Gl harusha
ಕರಾವಳಿಸ್ಥಳೀಯ

ನರಿಮೊಗ್ರು: ಟೈಲರಿಂಗ್ ತರಬೇತಿ  ಸಮಾರೋಪ, ಸನ್ಮಾನ

ದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶ್ರೀ(ರಿ) ನರಿಮೊಗರು ಇದರ ಜಂಟಿ ಆಶ್ರಯದಲ್ಲಿ  ದಿನಾಂಕ. 29.10.2024ರಂದು ಹೊಲಿಗೆ ತರಬೇತಿ ಕಾರ್ಯಗಾರ  ಸಮಾರೋಪ ಸಮಾರಂಭ 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು (ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆ), ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಎನ್ ಆರ್ ಎಲ್ ಎಂ ತಾಲೂಕು ಅಭಿಯಾನ ನಿರ್ವಹಣಾ ಘಟಕ ಪುತ್ತೂರು, ಗ್ರಾಮ ಪಂಚಾಯತ್ ನರಿಮೊಗರು ಮತ್ತು ಶ್ರೀ ದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ನರಿಮೊಗರು ಇದರ ಜಂಟಿ ಆಶ್ರಯದಲ್ಲಿ ಅ. 29ರಂದು ನರಿಮೊಗರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಹೊಲಿಗೆ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಜರುಗಿತು.

srk ladders
Pashupathi
Muliya

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ಶುಭ ಹಾರೈಸಿದರು. 

ಕಾರ್ಯಗಾರದ ಬಗ್ಗೆ ಮಾತನಾಡಿದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಶ್ವನಾಥ ಶೆಟ್ಟಿ, ಎಲ್ಲಾ ಶಿಬಿರಾರ್ಥಿಗಳು ಸ್ವ ಉದ್ಯೋಗ ಮಾಡಬೇಕು ಎಂದು ಹಿತನುಡಿದರು.

ಮುಖ್ಯ ಅತಿಥಿಗಳಾಗಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಜೀವನ್ ಕೊಲ್ಯ  ಮಾತನಾಡಿ, ಕಾರ್ಯಗಾರದ ನಿಯಮ ಯೋಜನೆ ಹಾಗೂ ಸ್ವ ಉದ್ಯೋಗಕ್ಕೆ ಸಿಗುವ ಬ್ಯಾಂಕ್ ಸೌಲಭ್ಯ ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು., ಕಾರ್ಯಕ್ರಮದ ಬಗ್ಗೆ, ಸಂಜೀವಿನಿ ಯೋಜನೆಯ ಬಗ್ಗೆ ವಿವರವಾಗಿ ತಿಳಿಸಿದರು.

ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಸುಧಾಕರ ಕುಲಾಲ್ ಶುಭಾಶಯ ಕೋರಿದರು.

ದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅದ್ಯಕ್ಷೆ ಪೂರ್ಣಿಮ, ತರಬೇತುದಾರೆ ಪ್ರೀತಿ ಆಚಾರ್ಯ, ಕೃಷಿಯೇತರ ಚಟುವಟಿಕೆಯ ತಾಲೂಕು ವ್ಯವಸ್ಥಾಪಕಿ ನಳಿನಿ ಉಪಸ್ಥಿತರಿದ್ದರು.

ತರಬೇತಿದಾರರದ ಪ್ರೀತಿ ಆಚಾರ್ಯ ಅವರಿಗೆ  ಶಿಬಿರಾರ್ಥಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.

ಸ್ಥಳೀಯ ಸಂಪನ್ಮೂಲ ವ್ಯಕ್ತಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು.

ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರರು ಅನುರಾಧ ಪ್ರಭು ಸ್ವಾಗತಿಸಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಬೇಬಿ ವಂದಿಸಿದರಿ. ಕಾರ್ಯಕ್ರಮದಲ್ಲಿ ಸಂಜೀವಿನಿ ಸದಸ್ಯರು, ಒಕ್ಕೂಟದ ಎಲ್ಲಾ ಪದಾಧಿಕಾರಿಯವರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳು ಹಾಜರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ