Thursday, December 12
Share News

ಕಾರವಾರ: ಮುರುಡೇಶ್ವರ ಸಮುದ್ರ ತೀರದಲ್ಲಿ ದುರಂತ ಸಂಭವಿಸಿದ್ದು ಮುಳಬಾಗಿಲು ಪಟ್ಟಣ ದಿಂದ ಪ್ರವಾಸಕ್ಕೆ ಬಂದಿದ್ದ 54 ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿನಿಯರು ಸಮುದ್ರ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಓರ್ವ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ.

ವಿದ್ಯಾರ್ಥಿಗಳು ಕಡಲತೀರದಲ್ಲಿ ಇಳಿದು ಆಟವಾಡುತ್ತಿದ್ದರು. ಈ ವೇಳೆ ಏಳು ಜನ ವಿದ್ಯಾರ್ಥಿಗಳು ಅಲೆಯ ರಭಸಕ್ಕೆ ಕೊಚ್ಚಿ ಹೋದರು. ಲೈಫ್ ಗಾರ್ಡ್ ಮೂವರು ವಿದ್ಯಾರ್ಥಿನಿಯರನ್ನು ರಕ್ಷಿಸಿದರು. ಈ ವೇಳೆ ನಾಲ್ವರು ಆಳ ಸಮುದ್ರಕ್ಕೆ ತೇಲಿ ಹೋದರು. ಒಬ್ಬ ವಿದ್ಯಾರ್ಥಿ ಶ್ರಾವಂತಿ(15) ಮೃತ ದೇಹ ಪತ್ತೆಯಾಗಿದೆ. ದೀಪಾ, ಲಾವಣ್ಯ, ಲಿಪಿಕಾ ಅವರಿಗೆ ಹುಡುಕಾಟ ನಡೆದಿದೆ. ಪೊಲೀಸರು ಸ್ಥಳದಲ್ಲಿದ್ದು, ದುರಂತವನ್ನು ದಾಖಲಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯರನ್ನು ಕಳೆದು ಕೊಂಡು ದುಃಖಿತರಾಗಿದ್ದಾರೆ. ಕೋಲಾರದ ಮುಳುಬಾಗಿಲು ಶಾಲೆ ಯಿಂದ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು


Share News

Comments are closed.

Exit mobile version