ದಕ್ಷಿಣ ಕನ್ನಡ ತಮಿಳು ಸೇವಾ ಸಂಘ ಸುಳ್ಯ ಇದರ ವತಿಯಿಂದ ಹೋಟೆಲ್ ಸದರ್ನ್ ರೆಸಿಡೆನ್ಸಿ, ಸುಳ್ಯ ಇಲ್ಲಿ ಆ.18ರಂದು 2023-24ನೇ ಸಾಲಿನ ಎಸ್ಸಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.
ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ ಅವರನ್ನು ಸನ್ಮಾನಿಲಾಯಿತು. ಇವರು ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಚಾರ್ವಾಕ ಗ್ರಾಮದ ಪಾಲ್ತಿಲ ಕುಮಾರ್ ಮತ್ತು ಸರೋಜಿನಿ ದಂಪತಿ ಪುತ್ರ. ಇವರ ಪ್ರಸಕ್ತ ಗಾಯನ ,ಸಾಹಿತ್ಯ ಮತ್ತು ಹಲವಾರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.