ದೇಶಸ್ಥಳೀಯ

ಸಿಂಧುದುರ್ಗ ಕಾಡಿನಲ್ಲಿ ಪತ್ತೆಯಾದ ಅಮೆರಿಕ ಮಹಿಳೆ!! ಮರಕ್ಕೆ ಸರಪಳಿಯಲ್ಲಿ ಬಿಗಿದು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆ!!

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ( Sindhudurg district of Maharashtra) 50 ವರ್ಷದ ಮಹಿಳೆಯೊಬ್ಬರು (woman) ಕಾಡಿನಲ್ಲಿ ಮರಕ್ಕೆ ಸರಪಳಿಯಲ್ಲಿ ಕಟ್ಟಿಹಾಕಿರುವ ರೀತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ( Sindhudurg district of Maharashtra) 50 ವರ್ಷದ ಮಹಿಳೆಯೊಬ್ಬರು (woman) ಕಾಡಿನಲ್ಲಿ ಮರಕ್ಕೆ ಸರಪಳಿಯಲ್ಲಿ ಕಟ್ಟಿಹಾಕಿರುವ ರೀತಿಯಲ್ಲಿ ಪತ್ತೆಯಾಗಿದ್ದಾರೆ.

akshaya college

ಆಕೆಯ ಯುಎಸ್ ಪಾಸ್‌ಪೋರ್ಟ್‌ನ ( US passport) ಫೋಟೊಕಾಪಿ ಮತ್ತು ತಮಿಳುನಾಡು ವಿಳಾಸದೊಂದಿಗೆ ಆಧಾರ್ ಕಾರ್ಡ್ (Aadhaar card) ಸೇರಿದಂತೆ ಇತರ ದಾಖಲೆಗಳು ಆಕೆಯ ಬಳಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ವರದಿ ಮಾಡಿದ್ದಾರೆ.

ಶನಿವಾರ ಸಂಜೆ ಜಿಲ್ಲೆಯಿಂದ ಸರಿಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಮಹಿಳೆ ಅಳುತ್ತಿರುವುದು ಸ್ಥಳೀಯ ಕುರಿಗಾಹಿಗಳಿಗೆ ಕೇಳಿಬಂದಿತ್ತು. ಆಕೆ ಸರಪಳಿ ಸಿಲುಕಿಕೊಂಡು ಸಂಕಷ್ಟದಲ್ಲಿರುವುದನ್ನು ಕಂಡು ಕುರುಬರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಮಹಿಳೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಸಾವಂತವಾಡಿ ಮತ್ತು ಸಿಂಧುದುರ್ಗದ ಓರೋಸ್‌ನ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.

ಆಕೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ಷೀಣಿಸಿದ್ದ ಸ್ಥಿತಿಯಲ್ಲಿದ್ದ ಕಾರಣ, ಆಕೆಯನ್ನು ನಂತರ ಹೆಚ್ಚಿನ ಆರೈಕೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು. ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆಕೆಯ ಬಳಿ ಈ ಹಿಂದಿನ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಇದ್ದು, ಅದನ್ನು ಪರಿಶೀಲಿಸಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

ತಮಿಳುನಾಡು ವಿಳಾಸವಿರುವ ಆಧಾರ್ ಕಾರ್ಡ್ ಮತ್ತು ಆಕೆಯ ಅವಧಿ ಮುಗಿದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಪಾಸ್‌ಪೋರ್ಟ್‌ನ ಫೋಟೊಕಾಪಿ ಸೇರಿದಂತೆ ದೊರೆತ ದಾಖಲೆಗಳ ಆಧಾರದ ಮೇಲೆ ಮಹಿಳೆಯನ್ನು ಲಲಿತಾ ಕಯಿ ( Lalita Kayi) ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಆಕೆಯ ರಾಷ್ಟ್ರೀಯತೆಯನ್ನು ನಿರ್ಧರಿಸಲು ಪೊಲೀಸರು ಈ ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಹಿಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ. ಮಹಿಳೆಯ ಪ್ರಸ್ತುತ ಆರೋಗ್ಯ ಸ್ಥಿತಿ ಆತಂಕಕಾರಿಯಾಗಿರುವುದರಿಂದ ಪೊಲೀಸರಿಗೆ ಹೇಳಿಕೆ ಪಡೆಯಲು ಕಷ್ಟಸಾಧ್ಯವಾಗಿದೆ. ಮಹಿಳೆಯು ಒಂದೆರಡು ದಿನಗಳಿಂದ ಏನನ್ನೂ ತಿನ್ನದ ಕಾರಣ ಮತ್ತು ಪ್ರದೇಶದಲ್ಲಿ ಭಾರಿ ಮಳೆಯಿದ್ದ ಕಾರಣ ಆಕೆ ದುರ್ಬಲಳಾಗಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಕೆಯನ್ನು ಆ ಮರಕ್ಕೆ ಎಷ್ಟು ಸಮಯದಿಂದ ಕಟ್ಟಿ ಹಾಕಿದ್ದರೋ ಗೊತ್ತಿಲ್ಲ. ತಮಿಳುನಾಡು ಮೂಲದ ಆಕೆಯ ಪತಿ ಆಕೆಯನ್ನು ಅಲ್ಲಿ ಕಟ್ಟಿಹಾಕಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ತನಿಖೆಯ ಭಾಗವಾಗಿ ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳನ್ನು ತಮಿಳುನಾಡು, ಗೋವಾ ಮತ್ತು ಇತರ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಕೆಎಸ್ಸಾರ್ಟಿಸಿ ನೂತನ ಬಸ್ ಚಾಲಕ ನಿರ್ವಾಹಕರಿಗೆ ಸಂವಹನ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಬಸ್ ಚಾಲಕ ಮತ್ತು…

ಇಂದಿನಿಂದ ಪುತ್ತೂರು ಜೆಸಿಐನಿಂದ ಜೆಸಿ ಸಪ್ತಾಹ 2025 | ಸೆ. 14ರಂದು ಪುದ್ವಾರ್, ಸಾಂಸ್ಕೃತಿಕ ಕಾರ್ಯಕ್ರಮ, 15ರಂದು ಸಂಪನ್ನ

ಪುತ್ತೂರು: ಅಂತರಾಷ್ಟ್ರೀಯ ತರಬೇತಿ ಸಂಸ್ಥೆಯಾದ ಜೆಸಿಐ ಪುತ್ತೂರು ಘಟಕದ ವತಿಯಿಂದ ಸೆಪ್ಟೆಂಬರ್…

1 of 132