Gl
ಧಾರ್ಮಿಕಸ್ಥಳೀಯ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಗದ್ದೆ ಬೇಸಾಯಕ್ಕೆ ಚಾಲನೆ | ಬೇಸಾಯದಿಂದ ಪೂರ್ತಿ ಅಕ್ಕಿ ದೇವರಿಗೆ ಅರ್ಪಣೆಯಾಗುವ ತನಕ ವ್ಯವಸ್ಥಿತವಾಗುವ ಕಲ್ಪನೆ: ಅಶೋಕ್ ಕುಮಾರ್ ರೈ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಸಾಂಪ್ರದಾಯಿಕ ಗದ್ದೆ ಬೇಸಾಯ ಉಲುಮೆಗೆ ಆ. 5ರಂದು ಚಾಲನೆ ನೀಡಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಗದ್ದೆ ಬೇಸಾಯ ಉಲುಮೆಗೆ ಆ. 5ರಂದು ಚಾಲನೆ ನೀಡಲಾಯಿತು.

rachana_rai
Pashupathi
akshaya college

pashupathi

ಆರಂಭದಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿದರು. ಶಾಸಕ ಅಶೋಕ್ ಕುಮಾರ್ ರೈ ಅವರು ತೆಂಗಿನ ಕಾಯಿ ಒಡೆದು ಟ್ಯಾಕ್ಟರ್ ಮೂಲಕ ಗದ್ದೆ ಉಲುಮೆಗೆ ಚಾಲನೆ ನೀಡಿದರು.

ಬೇಸಾಯದಿಂದ ಪೂರ್ತಿ ಅಕ್ಕಿ ದೇವರಿಗೆ ಅರ್ಪಣೆಯಾಗಲಿ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಪುಣ್ಯದ ಗದ್ದೆಯಲ್ಲಿ ಭಕ್ತಾಧಿಗಳ ಆಶಯದಂತೆ ಭತ್ತದ ಬೇಸಾಯ ಆರಂಭಿಸಿದ್ದೇವೆ. ಇಲ್ಲಿ ಕೇವಲ ಆರಂಭ ಮಾಡುವುದು ಮಾತ್ರವಲ್ಲ ವ್ಯವಸ್ಥಿತವಾಗಿ ಮಾಡಬೇಕು. ಇದು ಮಾದರಿಯಾಗಬೇಕು. ಯಾಕೆಂದರೆ ಕಳೆದ ವರ್ಷವು ನಾನು ಬೇಸಾಯದ ಆರಂಭಕ್ಕೆ ಬಂದಿದ್ದೆ.‌ಆದರೆ ಒಂದೂವರೆ ತಿಂಗಳಾದ ಬಳಿಕ ಇದು ಭತ್ತ ಕೃಷಿಯ, ಕಸವಾ ಎಂದು ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಈ ಭಾರಿ ಶ್ರೀ ಕ್ಷೇ ಧ ಗ್ರಾ ಯೋಜನೆಯವರನ್ನು ಮತ್ತು ಕೃಷಿ ಇಲಾಖೆಯವರನ್ಬು ಜೋಡಿಸಿಕೊಂಡಿದ್ದೆವೆ. ಭತ್ತ ಬಿತ್ತನೆ ಮಾಡುವುದು ಮಾತ್ರವಲ್ಲ, ಈ ಬೇಸಾಯದಿಂದ ಪೂರ್ತಿ ಅಕ್ಕಿ ದೇವರಿಗೆ ಅರ್ಪಣೆಯಾಗುವ ತನಕ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕೆಂಬ ಕಲ್ಪಣೆ ಇದೆ. ಉತ್ತಮ ರೀತಿಯಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಮಾಡಿದ್ದೆನೆ. ಹಾಗಾಗಿ ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಶ್ರೀ ಕ್ಷೇ ಧ ಗ್ರಾ ಯೋ, ಕೃಷಿ ಇಲಾಖೆಯವರು ಮತ್ತು ಭಕ್ತಾದಿಗಳು ಸೇರಿಕೊಂಡು ವ್ಯವಸ್ಥಿತವಾಗಿ ಈ ಭಾರಿ ಭತ್ತ ಕೃಷಿ ಮಾಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ದೇವಳದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್ ಕೆ ಜಗನ್ನಿವಾಸ ರಾವ್, ಸುದೇಶ್ ಕುಮಾರ್, ದಿನೇಶ್ ಪಿ ವಿ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಉದ್ಯಮಿ ವಿನಯ, ಶ್ರೀ ಕ್ಷೇ ಧ ಗ್ರಾ. ಯೋಜನಾಧಿಕಾರಿ ಶಶಿಧರ್, ಕೃಷಿ ವೀಭಾಗದ ಯೋಜನಾಧಿಕಾರಿಗಳಾ್ ಮೋಹನ್ ಮತ್ತು ಉಮೇಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್‌ ಪಾಟೀಲ್‌ ಅವರಿಗೆ ಪುತ್ತೂರು ವಕೀಲ ಸಂಘದಿಂದ ಸ್ವಾಗತ, ಅಭಿನಂದನೆ

ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಪಾಟೀಲ್‌ ಅವರು ಜೂನ್‌ 26…

1 of 115