ಪುತ್ತೂರು: ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಉದ್ಯಮದಲ್ಲಿ ಶ್ರೇಷ್ಟಗುಣಮಟ್ಟ ಹಾಗೂ ಅತ್ಯುತ್ತಮ ಬೆಲೆಯೊಂದಿಗೆ ಪ್ರತಿಷ್ಠಿತ ಕಂಪೆನಿಗಳ ಎಲ್‌ಇಡಿ ಲೈಟ್ಸ್, ಬಿಇಲ್‌ಡಿಸಿ ಫ್ಯಾನ್ಸ್ ಹೀಗೆ ಗೃಹೋಪಯೋಗಿ ಉಪಕರಣಗಳನ್ನು ಕಳೆದ ಹಲವಾರು ವರ್ಷಗಳೊಂದಿಗೆ ಇಲ್ಲಿನ ದರ್ಬೆ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿನ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯು ಸೇವೆ ನೀಡುತ್ತಾ ಬಂದಿದ್ದು, ಇದೀಗ ಗ್ರಾಹಕರ ಅನುಕೂಲತೆಗೋಸ್ಕರ ಬೊಳ್ವಾರು ಬಂಟರ ಭವನದ ಎದುರುಗಡೆಯ ಜಿ.ಎಲ್ ಟ್ರೇಡ್ ಸೆಂಟರ್‌ಗೆ ಸ್ಥಳಾಂತರಗೊಂಡು ನೂತನ ವಿಸ್ತೃತ ಮಳಿಗೆಯು ಉದ್ಘಾಟನೆಗೊಂಡಿತು.
ಉತ್ತಮ ಸೇವೆಗೆ ಈ ಸಂಸ್ಥೆ ಉದಾಹರಣೆ – ಬಲರಾಂ ಆಚಾರ್ಯ
ಪುತ್ತೂರು ಜಿ.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಬಲರಾಂ ಆಚಾರ್ಯ ಜಿ.ಎಲ್‌ರವರು ನೂತನ ವಿಸ್ತೃತ ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪುತ್ತೂರು ನಗರವು ಎಲ್ಲಾ ಕ್ಷೇತ್ರದಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದ್ದು ಇದರಲ್ಲಿ ಉದ್ಯಮವೂ ಸೇರಿದೆ. ಯಾರು ಒಳ್ಳೆಯ ಸೇವೆ ನೀಡುತ್ತಾರೋ ಅವರಲ್ಲಿ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ ಎನ್ನುವುದಕ್ಕೆ ಪಶುಪತಿ ಶರ್ಮರವರು ಉತ್ತಮ ಉದಾಹರಣೆ. ಇದೀಗ ಗ್ರಾಹಕರ ಅನುಕೂಲತೆಗೋಸ್ಕರ ಮಳಿಗೆಯನ್ನು ವಿಸ್ತರಿತಗೊಳಿಸಿದ್ದಾರೆ. ಗ್ರಾಹಕರು ನಿರೀಕ್ಷೆ ಮಾಡುವಂತಹ ಉತ್ಪನ್ನಗಳನ್ನು ಈ ಮಳಿಗೆಯು ಹೊಂದಿದೆ. ಕಾಲ ಕಾಲಕ್ಕೆ ತಕ್ಕಂತೆ ನವನವೀನ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿದ್ದು ನಾವು ಅದಕ್ಕೆ ಅಪ್‌ಡೇಟ್ ಆಗಬೇಕು ಎಂದರು.
ಸಂಸ್ಥೆ ಹುಟ್ಟು ಹಾಕಿ ಹಲವಾರು ಮಂದಿಗೆ ಉದ್ಯೋಗ- ಸಾದಿಕ್ ಎಸ್.ಎಂ
ಮುಖ್ಯ ಅತಿಥಿಯಾಗಿದ್ದ ದರ್ಬೆ ಬ್ಯಾಂಕ್ ಆಫ್ ಬರೋಡದ ಚೀಫ್ ಮ್ಯಾನೇಜರ್ ಸಾದಿಕ್ ಎಸ್.ಎಂ ಅವರು ಸಂಸ್ಥೆಯ ಪಶುಪತಿ ಸೇವಾ ಟ್ರಸ್ಟ್ ಅನ್ನು ಉದ್ಘಾಟಿಸಿ, ಮನುಷ್ಯನ ವ್ಯಕ್ತಿತ್ವ ಗುರುತಿಸುವುದು ಅವರ ಮಾತಿನಿಂದ. ಜೊತೆಗೆ ವಿಷಯದ ಬಗ್ಗೆ ಇರುವ ಜ್ಞಾನ ಹಾಗೂ ಆಸಕ್ತಿಯ ಮೇಲೆ. ಮಳಿಗೆಯ ಮಾಲಕರಾದ ಪಶುಪತಿ ಶರ್ಮ ಅವರು ತಾವು ಆಯ್ಕೆ ಮಾಡಿದ ಉದ್ಯಮದ ಬಗ್ಗೆ ಅಪಾರ ಜ್ಞಾನ ಹಾಗೂ ಆಸಕ್ತಿ ಹೊಂದಿರುವುದು ಮೆಚ್ಚುವಂತಹುದು. ಉದ್ಯಮ ನಡೆಸುವ ಆಸಕ್ತರಿಗೆ ಬ್ಯಾಂಕಿ ಮೂಲಕ ಕೇಂದ್ರ ಸರಕಾರದ ಸಾಲ ಸೌಲಭ್ಯಗಳ ಸ್ಕೀಮ್‌ಗಳಿವೆ. ಪಶುಪತಿ ಶರ್ಮರವರು ಎಲೆಕ್ಟಾçನಿಕ್ಸ್ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ಅವರು ಇದೀಗ ಸಂಸ್ಥೆಯು ಪಶುಪತಿ ಸೇವಾ ಟ್ರಸ್ಟ್ ಅನ್ನು ಸ್ಥಾಪಿಸಿ ಅದರಲ್ಲಿ ವಿದ್ಯೆ ಹತ್ತದ ಹುಡುಗರಿಗೆ ತಾಂತ್ರಿಕ ಕ್ಷೇತ್ರದಲ್ಲಿ ಕರಕುಶಲತೆಯನ್ನು ಮೈಗೂಡಿಸಿಕೊಂಡರೆ ಆ ಹುಡುಗರು ವಾಸಿಸುವ ತನ್ನ ಪರಿಸರದಲ್ಲಿನ ಜನತೆಗೆ ಸಹಾಯವಾಗಬಲ್ಲುದು ಮಾತ್ರವಲ್ಲ ಅಂತಹ ಹುಡುಗರಿಗೆ ಒಂದಷ್ಟು ಆದಾಯ ಗಳಿಸುವಲ್ಲಿ ಸಹಕಾರಿಯಾಗುತ್ತದೆ. ಊರಿನಲ್ಲಿ ಟೆಕ್ನೀಶಿಯನ್ಸ್ಗಳಿದ್ದರೆ ಅಂತಹ ಊರು ಅಭಿವೃದ್ಧಿ ಆಗಬಲ್ಲುದು ಎಂದರು.
ಪ್ರತಿಷ್ಠಿತ ಕಂಪೆನಿಗಳ ಉಪಕರಣಗಳು ಲಭ್ಯ:
ಮಳಿಗೆಯಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಫಿಲಿಪ್ಸ್, ಅಟೊಂಬರ‍್ಗ್, ಹ್ಯಾವೆಲ್ಸ್, ಪಾಲಿಕಾಬ್, ಕ್ರಾಂಪ್ಟನ್, ಓರಿಯೆಂಟ್, ಲ್ಯೂಕರ್, ಆ್ಯಂಕರ್, ಪೆನಸೋನಿಕ್ ಕಂಪೆನಿಗಳ ಗುಣಮಟ್ಟದ ಗೃಹಪಯೋಗಿ ವಸ್ತುಗಳು ಇಲ್ಲಿ ಒಂದೇ ಅಂತಸ್ತಿನಲ್ಲಿ ಲಭ್ಯವಿದೆ. ಗ್ರಾಹಕರ ಅನುಕೂಲತೆಗೋಸ್ಕರ ಮಳಿಗೆಯನ್ನು ಮತ್ತಷ್ಟು ವಿಸ್ತಾರಗೊಳಿಸಲಾಗಿದೆ. ವಿದ್ಯುತ್ ಉಳಿತಾಯದ ಸಮಗ್ರ ಲೈಟಿಂಗ್ಸ್ಗಳಿಗಾಗಿ ಮಳಿಗೆಯನ್ನು ಭೇಟಿ ನೀಡಬಹುದಾಗಿದೆ, ಹೆಚ್ಚಿನ ಮಾಹಿತಿಗಾಗಿ 9448953682, 9845522020 ನಂಬರಿಗೆ ಸಂಪರ್ಕಿಸಬಹುದು, ಷರತ್ತುಗಳು ಅನ್ವಯ ಎಂದು ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳಿಗೆಯ ಮಾಲಕ ಪಶುಪತಿ ಶರ್ಮರವರ ತಾಯಿ ರತ್ನಾವತಿ, ಸಹೋದರ ಟಿ.ವಿ ಕ್ಲಿನಿಕ್‌ನ ಸತ್ಯಶಂಕರ್, ಅತ್ತಿಗೆ ಸ್ಮಿತಾ, ನ್ಯಾಯವಾದಿ ವಿರೂಪಾಕ್ಷ, ಜ್ಯುವೆಲ್ ಲಿಂಕ್ಸ್ 916 ಇದರ ಸುದರ್ಶನ್, ಜಿ.ಎಲ್ ಆಚಾರ್ಯ ಸಂಸ್ಥೆಯ ಉದ್ಯೋಗಿ ಅವಿಲ್ ಪಾಯಿಸ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಮಾಜಿ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಸಹಿತ ಹಲವರು ಉಪಸ್ಥಿತರಿದ್ದರು.
ಮಳಿಗೆಯ ಮಾಲಕ ಪಶುಪತಿ ಶರ್ಮರವರ ಪತ್ನಿ ಅನ್ನಪೂರ್ಣ ಶರ್ಮ ವಂದಿಸಿದರು. ಮಳಿಗೆಯ ಮ್ಯಾನೇಜರ್ ಶಂಕರ್ ಭಟ್ ಹಾಗೂ ಸಿಬ್ಬಂದಿ ಸಹಕರಿಸಿದರು. ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.
ಪಶುಪತಿ ಸೇವಾ ಟ್ರಸ್ಟ್:
ಕೆಲವರಿಗೆ ವಿದ್ಯೆ ಹತ್ತುವುದಿಲ್ಲ, ಕೌಶಲ್ಯತೆ ಇರುತ್ತದೆ. ಆದರೆ ಅವರಿಗೆ ಸಾಕಷ್ಟು ಅವಕಾಶಗಳ ಕೊರತೆ ಇರುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಎಲೆಕ್ಟಾçನಿಕ್ ಐಟಂಗಳ ರಿಪೇರಿ ಮುಂತಾದ ಸಣ್ಣ ಪುಟ್ಟ ಕೆಲಸಗಳನ್ನು ಅವರಿರುವ ಪರಿಸರದಲ್ಲಿ ಮಾಡುವಂತಹ ಅವಕಾಶವನ್ನು ಒದಗಿಸಲು ಪಶುಪತಿ ಸೇವಾ ಟ್ರಸ್ಟ್ ಅನ್ನು ಸ್ಥಾಪಿಸುತ್ತಿದ್ದೇವೆ. ಅಂತಹವರಿಗೆ ತರಬೇತಿ ನೀಡಿ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಉದ್ಧೇಶವಾಗಿದೆ ಎಂದು ಮಳಿಗೆಯ ಮಾಲಕ ಪಶುಪತಿ ಶರ್ಮರವರು ಹೇಳಿದರು.
ಒಂದೇ ಸೂರಿನಡಿ ಉತ್ಪನ್ನಗಳು..
ದರ್ಬೆ ಫಿಲೋಮಿನಾ ಕಾಲೇಜಿನ ಎದುರು ಸಣ್ಣದಾಗಿ ಉದ್ಯಮವನ್ನು ಆರಂಭಿಸಿದ್ದೇವು. ಮಾತ್ರವಲ್ಲ ಗ್ರಾಹಕರಿಂದ ಉತ್ತಮ ಪ್ರೋತ್ಸಾಹವೂ ಸಿಕ್ಕಿರುತ್ತದೆ. ಆದರೆ ಎಲ್ಲಾ ಉತ್ಪನ್ನಗಳ ಡಿಶ್‌ಪ್ಲೇ ಮಾಡಲು ಸಾಕಷ್ಟು ಸ್ಥಳವಕಾಶವಿರಲಿಲ್ಲ. ಇದೀಗ ಪ್ರತಿಷ್ಠಿತ ಎಲ್ಲಾ ಕಂಪೆನಿಗಳ ಉತ್ಪನ್ನಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಪರಿಚಯಿಸಲು ಈ ಭಾಗದಲ್ಲಿ ಮಳಿಗೆಯನ್ನು ವಿಸ್ತರಿತಗೊಳಿಸಿದ್ದೇವೆ. ಗ್ರಾಹಕರು ಎಂದಿನಂತೆ ನಮ್ಮನ್ನು ಆಶೀರ್ವದಿಸಿ ಪ್ರೋತ್ಸಾಹಿಸಬೇಕು ಎಂದು ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆ ಮಾಲಕ ಪಶುಪತಿ ಶರ್ಮ ಹೇಳಿದರು.