜೋಶಿ, ಸಂಸ್ಥೆಯ ವೆಂಕಟರಮಣ ಭಟ್, ಉಪ್ಪಿನಂಗಡಿ ಕೃಷಿ ಏಜೆನ್ಸಿಯ ಸದಾಶಿವ ರೈ ಉಪಸ್ಥಿತರಿದ್ದರು.
ಇದೇ ಸಂದರ್ಭ ಧರ್ಮಚಾವಡಿ ಸಿನಿಮಾದ ನಟರುಗಳಾದ ಶರತ್ ಆಳ್ವ ಕೂರೇಲು ಹಾಗೂ ಎಲೆಕ್ಟ್ರಿಷಿಯನ್ ಯತೀಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮಾಲಕ ಪಶುಪತಿ ಶರ್ಮ, ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಜನರು ಎದುರು ನೋಡುತ್ತಿರುತ್ತಾರೆ. ಅಲ್ಲದೇ, ಇಂದು ಬೆರಳ ತುದಿಯಲ್ಲಿ ಯಾವುದೇ ಉತ್ಪನ್ನಗಳ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯ. ಇದಕ್ಕೆ ಪೂರಕವಾಗಿ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಹೋಂಡಾ ಇಂಜಿನಿನ ಅಮೆರ್ ಸಂಸ್ಥೆಯ ಜನರೇಟರ್’ಗಳ ಮಾಹಿತಿ, ಪ್ರದರ್ಶನವನ್ನು ಏರ್ಪಡಿಸಿದ್ದೇವೆ. ಸರಿಯಾದ ಮಾಹಿತಿ ಪಡೆದುಕೊಂಡು, ನಮ್ಮ ಅವಶ್ಯಕತೆಗೆ ತಕ್ಕುದಾದ ಜನರೇಟರ್’ಗಳನ್ನು ಖರೀದಿ ಮಾಡಬಹುದು. ಈ ತಿಂಗಳಾಂತ್ಯದವರೆಗೆ ನಡೆಯುವ ಮೇಳದ ಹಿನ್ನೆಲೆಯಲ್ಲಿ ಅತೀ ಕಡಿಮೆ ಮಾರ್ಜಿನ್ ಇಟ್ಟು, ಮಾರಾಟ ಮಾಡಲಾಗುತ್ತಿದೆ. ಈ ಮೇಳದ ಸಂದರ್ಭ ಬುಕ್ಕಿಂಗ್ ಮಾಡಿ, ಬಳಿಕವೂ ಖರೀದಿ ಮಾಡಲು ಅವಕಾಶ ಇದೆ ಎಂದು ವಿವರಿಸಿದರು.
ಸಂಸ್ಥೆಯ ಅನ್ನಪೂರ್ಣ ಶರ್ಮ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು.