ಕಡಬ: ಅನಾರೋಗ್ಯದ ಹಿನ್ನೆಲೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ವೇಳೆ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ
ನ.2ರ ಶನಿವಾರ ನಡೆದಿದೆ.
ಕಡಬ ತಾಲೂಕಿನ ಕರ್ಮಾಯಿ ನಿವಾಸಿ ಜಾರ್ಜ್ ಎಂಬವರ ಪುತ್ರ ಜೈಸನ್ ಜಾರ್ಜ್ (29) ಮೃತಪಟ್ಟವರು.
ಮೃತ ಜೈಸನ್ ತಂದೆ, ತಾಯಿ, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.