ಕರಾವಳಿಸ್ಥಳೀಯ

ಅಡುಗೆ ಕೋಣೆಗೆ ನುಗ್ಗಿದ ಚಿರತೆ, ಪ್ರಾಣಾಪಾಯದಿಂದ ಪಾರದ ಮನೆಮಂದಿ.!

ಮನೆಯ ಅಡುಗೆ ಕೋಣೆಗೆ ಚಿರತೆಯೊಂದು ನುಗ್ಗಿದ ಘಟನೆ  ಮುಲ್ಕಿಯಲ್ಲಿ ನಡೆದಿದೆ.ಮುಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಮನೆಯ ಅಡುಗೆ ಕೋಣೆಗೆ ಚಿರತೆಯೊಂದು ನುಗ್ಗಿದ ಘಟನೆ  ಮುಲ್ಕಿಯಲ್ಲಿ ನಡೆದಿದೆ.ಮುಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದೆ.

ಈ ವೇಳೆ ನಾಯಿ ಬೊಗಳಲು ಆರಂಭಿಸಿದ್ದು, ಮನೆಮಂದಿ ಚಿರತೆ ನೋಡಿ ಬೆಚ್ಚಿಬಿದ್ದಿದ್ದಾರೆ.

SRK Ladders

ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿ ಸುಮಾರು 5 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಬೋನಿನೊಳಗೆ ಬಿದ್ದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3