ರಾಜ್ಯ ವಾರ್ತೆಸ್ಥಳೀಯ

ರಾಜ್ಯಾದ್ಯಂತ ಟ್ರೆಕ್ಕಿಂಗ್ ಸ್ಥಳಗಳಿಗೆ ನಿರ್ಬಂಧ!! ಅರಣ್ಯ ಇಲಾಖೆಯಿಂದ ಚಾರಣ ಪ್ರಿಯರಿಗೆ ಶಾಕ್! ಯಾಕಾಗಿ ಚಾರಣಕ್ಕೆ ನಿರ್ಬಂಧ: ಇಲ್ಲಿ ಓದಿ!!

ಪ್ರಕೃತಿ ಸೊಬಗು ಹಾಗೂ ಚಾರಣಕ್ಕೆ ಖ್ಯಾತಿಯಾಗಿರುವ ಸ್ಕಂದಗಿರಿ, ಕೈವಾರಬೆಟ್ಟ, ಮಾಕಳಿದುರ್ಗ, ಅಂತರಗಂಗೆ, ಸಾವನದುರ್ಗ, ಬಿದರುಕಟ್ಟೆ, ರಾಮದೇವರಬೆಟ್ಟ, ಚಿನಾಗ್‌ಬೆಟ್ಟ, ಸಿದ್ದರಬೆಟ್ಟ ಸೇರಿದಂತೆ ರಾಜ್ಯಾದ್ಯಂತ ಇರುವ 21ಕ್ಕೂ ಹೆಚ್ಚು ಚಾರಣ ಸ್ಥಳಗಳಿಗೆ ರಾಜ್ಯ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪ್ರಕೃತಿ ಸೊಬಗು ಹಾಗೂ ಚಾರಣಕ್ಕೆ ಖ್ಯಾತಿಯಾಗಿರುವ ಸ್ಕಂದಗಿರಿ, ಕೈವಾರಬೆಟ್ಟ, ಮಾಕಳಿದುರ್ಗ, ಅಂತರಗಂಗೆ, ಸಾವನದುರ್ಗ, ಬಿದರುಕಟ್ಟೆ, ರಾಮದೇವರಬೆಟ್ಟ, ಚಿನಾಗ್‌ಬೆಟ್ಟ, ಸಿದ್ದರಬೆಟ್ಟ ಸೇರಿದಂತೆ ರಾಜ್ಯಾದ್ಯಂತ ಇರುವ 21ಕ್ಕೂ ಹೆಚ್ಚು ಚಾರಣ ಸ್ಥಳಗಳಿಗೆ ರಾಜ್ಯ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ.

ರಾಜ್ಯಾದ್ಯಂತ ತಾತ್ಕಾಲಿಕವಾಗಿ ಚಾರಣಕ್ಕೆ ತಡೆ
ಚಾರಣದ ಟಿಕೆಟ್ ಬುಕಿಂಗ್ ಇಕೋ ಟೂರಿಸಂ ಮಾಡುತ್ತಿತ್ತು. ಇದೀಗ ಇಕೋ ಟೂರಿಸಂ ಬದಲು ಅರಣ್ಯ ಇಲಾಖೆ ಚಾರಣ ನಿರ್ವಹಣೆ ಮಾಡಲು ಮುಂದಾಗಿದೆ. ಇದರಿಂದ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗಸ್ಟ್1, 2024 ರಿಂದ ತಾತ್ಕಾಲಿಕವಾಗಿ ಚಾರಣ ತಡೆಹಿಡಿಯಲಾಗಿದೆ ಎಂದು ಚಿಕ್ಕಬಳ್ಳಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.

SRK Ladders

ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಆಯ್ದ ಪ್ರಕೃತಿ ಸೊಬಗಿನ ತಾಣಗಳನ್ನು ಗುರುತಿಸಿ, ಪ್ರಕೃತಿ ಪ್ರಿಯರು ಹಾಗೂ ಸಾಹಸ ಚಾರಣಿಗರ ಅನುಕೂಲಕ್ಕೆಂದು ರಾಜ್ಯ ಸರ್ಕಾರ ಪರಿಸರ ಪ್ರವಾಸೋದ್ಯಮ ಮಂಡಳಿಯನ್ನು ನಿರ್ಮಿಸಿ, ಅದರಡಿ 20ಕ್ಕೂ ಹೆಚ್ಚು ಅಚ್ಚುಮೆಚ್ಚಿನ ಚಾರಣ ಸ್ಥಳಗಳನ್ನು ಮಂಡಳಿಯ ನಿರ್ವಹಣೆಗೆ ಸೂಚಿಸಿತ್ತು.

ಗೋಲ್ ಮಾಲ್ ಆರೋಪ
ಇನ್ನು ರಾಜ್ಯಾದ್ಯಂತ ಇರುವ 21ಕ್ಕೂ ಹೆಚ್ಚು ಚಾರಣ ಸ್ಥಳಗಳಿಗೆ ಆನ್‌ಲೈನ್ ಟಿಕೆಟ್ ಬುಕ್ ಮಾಡಿಕೊಂಡು, ಚಾರಣಕ್ಕೆ ಅಧಿಕೃತವಾಗಿ ಅವಕಾಶ ಕಲ್ಪಿಸಲು ಕರ್ನಾಟಕ ಅರಣ್ಯ ಪ್ರವಾಸೋದ್ಯಮ ಮಂಡಳಿ (ಇಕೋ ಟೂರಿಸಂ)ಗೆ ನೀಡಲಾಗಿತ್ತು. ಇದು ಚಾರಣ ಎಕೋ ಟೂರಿಸಂ ಹಾಗೂ ರಾಜ್ಯ ಸರ್ಕಾರಕ್ಕೆ ಲಾಭದಾಯಕ ಉದ್ಯಮವಾಗಿತ್ತು. ಆದರೆ, ಇಕೋ ಟೂರಿಸಂ ಮಂಡಳಿಯ ಕೆಲವು ಸಿಬ್ಬಂದಿಗಳ ಕುತಂತ್ರದಿಂದ ಆನ್‌ಲೈನ್‌ನಲ್ಲೆ ನಕಲಿ ಟಿಕೆಟ್ ಬುಕ್ಕಿಂಗ್ ಮಾಡಿ ಲಕ್ಷ-ಲಕ್ಷ ಹಣ ದುರುಪಯೋಗ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4