pashupathi
ರಾಜ್ಯ ವಾರ್ತೆಸ್ಥಳೀಯ

ಸೇವೆ ಬದುಕಿನ ಅವಿಭಾಜ್ಯ ಅಂಗ: ಸಂಸದ ಡಾ. ಸಿ ಎನ್ ಮಂಜುನಾಥ್

tv clinic
ಸೇವೆ ಬದುಕಿನ ಅವಿಭಾಜ್ಯ ಅಂಗ. ಸಮಾಜದ ಉನ್ನತಿಯೇ ನಮ್ಮ ಬದುಕಿನ ಗುರಿಯಾಗಬೇಕು ಎಂದು "ಹೃದಯವಂತ" ಪದ್ಮಶ್ರೀ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಸೇವೆ ಬದುಕಿನ ಅವಿಭಾಜ್ಯ ಅಂಗ. ಸಮಾಜದ ಉನ್ನತಿಯೇ ನಮ್ಮ ಬದುಕಿನ ಗುರಿಯಾಗಬೇಕು ಎಂದು “ಹೃದಯವಂತ” ಪದ್ಮಶ್ರೀ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ ಎನ್ ಮಂಜುನಾಥ್ ಹೇಳಿದರು.

akshaya college

ಬೆಂಗಳೂರಿನ ಕೆಂಗೇರಿಯ ಬೆಂಗಳೂರು ಹಾಸ್ಪಿಟಲ್ಸ್ ನ “ಸೇವಾ ಪಯಣದ” ಮೊದಲ ವಾರ್ಷಿಕೋತ್ಸವದ ಅಂಗಾವಾಗಿ ನಡೆದ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ವೈದ್ಯರಿಗೆ ಸಮಾಜದಲ್ಲಿ ಬಹಳ ಉನ್ನತ ಸ್ಥಾನವಿದೆ. ಈ ಸ್ಥಾನಮಾನಕ್ಕೆ ಕುಂದುಂಟಾಗದಂತೆ ನಾವು ಸೇವೆ ಸಲ್ಲಿಸಬೇಕು. ಬಡವರ, ಮಧ್ಯಮ ವರ್ಗದವರ ಕಣ್ಣಿರುವ ಒರೆಸುವ ಕೆಲಸವನ್ನು ನಾವು, ಆಸ್ಪತ್ರೆಗಳು ಮಾಡಬೇಕು,” ಎಂದು ಅವರು ತಿಳಿಸಿದರು.

ತಮ್ಮ ವೈದ್ಯಕೀಯ ಬದುಕಿನ ಹಲವಾರು ದೃಷ್ಟಾಂತಗಳನ್ನು ಹಂಚಿಕೊಂಡ ಅವರು, ಜನರ ಪ್ರೀತಿಯಷ್ಟು ಅಮೂಲ್ಯ ಸಂಗತಿ ಇನ್ನೊಂದಿಲ್ಲ ಎಂದು ತಿಳಿಸಿದರು.

ಬೆಂಗಳೂರು ಹಾಸ್ಪಿಟಲ್ಸ್, ಕೆಂಗೇರಿ, ಅತ್ಯಾಧುನಿಕ ಚಿಕಿತ್ಸೆ ದೊರೆಯುವಂತೆ ಮಾಡಲು ಒಂದು ವಿಶಿಷ್ಟ ಎಂದರಿಯನ್ನು ಅನುಸರಿಸುತ್ತಿದೆ. ಹೆಸರಾಂತ ಹೃದ್ರೋಗ ತಜ್ಞ ಮತ್ತು ಸಂಸದ “ಹೃದಯವಂತ” ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಮಾರ್ಗದರ್ಶನದಂತೆ ಆಸ್ಪತ್ರೆ ಉತ್ತಮ ಗುಣಮಟ್ಟದ ಹೃದಯ ಆರೈಕೆಯನ್ನು ಒದಗಿಸುತ್ತದೆ. ಇಷ್ಟೇ ಅಲ್ಲದೇ, ಈ ಆಸ್ಪತ್ರೆಯಲ್ಲಿ ಆಯಾ ವಿಭಾಗದ ವಿಶೇಷ ತಜ್ಞರೇ ತಮ್ಮ ವಿಭಾಗದ ನೇತೃತ್ವ ವಹಿಸಿಕೊಂಡು, ರೋಗಿಗಳಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿದ್ದಾರೆ. ಸುಮಾರು 35 ತಜ್ಞ ವೈದ್ಯರ ತಂಡ ಇಲ್ಲಿ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಖಾತರಿ ಪಡಿಸುತ್ತಾರೆ. ಇಲ್ಲಿ ಲಭ್ಯವಿರುವ 200 ಹಾಸಿಗೆಗಳಲ್ಲಿ, 20 ಹಾಸಿಗೆಗಳನ್ನು ಬಡ ರೋಗಿಗಳಿಗೆ ಮೀಸಲಿಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಅಮೇರಿಕಾದಲ್ಲಿ ಕಾಸ್ಮೆಟಿಕ್ಸ್ ಸರ್ಜನ್ ಆಗಿರುವ ಈ ಆಸ್ಪತ್ರೆಯ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಸುರಪಾನೇನಿ, ಆಸ್ಪತ್ರೆಯ ಸಿಇಒ ಡಾ. ಲಹರಿ ಸುರಪಾನೇನಿ (ಎಂ ಎಸ್ ಎಂ ಸಿ ಎಚ್) ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಅಭಿಷೇಕ್ ಮನ್ನೆಮ್‌, (ಎಂಎಸ್, ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ), ನಗರದ ಸಿಟಿ ಇನ್ಸ್ಟಿಟ್ಯೂಟ್ ಉಪಾಧ್ಯಕ್ಷ ಚಂದ್ರಶೇಖರ್ ಹಾಗು ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಆಸ್ಪತ್ರೆಯಲ್ಲಿ ಇಡೀ ದೇಶದಲ್ಲೇ ಮೊದಲು ಎನ್ನಬಹುದಾದ 640 ಸ್ಲೈಸ್ ಸಿಟಿ ಸ್ಕ್ಯಾನರ್ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಹೃದಯಾಘಾತಗಳನ್ನು ಬಹಳ ಮೊದಲೇ ಪತ್ತೆಹಚ್ಚಲು ಇದರಿಂದ ಸಾಧ್ಯವಿದೆ.

ಕಡಿಮೆ ವಿಕಿರಣ ಪ್ರಮಾಣವನ್ನು ಬಳಸಿಕೊಂಡು ಸಿಟಿ ಆಂಜಿಯೋ ಮಾಡುವ ಮೂಲಕ ಹೃದಯಾಘಾತವನ್ನು ಇದು ಬಹಳ ಮೊದಲೇ ಪತ್ತೆ ಹಚ್ಚುತ್ತದೆ. 3 ಟಿ ಎಂ ಆರ್ ಐ ಕೂಡಾ ಅತಿ ಹೆಚ್ಚಿನ ರೆಸಲ್ಯೂಷನ್ ಚಿತ್ರಗಳ ಮೂಲಕ ಅತ್ಯುತ್ತಮ ಮಾಹಿತಿಯನ್ನು ವೈದ್ಯರಿಗೆ ನೀಡುತ್ತದೆ.

ಆಸ್ಪತ್ರೆಯಲ್ಲಿ ಬಹು ಕ್ಯಾಥ್ ಲ್ಯಾಬ್‌ಗಳು ಇದ್ದು ಮತ್ತು ಪ್ರತಿಯೊಂದು ವಿಭಾಗವು ಉತ್ತಮ ಗುಣಮಟ್ಟದ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ.

ಡಾ ಸುರಪಾನೇನಿ ಅವರು ಟೆಕ್ಸಾಸ್‌ನ ಕ್ಯಾರೊಲ್‌ಟನ್‌ನಲ್ಲಿರುವ 200 ಹಾಸಿಗೆಗಳ ಅಕ್ಯೂಟ್ ಕೇರ್ ಆಸ್ಪತ್ರೆಯ ಅಧ್ಯಕ್ಷರಾಗಿದ್ದಾರೆ. ಈ ಆಸತ್ರೆಯು ವಿಶ್ವದ ಅತ್ಯುತ್ತಮ ಆಸ್ಪತ್ರೆಗಳಲ್ಲೊಂದು. ಅತ್ಯುತ್ತಮ ವೈದ್ಯರು- ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಈ ಆಸ್ಪತ್ರೆಯ ಹೆಗ್ಗಳಿಕೆ.

ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಮೊಣಕಾಲು ಶಸ್ತ್ರಚಿಕಿತ್ಸೆಗಳು, ಕಿಡ್ನಿ ಶಸ್ತ್ರಚಿಕಿತ್ಸೆ, ನರಶಸ್ತ್ರಚಿಕಿತ್ಸೆ ಹೀಗೆ ಎಲ್ಲ ರೀತಿಯ ಶಸ್ತ್ರ ಚಿಕಿತ್ಸೆಗಳಿಗೆ ಅಮೇರಿಕ ಹಾಗು ವಿದೇಶಗಳಿಂದ ಇಲ್ಲಿಗೆ ರೋಗಿಗಳು ಆಗಮಿಸುತ್ತಾರೆ. ಇದು ಆಸ್ಪತ್ರೆಯ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕ 9900002997


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 144