ರಾಜ್ಯ ವಾರ್ತೆಸಿನೇಮಾಸ್ಥಳೀಯ

ಸೂಪರ್ ಸ್ಟಾರ್ ಪಕ್ಷದ ಚೊಚ್ಚಲ ರಾಜ್ಯ ಸಮಾವೇಶ!!  ಅಧಿಕೃತ ರಾಜಕೀಯ ಪ್ರವೇಶಕ್ಕೆ ಸಾಕ್ಷಿಯಾದ ರಾಜ್ಯ – ಹೊರರಾಜ್ಯದ ಅಭಿಮಾನಿಗಳು!!

ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಭಾನುವಾರ ಅಧಿಕೃತವಾಗಿ ರಾಜಕೀಯ ಅಖಾಡ ಪ್ರವೇಶಿಸಿದರು. ಚೆನ್ನೈನಿಂದ 150 ಕಿ.ಮೀ.ದೂರದಲ್ಲಿರುವ ವಿಕ್ರಂವಾಡಿಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲಿ ಬೃಹತ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ರಂಗಕ್ಕೆ ತನ್ನ ಪ್ರವೇಶವನ್ನು ವಿಜಯ್ ಅವರು ಹಾವಿನೊಂದಿಗೆ ಆಟವಾಡುವ ಮಗುವಿಗೆ ಹೋಲಿಸಿದರು.”ರಾಜಕೀಯಕ್ಕೆ ನಾವು ಹಸುಗೂಸುಗಳೆಂದು ಕೆಲವರು ಹೇಳುತ್ತಾರೆ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ದಳಪತಿ  ವಿಜಯ್ ಭಾನುವಾರ ಅಧಿಕೃತವಾಗಿ ರಾಜಕೀಯ ಅಖಾಡ ಪ್ರವೇಶಿಸಿದರು. ಚೆನ್ನೈನಿಂದ 150 ಕಿ.ಮೀ.ದೂರದಲ್ಲಿರುವ ವಿಕ್ರಂವಾಡಿಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲಿ ಬೃಹತ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ರಂಗಕ್ಕೆ ತನ್ನ ಪ್ರವೇಶವನ್ನು ವಿಜಯ್ ಅವರು ಹಾವಿನೊಂದಿಗೆ ಆಟವಾಡುವ ಮಗುವಿಗೆ ಹೋಲಿಸಿದರು.”ರಾಜಕೀಯಕ್ಕೆ ನಾವು ಹಸುಗೂಸುಗಳೆಂದು ಕೆಲವರು ಹೇಳುತ್ತಾರೆ. ಆದರೆ ನಾವು ರಾಜಕೀಯವೆಂಬ ಹಾವಿನೊಂದಿಗೆ ಆತ್ಮವಿಶ್ವಾಸದೊಂದಿಗೆ ಆಡುತ್ತಿರುವ ಮಕ್ಕಳು ನಾವು. ರಾಜಕೀಯವೆಂಬ ಹಾವನ್ನು ನಾವು ನಿರ್ಭೀತಿಯಿಂದ ಆದರೆ ಅಷ್ಟೇ ಗಂಭೀರತೆ ಹಾಗೂ ಮುಗುಳ್ಳಗೆಯೊಂದಿಗೆ ನಿಭಾಯಿಸಲಿದ್ದೇವೆ. ಪ್ರಸಕ್ತ ಪ್ರಚಲಿತದಲ್ಲಿರುವ ರಾಜಕಾರಣಿಗಳ ಭಾಷಣದ ಶೈಲಿಯನ್ನು ಟೀಕಿಸಿದ ಅವರು, ವಿನಾಕಾರಣ ದೂಷಿಸುವುದನ್ನು ಬಿಟ್ಟು ನೇರವಾಗಿ ವಿಷಯಕ್ಕೆ ಬರುವುದೇ ನಮ್ಮ ಪಕ್ಷದ ನಿಲುವಾಗಿದೆ ಎಂದರು.

” ಪ್ರತಿಯೊಂದು ಸಂಗತಿಯೂ ಬದಲಾಗುತ್ತಲೇ ಇರುವಾಗ ರಾಜಕಾರಣವೂ ಬದಲಾಗಬೇಕಾಗುತ್ತದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಮಾತ್ರವೇ ಪ್ರಗತಿ ಹೊಂದಿದರೇ ಸಾಕೇ? ರಾಜಕೀಯವು ಕೂಡಾ ಬದಲಾವಣೆ ಹಾಗೂ ಸುಧಾರಣೆಯನ್ನು ಕಾಣುವುದು ಬೇಡವೇ?” ಎಂದು ಪ್ರಶ್ನಿಸಿದರು. ಇತರ ರಾಜಕಾರಣಿಗಳನ್ನು ದೂಷಿಸುತ್ತಾ ಕಾಲಹರಣ ಮಾಡಲು ತಾನು ರಾಜಕೀಯಕ್ಕೆ ಬಂದಿಲ್ಲ. ಆದರೆ ಅವರ ನಡವಳಿಕೆಗಳ ಬಗ್ಗೆ ಕುರುಡಾಗಿಯೂ ವರ್ತಿಸಲಾರೆ ಎಂದರು.

“ನಾನು ಇತಿಹಾಸವನ್ನು ನೆನಪಿಸುತ್ತಾ ಅಥವಾ ಅಂಕಿಅಂಶಗಳನ್ನು ನೀಡುತ್ತಾ ಗಂಟೆಗಟ್ಟಲೆ ಮಾತನಾಡುವುದಿಲ್ಲ. ಚಿಕ್ಕದಾಗಿ ಹಾಗೂ ಚೊಕ್ಕದಾಗಿ ಮಾತನಾಡುವುದು ಇಲ್ಲಿ ಮುಖ್ಯವಾದುದು. ಸಮಸ್ಯೆಯೇನು ಮತ್ತು ಅದಕ್ಕೆ ಪರಿಹಾರವೇನು ಎಂಬುದನ್ನು ನಮಗೆ ವಿವರಿಸಲು ಸಾಧ್ಯವಾದರೆ, ಜನತೆಗೆ ಅದು ಧಾರಾಳವಾಗಿ ಸಾಕಾಗುತ್ತದೆ ಎಂದು ತಮಿಳು ಚಿತ್ರರಂಗದಲ್ಲಿ ‘ದಳಪತಿ’ ಎಂದೇ ಖ್ಯಾತರಾದ ವಿಜಯ್ ಹೇಳಿದು.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜನರು ಬಹುಮತ ನೀಡುವ ಮೂಲಕ ಟಿ.ವಿ.ಕೆಯನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಬಹುಮತ ಬಾರದಂತ ರಾಜಕೀಯ ಪರಿಸ್ಥಿತಿ ಉದ್ಭವಿಸಿದಾಗ ಮೈತ್ರಿ ಬಯಸುವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಹೇಳುವುದರೊಂದಿಗೆ ದಳಪತಿ ವಿಜಯ್ ತಮ್ಮ ಮಾತು ಮುಗಿಸಿದರು. ಸಮಾವೇಶಕ್ಕೆ ತಮಿಳುನಾಡು ಮತ್ತು ನೆರೆ ರಾಜ್ಯಗಳಿಂದ ಸುಮಾರು 3 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಮತ್ತು ಅಭಿಮಾನಿಗಳು ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಭಾರೀ ಸಂಖ್ಯೆಯ ಜನ ಸೇರುವ ನಿರೀಕ್ಷೆಯಿದ್ದುದರಿಂದ ಭದ್ರತಾ ಕರ್ತವ್ಯಕ್ಕಾಗಿ ಸ್ಥಳದಲ್ಲಿ 600ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪಕ್ಷದ ಸಮಾವೇಶ ಸ್ಥಳದ ಪ್ರವೇಶದ್ವಾರವನ್ನು ಐತಿಹಾಸಿಕ ಸೈಂಟ್ ಜಾರ್ಜ್ ಕೋಟೆಯ ಮಾದರಿಯಲ್ಲಿ ನಿರ್ಮಿಸಲಾಗಿತ್ತು. 250 ಎಕರೆ ಹೆಚ್ಚುವರಿ ಜಮೀನಿನಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು.  ಟಿವಿಕೆ ಪಕ್ಷದ 3 ಲಕ್ಷಕ್ಕೂ ಅಧಿಕ ಬೆಂಬಲಿಗರಲ್ಲದೆ, ನೆರೆಯ ಕೇರಳ,ಕರ್ನಾಟಕ, ಆಂಧ್ರಪ್ರದೇಶಗಳಿಂದಲೂ ವಿಜಯ್ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4