ಕರಾವಳಿಸ್ಥಳೀಯ

ದ.ಕ. ಜಿಲ್ಲೆಗೆ ಡಿಶ್ ಪರಿಚಯಿಸಿದ್ದ ವೆಂಕಟ್ರಾಯ ಪೈ ನಿಧನ! | ಆ್ಯಂಟೆನಾದ ಬಳಿಕ ಚಾಲ್ತಿಗೆ ಬಂದ ದೊಡ್ಡ ಡಿಶ್’ನ ಡಿಸ್ಟ್ರಿಬ್ಯೂಷನ್ ಪಡೆದಿದ್ದ ಬಾಲಾಜಿ ಡಿಸ್ಟ್ರಿಬ್ಯೂಟರ್ ಸಂಸ್ಥೆ

ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಪೈ ಕಾಂಪೌಂಡ್ ಮಾಲಕ ವೆಂಕಟ್ರಾಯ ಪೈ (62 ವ.) ಆವರು ಅಲ್ಪಕಾಲದ ಆಸೌಖ್ಯದಿಂದ ಭಾನುವಾರ ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಪೈ ಕಾಂಪೌಂಡ್ ಮಾಲಕ ವೆಂಕಟ್ರಾಯ ಪೈ (62 ವ.) ಆವರು ಅಲ್ಪಕಾಲದ ಆಸೌಖ್ಯದಿಂದ ಭಾನುವಾರ ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೊದಲು ಚಾಲ್ತಿಯಲ್ಲಿದ್ದ ದೊಡ್ಡ ಡಿಶ್ ಅನ್ನು ದಕ್ಷಿಣ ಕನ್ನಡಕ್ಕೆ ಮೊದಲು ಪರಿಚಯಿಸಿದ್ದೇ ಇವರು ಮುನ್ನಡೆಸುತ್ತಿದ್ದ ಬಾಲಾಜಿ ಡಿಸ್ಟ್ರಿಬ್ಯೂಟರ್ ಸಂಸ್ಥೆ. ಆ್ಯಂಟೆನಾದಿಂದ ಟಿವಿಯಲ್ಲಿ ಒಂದು ಚಾನೆಲ್ ಮಾತ್ರ ನೋಡಲು ಸಾಧ್ಯವಿತ್ತು. ಆದರೆ ಡಿಶ್ ಚಾಲ್ತಿಗೆ ಬಂದ ಬಳಿಕ ಕೆಲವಾರು ಚಾನೆಲ್ ನೋಡಿ ಮನರಂಜಿಸಲು ಸಾಧ್ಯವಾಯಿತು. ದೊಡ್ಡ ಡಿಶ್ ಮರೆಗೆ ಸರಿಯುತ್ತಿದ್ದಂತೆ, ಡಿಶ್ ಟಿವಿಯ ಡಿಸ್ಟ್ರಿಬ್ಯೂಷನ್ ಶಿಪ್ ಪಡೆದುಕೊಂಡು, ಸಂಸ್ಥೆಯನ್ನು ಮುನ್ನಡೆಸಿದ್ದರು.

SRK Ladders

ದಿ. ರಮಾನಂದ್ ಪೈ ಅವರ ಪುತ್ರ ವೆಂಕಟ್ರಾಯ ಪೈ ಅವರು ವೈಭವ್ ಕಟ್ಟಡದಲ್ಲಿ ಈ ಹಿಂದೆ ವೈಭವ್ ಎಲೆಕ್ಟ್ರೋನಿಕ್ಸ್, ಟಿ.ವಿ.ಎಸ್. ಬೈಕ್ ಶೋ ರೂಂ ಹಾಗೂ ಸೋಲಾರ್, ಇನ್ವರ್ಟರ್’ಗಳ ಡಿಸ್ಟ್ರಿಬ್ಯೂಟರ್ ಆಗಿಯೂ ಗುರುತಿಸಿಕೊಂಡಿದ್ದರು.

ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಟ್ರಸ್ಟಿ ಆಗಿಯೂ ಸೇವೆ ಸಲ್ಲಿಸಿದ್ದರು.

ಪತ್ನಿ ಗಾಯತ್ರಿ ವಿ. ಪೈ, ಇಬ್ಬರು ಪುತ್ರಿಯರಾದ ಪ್ರೀತಿ ಪಂಡಿತ್, ಆಶಾ ಮಲ್ಯ, ಅಳಿಯಂದಿರಾದ ಸೂರಜ್ ಪಂಡಿತ್, ಮಾಧವ್ ಮಲ್ಯ, ಸಹೋದರ ಬಾಲಕೃಷ್ಣ ಪೈ, ಸಹೋದರಿ ರಂಜಿತಾ ಶೆಣೈ ಅವರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3