ಕರಾವಳಿಸ್ಥಳೀಯ

ಸವಣೂರು: ಕೆನರಾ ಬ್ಯಾಂಕ್  ವಿರುದ್ಧ ಪ್ರತಿಭಟನೆ!!

ಸವಣೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೇವಾ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಬ್ಯಾಂಕ್ ಮುಂಭಾಗ ಗ್ರಾಹಕರಿಂದ ನ.4ರಂದು ಪ್ರತಿಭಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಸವಣೂರು : ಸವಣೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೇವಾ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಬ್ಯಾಂಕ್ ಮುಂಭಾಗ ಗ್ರಾಹಕರಿಂದ ನ.4ರಂದು ಪ್ರತಿಭಟನೆ ನಡೆದಿದೆ.

ಸವಣೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಲವು ವರ್ಷಗಳಿಂದ ಸರಿಯಾದ ಸೇವೆ ದೊರಕದೆ ಗ್ರಾಹಕರು ಪರದಾಡುವಂತಾಗಿದೆ. ಹಲವಾರು ಬಾರಿ ಬ್ಯಾಂಕ್‌ನ ಶಾಖಾಧಿಕಾರಿಗಳು, ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಸೇವೆಯಲ್ಲಿ ಯಾವುದೇ ಸುಧಾರಣೆ ಆಗಿರುವುದಿಲ್ಲ. ಹಿರಿಯ ಗ್ರಾಹಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸವಣೂರು ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಗುಣಮಟ್ಟದ, ಗ್ರಾಹಕ ಸ್ನೇಹಿ ಸೇವೆಯಲ್ಲಿ ಒದಗಿಸುವಂತೆ ಆಗ್ರಹಿಸಲಾಯಿತು

SRK Ladders

ಸವಣೂರು ಕೆ.ಸೀತಾರಾಮ ರೈ,ರಾಕೇಶ್ ರೈ ಕೆಡೆಂಜಿ,ಮಹೇಶ್ ಕೆ.ಸವಣೂರು, ಗಿರಿಶಂಕರ ಸುಲಾಯ,ಎಂ.ಎ.ರಫೀಕ್,ಸುರೇಶ್ ರೈ ಸೂಡಿಮುಳ್ಳು,ಅಶ್ವಿನ್ ಎಲ್ ಶೆಟ್ಟಿ ಭಂಡಾರಿ ಮನವಿ ಪತ್ರ ವಾಚಿಸಿದರು. ಮಾತನಾಡಿದರು.ಸಚಿನ್

ಬಳಿಕ ಬ್ಯಾಂಕಿನ ಅಧಿಕಾರಿಗಳು ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ಸಮಸ್ಯೆ ಸರಿಪಡಿಸುವ ಕುರಿತು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. 15ದಿನಗಳೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಬೃಹತ್ ಹೋರಾಟ ನಡೆಸುವುದಾಗಿ ಗ್ರಾಹಕರು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3