Thursday, December 12
Share News

ಪುತ್ತೂರು: ನಾವು ಉಪ್ಪಿನಂಗಡಿಯಿಂದ ವಿಟ್ಲ ಐಟಿಐ ಕಾಲೇಜಿಗೆ ವ್ಯಾಸಂಗಕ್ಕೆ ಬರುತ್ತಿದ್ದೇವೆ, ನಮಗೆ ಬೊಳುವಾರಿನಿಂದ ವಿಟ್ಲ ಎಂದು ಬಸ್ ಪಾಸ್ ಕೊಟ್ಟಿದ್ದಾರೆ. ಮನೆಯಿಂದ ಕಾಲೇಜಿಗೆ ಬರುವಾಗ ನಾವು ಬೊಳುವಾರಿನ ಇಳಿಯಬೇಕು ಕಾಲೇಜು ಮುಗಿಸಿ ಬರುವಾಗಲೂ ನಾವು ಬೊಳುವಾರಿನಲ್ಲೇ ಇಳಿಯಬೇಕು. ಬೊಳುವಾರಿನಲ್ಲಿ ಇಳಿದರೆ ನಮಗೆ ಬಸ್ ಸಿಗುವುದಿಲ್ಲ ನಮಗೆ ಬಸ್ ಸ್ಟ್ಯಾಂಡ್ ವರೆಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ವಿಟ್ಲ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲಿ ಸಿದ್ದಾರೆ.

ವಿಟ್ಲದ ಐಟಿಐ ಕಾಲೇಜಿನಲ್ಲಿ ಕಾಮಗಾರಿ ಶಂಕುಸ್ಥಾಪನೆಗೆ ತೆರಳಿದ ವೇಳೆ ವಿದ್ಯಾರ್ಥಿಗಳು ಶಾಸಕರಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದರು. ಬಸ್ ನಿಲ್ದಾಣದಲ್ಲೇ ಇಳಿಸಬೇಕು ಎಂದು ನಾವು ಡಿಪೋ ಮೆನೆಜರ್‌ಗೆ ಮನವಿ ಮಾಡಿದ್ದೆವು ಅವರು ನಮಗೆ ಪತ್ರವೊಂದಕ್ಕೆ ಸಹಿ ಮಾಡಿ ಓಕೆ ಎಂದು ಹೇಳಿದ್ದಾರೆ. ಆದರೆ ಬಸ್ ನಿರ್ವಾಹಕ ನಮ್ಮನ್ನು ನಿಲ್ದಾಣದ ವರೆಗೆ ಕೊಂಡೊಯ್ಯುತ್ತಿಲ್ಲ ನಮ್ಮನ್ನು ಬೊಳುವಾರಿನಲ್ಲೇ ಇಳಿಸುತ್ತಾರೆ. ಇಳಿಯದೇ ಇದ್ದರೆ ಬಲವಂತವಾಗಿ ಇಳಿಸುತ್ತಾರೆ ಇದು ನಮಗೆ ಸಮಸ್ಯೆಯಾಗಿದೆ ಎಂದು ಹೇಳಿದರು. ನಮಗೆ ಬಸ್ ನಿಲ್ದಾಣದ ವರೆಗೆ ಬಸ್ ಪಾಸ್ ಕೊಡಿ ಎಂದು ಪ್ರಾರಂಭದಲ್ಲೇ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ನಿಲ್ದಾಣದ ತನಕ ಅವಕಾಶ ಕೊಡಿ: ಶಾಸಕರ ಸೂಚನೆ ಉಪ್ಪಿನಂಗಡಿಯಿಂದ ಬರುವ ವಿದ್ಯಾರ್ಥಿಗಳಿಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದಲೇ ವಿಟ್ಲ ಬಸ್ ಪಿಕಪ್ ಮಾಡುವುದು ಮತ್ತು ವಿಟ್ಲದಿಂದ ನಿಲ್ದಾಣದ ವರೆಗೆ ಬಂದು ಉಪ್ಪಿನಂಗಡಿ ಬಸ್ ಹತ್ತುವಲ್ಲಿ ಕ್ರಮಕೈಗೊಳ್ಳಿ ಎಂದು ಡಿಪೋ ಮೆನೆಜರ್‌ಗೆ ಸೂಚನೆಯನ್ನು ನೀಡಿದ್ದಾರೆ. ಬೊಳುವಾರಿನಲ್ಲಿ ಇಳಿಸಿದರೆ ಅಲ್ಲಿಂದ ಮತ್ತೆ ವಿಟ್ಲಕ್ಕೆ ತೆರಳುವಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಗುತ್ತಿದೆ ಇದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.


Share News

Comments are closed.

Exit mobile version