ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಬಾಕಿ ಉಳಿದಿದ್ದ ಮನೆ, ಅಂಗಡಿಗಳ ತೆರವು ಕಾರ್ಯ ಮಂಗಳವಾರ ಕರಸೇವೆಯ ಮೂಲಕ ನಡೆಯಿತು.
ಬೃಹತ್ ಕರಸೇವೆಗೆ ಕೈಜೋಡಿಸಿದ ಭಕ್ತರು ಪಕ್ಷ ಬೇಧ ಮರೆತು, ತಾವೆಲ್ಲ ಭಕ್ತರು ಎಂಬ ನೆಲೆಯಲ್ಲಿ ಸ್ವಯಂ ಸೇವೆ ನಡೆಸಿದರು.
ಅಕ್ಷಯ ಕಾಲೇಜು, ಪ್ರಗತಿ ವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು, ಭಕ್ತರು ಕೇಸರಿ ಶಾಲು ಹಾಕಿಕೊಂಡು ಕೆಲಸ ನಿರ್ವಹಿಸಿದರು.
ಒಂಭತ್ತು ಮನೆ, ಏಳು ಅಂಗಡಿಗಳು ಸಂಪೂರ್ಣವಾಗಿ ತೆರವಾಯಿತು. ಮಹಿಳಾ ಪೊಲೀಸ್ ಠಾಣೆಗೆ ಈಗಾಗಲೇ ಜಾಗ ಮಂಜೂರಾಗಿದ್ದು, ಶೀಘ್ರದಲ್ಲೇ ತೆರವಾಗುವ ವಿಶ್ವಾಸವಿದೆ.