ಕರಾವಳಿಸ್ಥಳೀಯ

ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ! ಆಸ್ಪತ್ರೆ ಒಳಾಂಗಣಕ್ಕೆ ಆ್ಯಂಬುಲೆನ್ಸ್ ರೀತಿ ನುಗ್ಗಿದ ಬಸ್: ಚಾಲಕ – ನಿರ್ವಾಹಕರಿಗೆ ಶ್ಲಾಘನೆಯ ಮಹಾಪೂರ

ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ ದೊರಕಿದ ತಕ್ಷಣ, ಬಸ್ ನೇರವಾಗಿ ಆಸ್ಪತ್ರೆ ಒಳಾಂಗಣಕ್ಕೆ ನುಗ್ಗಿ ಚಿಕಿತ್ಸೆ ಕೊಡಿಸಿದ ಘಟನೆ ಮಂಗಳೂರಿನಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ ದೊರಕಿದ ತಕ್ಷಣ, ಬಸ್ ನೇರವಾಗಿ ಆಸ್ಪತ್ರೆ ಒಳಾಂಗಣಕ್ಕೆ ನುಗ್ಗಿ ಚಿಕಿತ್ಸೆ ಕೊಡಿಸಿದ ಘಟನೆ ಮಂಗಳೂರಿನಲ್ಲಿ ನಡೆಯಿತು.

13 F ರೂಟಿನ ಕೃಷ್ಣ ಪ್ರಸಾದ್ ಬಸ್ ಕೂಳೂರು ಮಾರ್ಗವಾಗಿ ಸಂಚರಿಸುತ್ತಿತ್ತು. ಇದ್ದಕ್ಕಿದ್ದಂತೆ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕಿನ ಸೂಚನೆ ಸಿಕ್ಕಿತು.
ತಕ್ಷಣವೇ ಬಸ್ ಆ್ಯಂಬುಲೆನ್ಸ್ ಅಗಿ ಬದಲಾಯಿತು. ಸುಮಾರು ಆರು ಕಿಲೋ ಮೀಟರ್ ದೂರವನ್ನು ಕೇವಲ ಆರು ನಿಮಿಷದಲ್ಲಿ ಬಸ್ ಕ್ರಮಿಸಿತು. ನೇರವಾಗಿ ಕಂಕನಾಡಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿದ ಬಸ್, ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ತುರ್ತು ಸಂದರ್ಭ ಮತ್ತೊಂದು ಆಲೋಚಿಸದೇ, ಆಸ್ಪತ್ರೆಯ ಅಪ್ಪಣೆಗೆ ಕಾಯದೇ ಮುಂದುವರಿದ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದ‌ರ್ ಹಾಗೂ ಮಹೇಶ್ ಪೂಜಾರಿ, ಸುರೇಶ್ ಅವರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3