pashupathi
ಸ್ಥಳೀಯ

ಜಿ.ಎಲ್. ಆಚಾರ್ಯ ಜುವೆಲ್ಲರ್ಸ್‍ ನಲ್ಲಿ ವಜ್ರಾಭರಣಗಳ ಉತ್ಸವ ‘ಗ್ಲೋ ಫೆಸ್ಟ್’ಗೆ ಚಾಲನೆ

tv clinic
ನಗರದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ. ಎಲ್. ಆಚಾರ್ಯ ಜುವೆಲ್ಲರ್ಸ್‍ನಲ್ಲಿ ಡಿ. 23ರಿಂದ ಜ. 26ರ ವರೆಗೆ ನಡೆಯಲಿರುವ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ `ಗ್ಲೋ ಫೆಸ್ಟ್'ಗೆ ಚಾಲನೆ ನೀಡಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ. ಎಲ್. ಆಚಾರ್ಯ ಜುವೆಲ್ಲರ್ಸ್‍ನಲ್ಲಿ ಡಿ. 23ರಿಂದ ಜ. 26ರ ವರೆಗೆ ನಡೆಯಲಿರುವ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ `ಗ್ಲೋ ಫೆಸ್ಟ್’ಗೆ ಚಾಲನೆ ನೀಡಲಾಯಿತು.

akshaya college

ಉದ್ಯಮಿಗಳಾದ ಅನುರಾಧಾ ವಾಮನ ಪೈ, ಉಷಾ ರವೀಂದ್ರ, ಹರಿಣಿ ಸತೀಶ್ ಹಾಗೂ ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ವಿಜಯ ಸರಸ್ವತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಿ.ಎಲ್. ಆಚಾರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ವೇದ ಲಕ್ಷ್ಮೀಕಾಂತ್ ಅಚಾರ್ಯ, ಸುಧನ್ವ ಅಚಾರ್ಯ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೀರ್ತನ್, ಶೋ ರೂಮ್ ಮ್ಯಾನೇಜರ್ ಪುರಂದರ ಉಪಸ್ಥಿತರಿದ್ದರು.

ಭಾರ್ಗವ ಗೋಖಲೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಜಿ.ಎಲ್. ಆಚಾರ್ಯ ಜುವೆಲ್ಲರ್ಸ್‍ನಲ್ಲಿ 3 ಸಾವಿರಕ್ಕೂ ಮಿಕ್ಕಿದ ವಿನ್ಯಾಸಗಳ ವಜ್ರಾಭರಣಗಳ ಅಮೋಘ ಸಂಗ್ರಹವಿದೆ. ಗ್ಲೋ ವಜ್ರಾಭರಣಗಳು ಅಂತಾರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣೀಕರಿಸಲ್ಪಟ್ಟ ಉತ್ಕೃಷ್ಟ ಶ್ರೇಣಿಯ ಗುಣಮಟ್ಟದ ವಜ್ರಗಳಾಗಿದ್ದು, ಇದು ಮಾರುಕಟ್ಟೆ ಯಲ್ಲಿ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿಲಭ್ಯವಿದೆ. ಗ್ಲೋ ಫೆಸ್ಟ್ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತಿ ಕ್ಯಾರೆಟ್‌ಗೆ ರೂ. 8 ಸಾವಿರವರೆಗೆ ರಿಯಾಯಿತಿ, 25 ಸಾವಿರ ಮತ್ತು ಅದಕ್ಕಿಂತ ಮೇಲ್ಪಟ್ಟ ಖರೀದಿಗೆ ಆಕರ್ಷಕ ಉಡಗೊರೆ ಇದೆ. ರೂ. 3500ದಿಂದ ವಜ್ರಾಭರಣದ ಬೆಲೆಗಳು ಪ್ರಾರಂಭವಾಗುತ್ತದೆ. ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ ನೆಕ್ಲೇಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 116