ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್, ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಕೆಂಗೇರಿ ಬಳಿಯ ಬಿಜಿಎಸ್ ಗೈನಿಗಲ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಈಗಾಗಲೇ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಇಂದು ಅವರ ವೈದ್ಯುಕೀಯ ಪರೀಕ್ಷೆಯ ವರದಿ ವೈದ್ಯರ ಕೈ ಸೇರಲಿದೆ ಎಂದು ಹೇಳಲಾಗುತ್ತಿದೆ.
ಇನ್ನು, ನಟ ದರ್ಶನ್ ಚಿಕಿತ್ಸೆ ಬಗ್ಗೆ ಗೌಪ್ಯತೆ ಕಾಪಾಡುವಂತೆ ಪತ್ನಿ ವಿಜಯಲಕ್ಷ್ಮೀ, ಆಸ್ಪತ್ರೆ ವೈದ್ಯರಿಗೆ ಪರ್ಸನಲ್ ಆಗಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯಂತರ ಜಾಮೀನು ಪಡೆದು ಹೊರಬಂದ ದರ್ಶನ್ ಇದೀಗ ವೈದ್ಯರ ಸುಪರ್ದಿಗೆ ಜಾರಿದ್ದಾರೆ. ಸದ್ಯ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ನಟ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ವೈದ್ಯರ ಅಬ್ಬರ್ವೇಷನ್ನಲ್ಲಿರುವ ದಾಸನಿಗೆ ಒಟ್ಟು 7 ಟೆಸ್ಟನ್ನು ಮಾಡಲಾಗಿದೆ.
• ಸ್ಕ್ಯಾನಿಂಗ್ ಇಸಿಜಿ ಹಾಗೂ ಟ್ರೆಡ್ ಮಿಲ್ ಟೆಸ್ಟ್
• ಲಿವರ್ ಫಂಕ್ಷನ್ ಟೆಸ್ಟ್, ರೀನಲ್ ಫಂಕ್ಷನ್ ಟೆಸ್ಟ್
• ಯೂರಿನ್ ಟೆಸ್ಟ್, ಬ್ಲಡ್ ಪ್ರೆಷರ್, ಶುಗರ್ ಟೆಸ್ಟ್
ಇವತ್ತು ಈ ಎಲ್ಲಾ ಪರೀಕ್ಷೆಗಳ ವರದಿ ವೈದ್ಯರ ಕೈ ಸೇರಿಲಿದ್ದು, ಎನ್‌ಒಸಿ ಬಂದ ಬಳಿಕ ಮುಂದೆ ಏನು ಚಿಕಿತ್ಸೆ ಕೋಡಬೇಕೆಂಬ ಬಗ್ಗೆ ವೈದ್ಯರು ನಿರ್ಧಾರ ಮಾಡಲಿದ್ದಾರೆ. ನುರಿತ ನರರೋಗ ತಜ್ಞ ಡಾ. ನವೀನ್ ಅಪ್ಪಾಜಿಯವರು, ಮೂಳೆ ರೋಗ ತಜ್ಞರು, ಹೃದ್ರೋಗ ತಜ್ಞರು, ಮೂತ್ರಪಿಂಡ ತಜ್ಞರು, ಜನರಲ್ ಫಿಸಿಶಿಯನ್, ಲ್ಯಾಬ್ ಬಯೋ ಕೆಮಿಸ್ಟ್ ಸೇರಿದಂತೆ 7 ಜನ ನುರಿತ ವೈದ್ಯರು ದರ್ಶನ್ ಗೆ ಚಿಕಿತ್ಸೆ ನೀಡಲಿದ್ದಾರೆ.