ಸ್ಥಳೀಯ

ಬಾಲಪ್ರತಿಭೆಯಿಂದ ನ್ಯೂಯಾರ್ಕ್ ನ ಪ್ರತಿಷ್ಠಿತ ಕಾರ್ನಗಿ ಹಾಲ್ ನಲ್ಲಿ ಸಂಗೀತ ಕಾರ್ಯಕ್ರಮ

ನಗರದ ದಿ ಇಂಟರ್ ನ್ಯಾಷನಲ್ ಸ್ಕೂಲ್, ಬೆಂಗಳೂರು (ಟಿಐಎಸ್‌ಬಿ) ಇಲ್ಲಿನ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ಪೊಲವರಪು ಸಾದ್ಯ ಅವರು ಜೂನ್ 23 ರಂದು ಅಮೆರಿಕಾದ ನ್ಯೂಯಾರ್ಕ್‌ನ ಕಾರ್ನೆಗೀ ಸಭಾಂಗಣದಲ್ಲಿ ತಮ್ಮ ಸಂಗೀತ ಪ್ರದರ್ಶನ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ನಗರದ ದಿ ಇಂಟರ್ ನ್ಯಾಷನಲ್ ಸ್ಕೂಲ್, ಬೆಂಗಳೂರು (ಟಿಐಎಸ್‌ಬಿ) ಇಲ್ಲಿನ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ಪೊಲವರಪು ಸಾದ್ಯ ಅವರು ಜೂನ್ 23 ರಂದು ಅಮೆರಿಕಾದ ನ್ಯೂಯಾರ್ಕ್‌ನ ಕಾರ್ನೆಗೀ ಸಭಾಂಗಣದಲ್ಲಿ ತಮ್ಮ ಸಂಗೀತ ಪ್ರದರ್ಶನ ನೀಡುತ್ತಿದ್ದಾರೆ.

ಭಾರತದಿಂದ ಈ ವಿಶ್ವ ವಿಖ್ಯಾತ ಸಭಾಂಗಣದಲ್ಲಿ ಪ್ರದರ್ಶನ ನೀಡುತ್ತಿರುವ ಏಕೈಕ ಭಾರತೀಯ ಎಂಬ ಹೆಮ್ಮೆಯ ಮೂಲಕ ನಗರಕ್ಕೆ ಪೊಲವರಪು ಸಾದ್ಯ ಕೀರ್ತಿ ತಂದಿದ್ದಾರೆ.

SRK Ladders

ದಿ ಅಮೇರಿಕನ್ ಪ್ರೊಟೆಜೆ ಅಂತರರಾಷ್ಟ್ರೀಯ ಸಂಗೀತ ಸ್ಪರ್ಧೆಯ ವಿಜೇತರ ಸಂಗೀತ ಪ್ರದರ್ಶನಕ್ಕೆ ವಿಶ್ವದ ನಾನಾ ಕಡೆಗಳಿಂದ ಆಯ್ಕೆಯಾದ 30 ಸಂಗೀತಗಾರರಲ್ಲಿ ಸಾಧ್ಯ ಒಬ್ಬರು. ಅವರು ಈ ಸ್ಪರ್ಧೆಯಲ್ಲಿ ಧ್ವನಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ನಗರದ ವೈದ್ಯ ದಂಪತಿ ಡಾ. ಸ್ವೈರಾ ರಾವ್ ಮತ್ತು ಸಿರಿ ಕೃಷ್ಣ ಅವರ ಪುತ್ರಿ ಸಾದ್ಯ 2024 ರಲ್ಲಿ ಈವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಂಗೀತ ಪ್ರಶಸ್ತಿಗಳು – ಬಹುಮಾನಗಳನ್ನು ಗೆದ್ದಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2